ಕಾಂಬೋಡಿಯಾದಲ್ಲಿ ಸಿಲುಕಿದ ಚಿಕ್ಕಮಗಳೂರಿನ ಯುವಕ: ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಚಿವೆ ಕರಂದ್ಲಾಜೆ ಯತ್ನ
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮಗ ಅಶೋಕ್ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಹೆತ್ತವರ ಸಂಕಷ್ಟದ ಮಧ್ಯೆಯೂ ಬಿಕಾಂ ಪದವೀಧರನಾಗಿ ಹೆತ್ತವರಿಗೆ ಆಸರೆ ಆಗಲೇಬೇಕೆಂದು ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಬ್ರೋಕರ್ ಗಳಿಂದ ಮೋಸ ಹೋಗಿರುವ ಅಶೋಕ್ ವಿದೇಶದಿಂದ ಸ್ವದೇಶಕ್ಕೆ ವಾಪಾಸ್ ಬರಲಾಗದೆ ಬಂಧಿ ಆಗಿದ್ದಾರೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.01): ಹೆತ್ತರವನ್ನು ಸಂಕಷ್ಟವನ್ನು ದೂರ ಮಾಡಬೇಕು, ಒಳ್ಳೆಯ ಕೆಲಸಕ್ಕೆ ಸೇರಬೇಕು, ಕೈತುಂಬ ಹಣಸಂಪಾದನೆ ಮಾಡಬೇಕೆಂಬದು ಯುವಕರ ಮಹಾದಾಸೆ. ಆದರೇ ಇದನ್ನೆ ಬಂಡವಾಳ ಮಾಡಿಕೊಂಡು ಅನೇಕರು ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ವಂಚನೆಗೆ ಇಳಿದಿದ್ದಾರೆ. ವಿದೇಶದಲ್ಲಿ ಕೆಲಸಕ್ಕೆ ಸೇರಿ ಕೈ ತುಂಬಾ ಸಂಪಾದನೆ ಮಾಡುವ ಉದ್ದೇಶದಿಂದ ಮಲೆನಾಡಿನಿಂದ ವಿದೇಶಕ್ಕೆ ತೆರಳಿದ್ದ ಯುವಕನೋರ್ವ ಇದೀಗ ಅತಂತ್ರನಾಗಿದ್ದಾನೆ. ಸ್ವದೇಶಕ್ಕೆ ತೆರಳಬೇಕಾದರೆ 13 ಲಕ್ಷ ಹಣ ನೀಡುವಂತೆ ಒತ್ತಾಯಿಸುತ್ತಿದ್ದು ಹಣವನ್ನು ನೀಡಲಾಗದೇ ಮಗನ ಸ್ಥಿತಿ ಕಂಡು ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರ :
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮಗ ಅಶೋಕ್ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಹೆತ್ತವರ ಸಂಕಷ್ಟದ ಮಧ್ಯೆಯೂ ಬಿಕಾಂ ಪದವೀಧರನಾಗಿ ಹೆತ್ತವರಿಗೆ ಆಸರೆ ಆಗಲೇಬೇಕೆಂದು ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಬ್ರೋಕರ್ ಗಳಿಂದ ಮೋಸ ಹೋಗಿರುವ ಅಶೋಕ್ ವಿದೇಶದಿಂದ ಸ್ವದೇಶಕ್ಕೆ ವಾಪಾಸ್ ಬರಲಾಗದೆ ಬಂಧಿ ಆಗಿದ್ದಾರೆ.
ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಜಿಲ್ಲೆಯ ಎನ್.ಆರ್.ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಾಂಬೋಡಿಯಾಕ್ಕೆ ತೆರಳುವ ಮೊದಲೇ 2 ಲಕ್ಷವನ್ನು ಭರತ್ ಅಂಡ್ ನಿಕ್ಷೇಪ್ ಗೆ ಅಶೋಕ್ ನೀಡಿದ್ದಾರೆ. ಕಾಂಬೋಡಿದಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಮಾಡುವ ಜಾಲವಾಗಿದ್ದು, ಇಲ್ಲಿಂದ ವಿವಿಧ ಜನರ ಮೊಬೈಲ್ಗೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ನಾನು ಈ ಕೆಲಸವನ್ನು ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಕಂಪನಿಯ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ 68ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ, ಇಂಧನ ಸಚಿವ ಕೆ ಜೆ ಜಾರ್ಜ್ ರಿಂದ ಧ್ವಜಾರೋಹಣ
ಪೊಲೀಸ್ ಠಾಣೆಗೆ ದೂರು ನೀಡಿದ ಪೋಷಕರು :
ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರೂ.13 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ. ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪೋಷಕರ ದೂರಿನ್ವಯ ಪೊಲೀಸರು ಅಶೋಕ್ನನ್ನು ಕಾಂಬೋಡಿಯಾಕ್ಕೆ ಕರೆದುಕೊಂಡು ಹೋದ ನಿಕ್ಷೇಪ್, ಭರತ್ ಪೋಷಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದು ಸಂಪರ್ಕವಾದಂತಹ ಉತ್ತರ ಬಂದಿಲ್ಲ, ಕಾಂಬೋಡಿದಲ್ಲಿರುವ ಅಶೋಕ್, ನಿಕ್ಷೇಪ್, ಭರತ್ ನ್ನು ಸಂಪರ್ಕಿಸುವ ಯತ್ನದಲ್ಲಿ ಬಾಳೆಹೊನ್ನೂರಿನ ಪೊಲೀಸರಿದ್ದಾರೆ.
