Bagalkote: ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ಗುಂಗು ಹಿಡಿಸಿದ ಸುದೀಪ್ ಅಭಿನಯದ ರಾರಾ ರಕ್ಕಮ್ಮ ಸಾಂಗ್!

ಈಗ ಎಲ್ಲಿ ನೋಡಿದರೂ ಸಾಕು ರಾರಾ ರಕ್ಕಮ್ಮ ಸಾಂಗ್‌ನದ್ದೇ ಸುದ್ದಿ. ವ್ಯಾಟ್ಸಪ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಎಲ್ಲೆಂದರಲ್ಲಿ ಭರ್ಜರಿ ಹವಾ ಮಾಡಿದೆ. ಇವುಗಳ ಮಧ್ಯೆ ಇಲ್ಲೊಂದು ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ಸಹ ಸುದೀಪ ಅಭಿನಯದ ರಾರಾ ರಕ್ಕಮ್ಮ ಸಾಂಗ್ ಗುಂಗು ಹಿಡಿಸಿದೆ.

children and youths en masse dance to a ra ra rakkamma song during a soil conservation campaign at bagalkote gvd

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಜೂ.27): ಈಗ ಎಲ್ಲಿ ನೋಡಿದರೂ ಸಾಕು ರಾರಾ ರಕ್ಕಮ್ಮ ಸಾಂಗ್‌ನದ್ದೇ ಸುದ್ದಿ. ವ್ಯಾಟ್ಸಪ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಎಲ್ಲೆಂದರಲ್ಲಿ ಭರ್ಜರಿ ಹವಾ ಮಾಡಿದೆ. ಇವುಗಳ ಮಧ್ಯೆ ಇಲ್ಲೊಂದು ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ಸಹ ಸುದೀಪ ಅಭಿನಯದ ರಾರಾ ರಕ್ಕಮ್ಮ ಸಾಂಗ್ ಗುಂಗು ಹಿಡಿಸಿದೆ. ಮಣ್ಣು ಸಂರಕ್ಷಣೆ ಅಭಿಯಾನ ನಡೆಯುತ್ತಿದ್ದ ಸಮಯದಲ್ಲಿ, ರಾರಾ ರಕ್ಕಮ್ಮ ಹಾಡನ್ನು ,ಏಕಕಾಲಕ್ಕೆ ನೂರಾರು ವಿದ್ಯಾರ್ಥಿಗಳಿಂದ ರಾರಾ ರಕ್ಕಮ್ಮ ಸಾಂಗ್‌ಗೆ ಸಖತ್ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು! ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಕ್ರೀಡಾಂಗಣದಲ್ಲಿ ನಡೆದ ಅಭಿಯಾನ ಸಮಯದಲ್ಲಿ ನೂರಾರು ಮಕ್ಕಳು, ಯುವಕರು ಸೇರಿ ರಾರಾ ರಕ್ಕಮ್ಮ ಹಾಡಿಗೆ ಸಾಮೂಹಿಕವಾಗಿ ಹೆಜ್ಜೆ ಹಾಕಿದ್ದಾರೆ. ಮುಧೋಳ ಪಟ್ಟಣದಲ್ಲಿ ವಿಶ್ವ ಮಣ್ಣು ಸಂರಕ್ಷಣೆ ಜಾಗೃತಿ ಹಿನ್ನೆಲೆ ನಡೆದ ಮಣ್ಣು ಉಳಿಸಿ ಅಭಿಯಾನದಲ್ಲಿ, ವಿಕ್ರಾಂತ ರೋಣ ಸಿನಿಮಾ ಹಾಡು ಸದ್ದು ಮಾಡಿದೆ. ಮುಧೋಳದ ಮಾಜಿ ಸೈನಿಕರ ಸಂಘ ಹಾಗೂ ಕಿಚ್ಚ ಸುದೀಪ ಅಭಿಮಾನಿಗಳಿಂದ ಆಯೋಜನೆಯಾಗಿದ್ದ ಮಣ್ಣು ಸಂರಕ್ಷಣಾ ಅಭಿಯಾನ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ಗಮನ ಸೆಳೆಯಿತು.

ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರ ಮಟ್ಟದ “ಲಕ್ಷ್ಯ” ಪ್ರಶಸ್ತಿ ಗರಿ..!

