Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!
- ಮುತ್ತಿನ ಕಥೆ ನಂಬಿ ಕೋಟಿ ಕೋಟಿ ಕಳೆದುಕೊಂಡರು
- ಹತ್ತು ಕೋಟಿ ವಂಚನೆ ಐದು ನೂರು ಜನರಿಂದ ಪೊಲೀಸರಿಗೆ ದೂರು
- ಪೊಲೀಸರ ಕೈಗೆ ಸಿಗದ ಆರೋಪಿ ಕೋರ್ಟ್ ಶರಣಾಗಿದ್ದಾನೆ
- ನಾಪತ್ತೆಯಾಗಿದ್ದ ಆರೋಪಿ ಇದೀಗ ಪೊಲೀಸರು ವಶಕ್ಕೆ ಪಡೆಯಬೇಕಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಜೂನ್ 15): ಅದು ಮುತ್ತಿನ ಹೆಸರಲ್ಲಿ ನಡೆದ ಮೋಸದ ಜಾಲ. ಫ್ರಾಡ್ ಕಂಪನಿಯನ್ನು ನಂಬಿದ ಬಳ್ಳಾರಿ ಜನರು ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ರು. ದೂರು ದಾಖಲಾಗುತ್ತಿದ್ದಂತೆ ಪರಾರಿಯಾದ ಆರೋಪಿಯನ್ನು ಹುಡುಕಲು ಬಳ್ಳಾರಿಯ ಪೊಲೀಸರು ರಾಜ್ಯವಷ್ಟೆ ಅಲ್ಲದೇ ಆಂಧ್ರ, ಮಹಾರಾಷ್ಟ, ತೆಲಂಗಾಣ ಸೇರಿದಂತೆ ಇತರೆ ರಾಜ್ಯದಲ್ಲಿ ಹುಡುಕಾಡಿದ್ರೂ ಆರೋಪಿ ಮಾತ್ರ ಕಳೆದ ಮೂರು ತಿಂಗಳಿಂದ ಸಿಕ್ಕಿರಲಿಲ್ಲ. ಆದ್ರೇ, ಇದೀಗ ಆರೋಪಿಯೇ ಆಂಧ್ರದ ಕೋರ್ಟ್ ಶರಣಾಗಿದ್ದು, ಹಣ ಕಳೆದುಕೊಂಡವರಲ್ಲಿ ತುಸು ನೆಮ್ಮದಿ ಸಿಕ್ಕಿದೆ. ಆದ್ರೇ ಆರೋಪಿಯಿಂದ ಕಳೆದುಕೊಂಡ ಹಣವನ್ನು ಹೇಗೆ ವಸೂಲಿ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿದೆ.
ಮೂರು ತಿಂಗಳ ಬಳಿಕ ವಂಚಕ ನ್ಯಾಯಾಲಯಕ್ಕೆ ಶರಣು: ಮೋಸ ಹೋಗೋವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಅನ್ನೋದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ. ಯಾಕಂದ್ರೇ, ಒಂದು ಮುತ್ತಿನ ಸರ ಪೋಣಿಸಿಕೊಟ್ರೆ ಯಾರಾದ್ರೂ ಇಷ್ಟೊಂದು ( 20 ಪರ್ಸೆಂಟ್) ಬಡ್ಡಿ ಲೆಕ್ಕದಲ್ಲಿ ಹಣ ಕೊಡ್ತಾರೆ ? ಅಂದ್ರೇ, ಅದರಲ್ಲೇನೋ ಮೋಸವಿರಬಹುದು ಎನ್ನುವುದನ್ನು ಜನರು ಊಹೆ ಕೂಡ ಮಾಡಿರಲಿಲ್ಲ. ಜನರ ವಿಶ್ವಾಸವನ್ನೆ ಇಲ್ಲಿ ಬಂಡವಾಳ ಮಾಡಿಕೊಂಡು ಮೋಸ ಮಾಡಲಾಗಿದೆ.
ಕೊಪ್ಪಳ; Kara Hunnime ಓಟದಲ್ಲಿ ಗೆದ್ದ ಮುಂದಿನ ಸಿಎಂ ಸಿದ್ದರಾಮಯ್ಯ
ಕಳೆದ ವರ್ಷ ಕೊರೊನಾದಿಂದ ಕಂಗೆಟ್ಟಿದ್ದ ಜನರಿಗೆ ಆಂಧ್ರ ಮೂಲದ ಪರ್ಲ್ ವರ್ಲ್ಡ್ ಎನ್ನುವ ಕಂಪನಿ ಭರ್ಜರಿ ಮೋಸ ಮಾಡಿದೆ. ಎರಡು ಸಾವಿರ ರೂಪಾಯಿಗೆ ಒಂದು ಮುತ್ತಿನ ಪ್ಯಾಕೆಟ್ ನೀಡೋ ಕಂಪನಿಗೆ ಅದನ್ನು ಪೊಣಿಸಿ ಸರದ ರೂಪದಲ್ಲಿ ಕೊಡಬೇಕು. ಹತ್ತು ದಿನದ ಬಳಿಕ ಎರಡು ಸಾವಿರಕ್ಕೆ ಎರಡು ನೂರು ರೂಪಾಯಿ ಹೆಚ್ಚುವರಿ ಹಣ ನೀಡೋ ಸ್ಕೀಂ ಇದಾಗಿತ್ತು. ಮೇಲ್ನೋಟಕ್ಕೆ ಮುತ್ತು ಪೊಣಿಸೋ ದಾಗಿ ಹೇಳಿದ್ರು ಇದರಲ್ಲಿ ಹತ್ತರಿಂದ ಇಪ್ಪತ್ತರಷ್ಟು ಬಡ್ಡಿ ಆಸೆ ತೋರಿಸಲಾಗಿತ್ತು. ಇದನ್ನು ನಂಬಿದ ಜನರು ಪರ್ಲ್ ವರ್ಡ್ಸ್ ಕಂಪನಿ ಮಾಲೀಕ ರವಿ ಎನ್ನುವವರಿಗೆ ಕೋಟಿಗಟ್ಟಲೇ ಹಣ ಡಿಪಾಸಿಟ್ ಮಾಡಿದ್ರು. ಹಣವನ್ನೆಲ್ಲ ಪಡೆದ ರವಿ ಕಳೆದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದನು.