ಒಟ್ಟಾರೆಯಾಗಿ ಕೆಲಸದ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ. ಮೊದಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುರೇಶ್ ಕುಟುಂಬಕ್ಕೆ ಮಗನ ಸ್ಥಿತಿ ದೊಡ್ಡ ಆಘಾತವನ್ನೇ ನೀಡಿದೆ. ವಂಚನೆಯ ಜಾಲದಲ್ಲಿ ಸಿಲುಕಿಕೊಂಡಿರುವ ಅಶೋಕನನ್ನು ಕರೆತರುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಮಾಡಬೇಕಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 21 ಸರ್ಕಾರಿ ಶಾಲೆಗಳಿಗೆ ಬೀಗ, ಸರ್ಕಾರದ ವಿರುದ್ಧ ಜನಾಕ್ರೋಶ
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ದುಡಿಮೆಗಾಗಿ ದೇಶ ಬಿಟ್ಟು ಹೋದ ಯುವಕ ವಿದೇಶದಲ್ಲಿ ಲಾಕ್ ಆಗಿದ್ದಾನೆ. ವಿದೇಶದಲ್ಲಿರುವ ತಮ್ಮನ್ನು ಮಗನನ್ನು ಬದುಕಿಸುವಂತೆ ಹೆತ್ತವರು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಮುಂದೆ ಕಣ್ಣೀರು ಹಾಕಿದ್ದರು. ಮಲೆನಾಡಿನಿಂದ ವಿದೇಶದಲ್ಲಿ ದುಡಿಮೆಗಾಗಿ ತೆರಳಿ ಅಲ್ಲಿಯ ಪ್ರಜೆಗಳು ನೀಡುತ್ತಿರುವ ಹಿಂಸೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ವಿಸ್ತೃತ ವರದಿಯೂ ಪ್ರಸಾರವಾಯಿತು. ವರದಿ ಬಂದ ಕೂಡಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಂದನೆ ನೀಡಿದ್ದು ದೂರದ ವಿದೇಶದಿಂದ ಕರೆ ತರುವ ಪ್ರಯತ್ನವನ್ನು ನಡೆಸಿದ್ದಾರೆ.
ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿಸುವಂತೆ ಸಚಿವೆ ಆಗ್ರಹ
ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರೂ.13 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ. ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ದೂರು ಸಲ್ಲಿಸಿದ್ದಾರೆ.ವಿದೇಶದಲ್ಲಿರುವ ಅಶೋಕ್ ನಮ ಸ್ಥಿತಿ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ವಿಸ್ತೃತ ವರದಿಯೂ ಪ್ರಸಾರವಾಯಿತು. ವರದಿ ಬಂದ ಕೂಡಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಂದನೆ ನೀಡಿದ್ದು ದೂರದ ವಿದೇಶದಿಂದ ಕರೆ ತರುವ ಪ್ರಯತ್ನವನ್ನು ನಡೆಸಿದ್ದಾರೆ. ಕಾಂಬೋಡಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ,ಅಶೋಕ್ ನನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿಸುವಂತೆ ಸಚಿವೆ ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಕೆಲಸದ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ. ಮೊದಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುರೇಶ್ ಕುಟುಂಬಕ್ಕೆ ಮಗನ ಸ್ಥಿತಿ ದೊಡ್ಡ ಆಘಾತವನ್ನೇ ನೀಡಿದೆ. ವಂಚನೆಯ ಜಾಲದಲ್ಲಿ ಸಿಲುಕಿಕೊಂಡಿರುವ ಅಶೋಕನನ್ನು ಕರೆತರುವ ಪ್ರಯತ್ನವನ್ನು ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಮಾಡಿದ್ದು ಅದು ಎಷ್ಟರಮಟ್ಟಿಗೆ ಫಲನೀಡಲಿದ ಅನ್ನೋದನ್ನು ಕಾದು ನೋಡಬೇಕಾಗಿದೆ.