Asianet Suvarna News Asianet Suvarna News

ಕುದುರೆಮುಖದಲ್ಲೊಬ್ಬ ಪ್ರಾಣಿಪ್ರಿಯ, ಕಾಡಿನ ಮಧ್ಯೆ ಏಕಾಂಗಿ ಬದುಕು: 20 ವರ್ಷಗಳಿಂದ ಕಾಡಂಚಿನಲ್ಲೇ ವಾಸ..!

2005ರಲ್ಲಿ ಅದಿರು ಕಂಪನಿ ಮುಚ್ಚಿದ ಬಳಿಕ ಬೇರೆಲ್ಲೂ ಹೋಗದೆ ಕುದುರೆಮುಖದಲ್ಲಿಯೇ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಪ್ರಾಣಿಗಳ ಜೊತೆ ಬದುಕುತ್ತಿದ್ದಾರೆ. 2005ರಲ್ಲಿ ಕುದುರೆಮುಖ ಕಂಪನಿಗೆ ಬೀಗ ಬಿದ್ದ ಮೇಲೆ ಬದುಕಿನ ದಾರಿ ಕಾಣದೆ ಕುದುರೆಮುಖ ಅರಣ್ಯ ತಪ್ಪಲಿನಲ್ಲಿ ಬೈಕ್ ಮೆಕಾನಿಕ್ ಕೆಲಸ ಮಾಡ್ಕೊಂಡಿದ್ದಾನೆ. ಮದುವೆಯೂ ಆಗಿಲ್ಲ. ದುಡಿದ ಹಣವನ್ನೆಲ್ಲಾ ಸಾಕು-ಕಾಡುಪ್ರಾಣಿಗಳಿಗೆ ಮೀಸಲಿಟ್ಟಿದ್ದಾ

Living alone in the forest for 20 years in Chikkamagaluru grg
Author
First Published Sep 1, 2024, 7:12 PM IST | Last Updated Sep 1, 2024, 7:41 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.01):  ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಕುದುರೆಮುಖ ಗಣಿಗಾರಿಕೆ ಉಚ್ಛ್ರಾಯನ ಸ್ಥಿತಿಯಲ್ಲಿದ್ದಾಗ ಅಲ್ಲಿನ ನೌಕರ ಇಂದು ಎಲ್ಲರಿಗೂ ಆದರ್ಶವಾಗಿದ್ದಾರೆ. 2005ರಲ್ಲಿ ಕಂಪನಿಗೆ ಬೀಗ ಬಿದ್ದ ಮೇಲೆ ಬದುಕಿನ ದಾರಿ ಕಾಣದೆ ಕುದುರೆಮುಖ ಅರಣ್ಯ ತಪ್ಪಲಿನಲ್ಲಿ ಬೈಕ್ ಮೆಕಾನಿಕ್ ಕೆಲಸ ಮಾಡ್ಕೊಂಡಿದ್ದಾರೆ. ಮದುವೆಯೂ ಆಗಿಲ್ಲ. ದುಡಿದ ಹಣವನ್ನೆಲ್ಲಾ ಸಾಕು ಪ್ರಾಣಿಗಳಿಗೆ ಮೀಸಲಿಟ್ಟಿದ್ದಾರೆ. 