ರಾರಾ ರಕ್ಕಮ್ಮ ಹಾಡಿಗೆ ಚಿಕ್ಕ ಚಿಕ್ಕ ಮಕ್ಕಳ ಭರ್ಜರಿ ಡಾನ್ಸ್... ನೆರೆದ ಜನರೆಲ್ಲಾ ಫುಲ್ ಫಿದಾ: ಸದ್ಗುರು ಸ್ವಾಮೀಜಿ ನೇತೃತ್ವದಲ್ಲಿ, ವಿಶ್ವ ಮಣ್ಣು ಸಂರಕ್ಷಣಾ ಅಭಿಯಾನದ ಸಮಯದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಸಾಥ್ ನೀಡಿ, ಏಕಕಾಲಕ್ಕೆ ನೂರಾರು ಮಕ್ಕಳು ಭಾಗಿಯಾಗಿದ್ದರು. ಚಿಕ್ಕ ಚಿಕ್ಕ ಮಕ್ಕಳಿಂದ  ಡಾನ್ಸ್ ಮಾಡಿಸುವ ಮ‌ೂಲಕ ಜಾಗೃತ ಮೂಡಿಸುವ ಕಾರ್ಯ ಹಮ್ಮಿಕೊಂಡಿದ್ದರು. ಮಕ್ಕಳಿಂದ ಸಾಮೂಹಿಕವಾಗಿ ವಿಕ್ರಾಂತ ರೋಣ ಹಾಡಿಗೆ ಸ್ಟೆಪ್ ಹಾಕಿಸುವ ಮೂಲಕ ಮಣ್ಣಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಕತ್ತೆಗಳ ಓಟದ ಸ್ಪರ್ಧೆ: ಡಾಂಕಿ ಓಟಕ್ಕೆ ಹುಚ್ಚೆದ್ದು ಕುಣಿದ ಯುವ ಜನತೆ..!

ಹಾಡು ನೃತ್ಯದೊಂದಿಗೆ ಮಣ್ಣು ಸಂರಕ್ಷಣಾ ಅಭಿಯಾನಕ್ಕೆ ಜೈ ಎಂದ ಮಕ್ಕಳು ಮತ್ತು ಯುವಸಮೂಹ: ಈ ಸಂದರ್ಭದಲ್ಲಿ ಆಯೋಜಕರು ಮಾತನಾಡಿ,ಮಕ್ಕಳಿಗೆ ಸಿನೆಮಾ ಹಾಡು ಹಾಗೂ ನೃತ್ಯ ಮಾಡುವುದು ಅಂದರೆ ಇಷ್ಟ ಆಗುತ್ತದೆ. ಈ ಹಿನ್ನೆಲೆ ಮಕ್ಕಳಿಗೆ ಜಾಗೃತಿ ಜೊತೆಗೆ ಮನರಂಜನೆ ಮಾಡಿಸುವ ಮೂಲಕ ಆಕರ್ಷಣೆ ಮಾಡಲಾಗಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಇನ್ನು ಕಲರ್ ಕಲರ್ ಡ್ರೆಸ್ ತೊಟ್ಟಿದ್ದ ಪುಟ್ಟ ಪುಟ್ಟ ಪುಟ್ಟ ಮಕ್ಕಳು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ಎಲ್ಲರ ಮನಸೂರೆಗೊಂಡಿತು. ಒಟ್ಟಿನಲ್ಲಿ ಎಲ್ಲೆಲ್ಲೂ ಕೇಳಿ ಬರುತ್ತಿರೋ ರಾರಾ ರಕ್ಕಮ್ಮ ಹಾಡು ಕೇವಲ ಮನಸ್ಸಿಗೆ ಮುದ ನೀಡಲಷ್ಟೇ ಅಲ್ಲದೆ ಮಣ್ಣು ಸಂರಕ್ಷಣಾ ಕಾರ್ಯದಲ್ಲೂ ಎಫೆಕ್ಟ್ ಮಾಡಿದ್ದು, ಎಲ್ಲರ ಗಮನಸೆಳೆಯುವಂತಾಗಿತ್ತು.

Latest Videos
Follow Us:
Download App:
  • android
  • ios