Asianet Suvarna News Asianet Suvarna News

ನಮ್ ಶಾಲೇಲಿ ಟೀಚರ್ ಇಲ್ಲ, ನಿವೇ ಪಾಠ ಮಾಡಿ ಎಂದು ಬಿಇಒ ಕಚೇರಿಗೆ ಬಂದ ಮಕ್ಕಳು!

ಚಿಕ್ಕಮಗಳೂರು ಜಿಲ್ಲೆಯ ಮೇಲು ಹುಲುವತ್ತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇದ್ದ ಒಬ್ಬರೇ ಇದ್ದ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು, ಬದಲಿ ವ್ಯವಸ್ಥೆ ಮಾಡದ ಕಾರಣ ನೀವೇ ಬಂದು ನಮಗೆ ಪಾಠ ಮಾಡಿ ಎಂದು ಬಿಇಒ ಕಚೇರಿ ಮುಂದೆ ಮಕ್ಕಳು ಪ್ರತಿಭಟನೆ ಮಾಡಿದ್ದಾರೆ. 

Chikkamagaluru teacherless Government School children protest in for teacher sat
Author
First Published Sep 3, 2024, 1:21 PM IST | Last Updated Sep 3, 2024, 1:21 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.03): ಮಲೆನಾಡಿನ ಕುಗ್ರಾಮಗಳ ಸರ್ಕಾರಿ ಶಾಲೆಗಳ ಪರಿಸ್ಥಿತಿ ದಯನೀಯವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಪಾಡು ಶಾಲಾ ಕಟ್ಟಡ ಗಳಷ್ಟೇ ಶೋಚನೀಯ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿರುವ ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಗ್ರಾಮದ ಸರ್ಕಾರಿ‌ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಶಿಕ್ಷಣ ಇಲಾಖೆಯೇ ಶಾಲೆಗೆ ಬೀಗ ಹಾಕಿರುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಬಿಇಒ ಕಚೇರಿಗೆ ತೆರಳಿ ನೀವೇ ನಮಗೆ ಪಾಠ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಲೆನಾಡಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು ಇದ್ದರೂ  ಶಿಕ್ಷಕರ ಕೊರತೆ ಇರುತ್ತದೆ, ಮತ್ತೊಂದೆಡೆ ಮೂಲಭೂತ ಸೌಲಭ್ಯ ಕೊರತೆಯ ನಡುವೆಯೂ ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ ಪಾಠ ಪ್ರವಚನವನ್ನು ಮಾಡುತ್ತಿರುತ್ತಾರೆ, ಆದರೆ ಶಿಕ್ಷಣ ಇಲಾಖೆಯ ಯಡವಿಟ್ಟಿನಿಂದ ಉತ್ತಮವಾಗಿ ನಡೆಯುತ್ತಿದ್ದ ಶಾಲೆಯಲ್ಲಿ  ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಪ್ರತಿಭಟನೆ ನಡೆಸುವ ಪರಿಸ್ಥಿತಿ ಚಿಕ್ಕಮಗಳೂರು ತಾಲೂಕಿನಲ್ಲಿ ಉದ್ಭವವಾಗಿದೆ. 

ಚಿಕ್ಕಮಗಳೂರು: ಯೋಗ ಕಲಿಯಲು ಬಂದ ವಿದೇಶಿ ವೈದ್ಯೆಯ ಮೇಲೆ ಯೋಗಗುರು ಅತ್ಯಾಚಾರ!

ಹೌದು, ಮಕ್ಕಳು ಶಿಕ್ಷಕರೇ ಇಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. ಇದ್ದ ಒಬ್ಬ ಶಿಕ್ಷಕರು ವರ್ಗಾವಣೆಗೊಂಡಿದ್ದು ಯಾರನ್ನೂ ಇನ್ನೂ ನಿಯೋಜನೆ ಮಾಡಿಲ್ಲ.ಟೀಚರ್ ಇಲ್ಲ ಅಂತ ಚಿಕ್ಕಮಗಳೂರಿನ ಬಿಇಓ ಕಚೇರಿಗೆ ಬಂದ ಮಕ್ಕಳು ವಿದ್ಯಾರ್ಥಿಗಳು ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಕಿರಿಯ ಪ್ರಾಥಮಿಕ ಶಾಲೆಯ 9 ಮಕ್ಕಳು ಬಂದು ಬಿಇಓ ಕಚೇರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಮಕ್ಕಳಿಗೆ ಗ್ರಾಮಸ್ಥರು ಸಾಥ್ :  ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ 1ರಿಂದ 5 ನೇ ತರಗತಿ ವರೆಗಿನ 9 ಜನ ಇರುವ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದರು. ಇದ್ದ ಒಬ್ಬರು ಟೀಚರ್ ಕೂಡ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ಆ ಸ್ಥಳಕ್ಕೆ ಹೊಸಬರು ಬರೋದಕ್ಕೆ 15 ದಿನ ಆಗುತ್ತೆ ಎಂದು ಹೇಳಲಾಗಿದ್ದು, ಒಬ್ಬರೂ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ಸೇರಿ ಬಿಇಓ ಕಚೇರಿಗೆ ಬಂದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಮೇಲಿನ ಹುಲುವತ್ತಿ ಗ್ರಾಮದಲ್ಲಿ ಶಿಕ್ಷಕರು ಕೆಲಸಕ್ಕೆ ಬಾರದೇ ತಮ್ಮನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ದುಂಬಾಲು ಬೀಳುವವರೇ ಹೆಚ್ಚು. ಇಂತಹ ಗ್ರಾಮಕ್ಕೆ ವರ್ಗಾವಣೆಗೊಂಡ ಶಿಕ್ಷಕರ ಜಾಗಕ್ಕೆ ಹೊಸಬರು ಬರುವ ಮುನ್ನವೇ ಹಳಬರನ್ನ ಹೇಗೆ ರಿಲೀವ್ ಮಾಡಿದ್ದೀರಿ ಎಂದು ಬಿಇಒ ಅಧಿಕಾರಿಗೆ ಪೋಷಕರು ಪ್ರಶ್ನೆ ಮಾಡಿದ್ದಾರೆ. 

ಕುದುರೆಮುಖದಲ್ಲೊಬ್ಬ ಪ್ರಾಣಿಪ್ರಿಯ, ಕಾಡಿನ ಮಧ್ಯೆ ಏಕಾಂಗಿ ಬದುಕು: 20 ವರ್ಷಗಳಿಂದ ಕಾಡಂಚಿನಲ್ಲೇ ವಾಸ..!

ಚಿಕ್ಕಮಗಳೂರು ತಾಲೂಕಿನ ಕಾಡಂಚಿನ ಗ್ರಾಮಗಳ ಶಾಲೆಗಳ ಸ್ಥಿತಿಯಂತೆ ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಯೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ನಮ್ಮೂರ ಶಾಲೆಗೆ ಒಬ್ಬರು ಶಿಕ್ಷಕರು ಬೇಕೇಬೇಕು ಎಂದು ತಡರಾತ್ರಿ 8 ವರೆಗೂ ಪ್ರತಿಭಟನೆ ನಡೆಸಿದರು. ಕೊನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಶಿಕ್ಷಕರನ್ನು ಶಾಲೆಗೆ ನಿಯೋಜನೆ ಮಾಡುವ ಬಗ್ಗೆ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪೋಷಕರು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.

Latest Videos
Follow Us:
Download App:
  • android
  • ios