ಕುದುರೆಮುಖದಲ್ಲೊಬ್ಬ ಪ್ರಾಣಿಪ್ರಿಯ 

2005ರಲ್ಲಿ ಅದಿರು ಕಂಪನಿ ಮುಚ್ಚಿದ ಬಳಿಕ ಬೇರೆಲ್ಲೂ ಹೋಗದೆ ಕುದುರೆಮುಖದಲ್ಲಿಯೇ ಮೆಕಾನಿಕ್ ಕೆಲಸ ಮಾಡಿಕೊಂಡು ಪ್ರಾಣಿಗಳ ಜೊತೆ ಬದುಕುತ್ತಿದ್ದಾರೆ. 2005ರಲ್ಲಿ ಕುದುರೆಮುಖ ಕಂಪನಿಗೆ ಬೀಗ ಬಿದ್ದ ಮೇಲೆ ಬದುಕಿನ ದಾರಿ ಕಾಣದೆ ಕುದುರೆಮುಖ ಅರಣ್ಯ ತಪ್ಪಲಿನಲ್ಲಿ ಬೈಕ್ ಮೆಕಾನಿಕ್ ಕೆಲಸ ಮಾಡ್ಕೊಂಡಿದ್ದಾನೆ. ಮದುವೆಯೂ ಆಗಿಲ್ಲ. ದುಡಿದ ಹಣವನ್ನೆಲ್ಲಾ ಸಾಕು-ಕಾಡುಪ್ರಾಣಿಗಳಿಗೆ ಮೀಸಲಿಟ್ಟಿದ್ದಾನೆ. ಇರೋಕೆ ಸೂರಿಲ್ಲ. ಕರೆಂಟೂ ಇಲ್ಲ. 20 ವರ್ಷಗಳಿಂದ ತಗಡಿನ ಶೆಡ್‌ನಲ್ಲಿಯೇ ವಾಸ. ಅದು ಪ್ರಾಣಿಗಳಿಗಾಗಿ. ಇವ್ರ ಮನೆಯಲ್ಲಿ ಒಂದನ್ನ ಕಂಡ್ರೆ ಒಂದು ಆಗದಂತಹಾ ನಾಯಿ-ಬೆಕ್ಕು-ಹಂದಿ ಕ್ಲೋಸ್ ಫ್ರೆಂಡ್ಸ್. ಎಲ್ಲವೂ ಒಂದೇ ತಟ್ಟೆಯಲ್ಲಿ ಅನ್ನ ತಿಂತಾವೆ. ಯಾವೂ ಕೂಡ ಗುರ್ ಅನ್ನಲ್ಲ. ತಿವಿಯಲ್ಲ. ಕಚ್ಚಲ್ಲ. ಸಾಕು ಪ್ರಾಣಿಗಳಷ್ಟೆ ಅಲ್ಲ. ಕಾಡುಪ್ರಾಣಿಗಳು ಈತನ ಅಥಿತಿಗಳೇ. ಆಗಾಗ್ಗೆ ಬಂದು ಈತನ ಸತ್ಕಾರ ಅನುಭವಿಸಿ ಹೋಗುತ್ವೆ. ತನ್ನ ಇಡೀ ಬದುಕನ್ನೇ ಪ್ರಾಣಿಗಳಿಗಾಗಿ ಮೀಸಲಿಟ್ಟಿರೋ ಈತ ನಿಜಕ್ಕೂ ಕಾಡಿನ ರಾಜನೇ ಸರಿ.

ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮಸ್ತಿಗಲ್ಲ: ತಮ್ಮದೇ ಅರಣ್ಯ ಇಲಾಖೆ ವಿರುದ್ಧ ಸಚಿವ ಖಂಡ್ರೆ ಗರಂ..!

ದಟ್ಟಕಾನನದ ಮಧ್ಯೆ ಏಕಾಂಗಿ ಬದುಕು : 

ಮನುಷ್ಯ ದುಡಿಯೋದೇ ತಮಗಾಗಿ. ತಮ್ಮವರಿಗಾಗಿ. ಆದ್ರೆ, ಈತ ಜೀವಮಾನವಿಡಿ ದುಡಿದ ಹಣವನ್ನೆಲ್ಲಾ ಪ್ರಾಣಿಗಳಿಗಾಗಿಯೇ ಮೀಸಲಿಟ್ಟಿದ್ದಾನೆ. ಒಂದು ವೇಳೆ, ಕೆಲಸ ಇಲ್ಲದೆ ಪ್ರಾಣಿಗಳಿಗೆ ಆಹಾರ ತರೋದಕ್ಕೂ ದುಡ್ಡಿಲ್ಲ ಅಂದ್ರೆ ಹೊಳೆಗೆ ಹೋಗಿ ಮೀನು ಹಿಡಿದುಕೊಂಡು ಬಂದು ಅದನ್ನ ಸುಟ್ಟು ಪ್ರಾಣಿಗಳಿಗೆ ಹಾಕುತ್ತಾನೆ. ಮದುವೆಯೂ ಇಲ್ಲದ ಈತನನ್ನ ಆತನ ಕುಟುಂಬಸ್ಥರು ಬಂದು ಕರೆದರೂ ಹೋಗಿಲ್ಲ. ನಾನು ಬಂದ್ರೆ ಪ್ರಾಣಿಗಳಿಗೆ ಊಟ ಹಾಕೋದು ಯಾರು ಅಂತ ಹೋಗೇ ಇಲ್ಲ. ಕಳಸ ಜನ ಕಳಸದಲ್ಲಿ ಗ್ಯಾರೇಜ್ ಹಾಕಿಕೊಡ್ತೀವಿ ಅಂದ್ರು ಪ್ರಾಣಿಗಳಿಗಾಗಿ ಅಲ್ಲಿಗೂ ಹೋಗಿಲ್ಲ. ಯಾಕಂದ್ರೆ, ಈತನಿಂದ ನಿತ್ಯ ಊಟ ಮಾಡ್ತಿರೋ ಪ್ರಾಣಿಗಳು ಊಟದ ಸಮಯಕ್ಕೆ ನಿತ್ಯ ಬರುತ್ತೆ. ಅವುಗಳಿಗೆ ಈತನೇ ಊಟ ಹಾಕೋದು. ಹಾಗಾಗಿ, ಇದ್ರು ಇಲ್ಲೇ... ಸತ್ರು ಇಲ್ಲೇ... ಇಲ್ಲಿಂದ ಮಾತ್ರ ಎಲ್ಲಿಗೂ ಹೋಗಲ್ಲ ಅಂತ ಎರಡು ದಶಕಗಳಿಂದ ಇಲ್ಲೇ ವಾಸವಿದ್ದಾರೆ.

Latest Videos
Follow Us:
Download App:
  • android
  • ios