ಹತ್ತುಕೋಟಿ ವಂಚನೆ ಐದು ನೂರು ಜನರಿಂದ ದೂರು ದಾಖಲು: ಇನ್ನೂ ಹಣದ ವಹಿವಾಟಿನಲ್ಲಿ ಒಂದಷ್ಟು ಅನುಮಾನ ಬಂದ ಜನರು ದೂರು ನೀಡುತ್ತಿದ್ದಂತೆ ಆರೋಪಿ ರವಿ ಪರಾರಿಯಾಗಿದ್ದನು. ಆರಂಭದಲ್ಲಿ ಸಣ್ಣಪುಟ್ಟ ಕಂಪನಿ ಎಂದು ಕೊಂಡ ಪೊಲೀಸರಿಗೆ ಸರಿಸಮಾರ 500ಕ್ಕೂ ಹೆಚ್ಚು ಜನರಿಂದ ದೂರು ಕೊಟ್ಟಿದ್ರು. ಹೆಚ್ಚು ಕಡಿಮೆ 10ಕೋಟಿಗೂ ಹೆಚ್ಚು ವಂಚನೆ ಎಂದು ಗೊತ್ತಾದಾಗ ಒಂದು ಕ್ಷಣ ಪೊಲೀಸರೇ ಬೆಚ್ಚಿ ಬಿದ್ದಿದ್ರು.
ತುಮಕೂರು ಗಡಿಯಲ್ಲಿ ಕನ್ನಡಿಗರ ಮೇಲೆ ಆಂಧ್ರ ಪೊಲೀಸರ ದಬ್ಬಾಳಿಕೆ!
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ರೊದ್ದಂ ರವಿಯನ್ನು ಹುಡುಕಾಡಲು ವಿಶಾಖ ಪಟ್ಟಣ, ಹೈದ್ರಬಾದ್, ರಾಜಮಂಡ್ರಿ, ಮುಂಬೈ ಸೇರಿದಂತೆ ಎಲ್ಲೇಡೆಯೂ ಹುಡುಕಾಡಿದ್ರು ಸಿಕ್ಕರಿಲಿಲ್ಲ. ಆದ್ರೇ, ಇದೀಗ ಅರೋಪಿ ರಾಜಮಂಡ್ರಿ ಕೋರ್ಟ್ ಗೆ ಶರಣಾಗಿದ್ದಾನೆ. ಹೀಗಾಗಿ ಬಾಡಿ ವಾರೆಂಟ್ ಪಡೆದು ಬಳ್ಳಾರಿಗೆ ಕರೆತರಲು ಪೊಲೀಸರ ಯತ್ನಿಸುತ್ತಿದ್ದಾರೆ ಎಂದು ಎಸ್ಪಿ ಸೈದುಲ್ ಅಡಾವತ್ ತಿಳಿಸಿದ್ದಾರೆ. ಅಲ್ಲದೇ ರವಿ ಅವರ ಆಸ್ತಿ ಮುಟ್ಟುಗೋಲು ಹಾಕಿ ಜನರಿಗೆ ದುಡ್ಡ ಸಾಧ್ಯವಾದಷ್ಟು ವಾಪಸ್ ಕೊಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಅತಿಯಾಸೆಗೆ ಹೋಗಿ ಹಳ್ಳಕ್ಕೆ ಬಿದ್ರು: ಒಟ್ಟಾರೇ ಅತಿ ಆಸೆ ಗತಿಗೇಡು ಎನ್ನುವ ನಾಣ್ಣುಡಿಯಂತೆ ಹಣದಾಸೆಗೆ ಬಿದ್ದ ಜನರು ಮುತ್ತಿನ ಸರ ಕಟ್ಟೋ ನೆಪದಲ್ಲಿ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ಕೆಲವರು ಹೇಳಿಕೊಂಡ್ರೇ, ಮರ್ಯಾದೆ ಹೋಗ್ತದೆ ಎಂದು ಹೇಳಲು ಕೂಡ ಹಿಂಜರಿಯುತ್ತಿದ್ದಾರೆ. ಅದೇನೆ ಇರಲಿ ಸದ್ಯ ಆರೋಪಿ ಸಿಕ್ಕಿದ್ದು, ವಸೂಲಿ ಮಾಡೋ ಕೆಲಸ ಪೊಲೀಸರ ಮೇಲಿದೆ.