Asianet Suvarna News Asianet Suvarna News

Chikkamagaluru ಪರ್ಮಿಟ್‌ ವಿವಾದ ಸುಖಾಂತ್ಯ : ಆಟೋ ಚಾಲಕರು ಖುಷ್‌

  •  ಪರ್ಮಿಟ್‌ ವಿವಾದ ಸುಖಾಂತ್ಯ : ಆಟೋ ಚಾಲಕರು ಖುಷ್‌
  •  ಜಿಲ್ಲೆ 14 ಸಾವಿರ ಆಟೋ ಕುಟುಂಬಗಳಿಗೆ ಅನ್ಯಾಯ ವಿರುದ್ಧ ಸಿಡಿದೆದ್ದು ನಡೆಸಿದ ಹೋರಾಟ
     
Chikkamagaluru auto Permit Issue Resolved snr
Author
Bengaluru, First Published Nov 15, 2021, 1:15 PM IST
  • Facebook
  • Twitter
  • Whatsapp

ಕೊಪ್ಪ (ನ.15):  ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದ ಸರ್ಕಾರ (Govt) ಇಲ್ಲಿಯವರೆಗೆ ಆಟೋಗಳಿಗೆ (Auto) ಇದ್ದ ತಾಲೂಕು ಪರ್ಮಿಟ್‌ (Permit ) ಅನ್ನು ತೆರವುಗೊಳಿಸಿ ಅವೈಜ್ಞಾನಿಕ ಆಟೋ ಪರ್ಮಿಟ್‌ ಮಾಡಿ, ಇಡೀ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಸುಮಾರು 14 ಸಾವಿರ ಆಟೋ ಕುಟುಂಬಗಳಿಗೆ ಮಾಡಿದ ಅನ್ಯಾಯದ ವಿರುದ್ಧ ಸಿಡಿದೆದ್ದ ಜಿಲ್ಲೆಯ ಆಟೋ ಚಾಲಕರ ಹೋರಾಟಕ್ಕೆ ಜಯ ಸಿಕ್ಕಿದೆ. ಇದರಿಂದ ಪೂರ್ತಿ ಅಲ್ಲದಿದ್ದರೂ, ಸ್ವಲ್ಪವಾದರೂ ಈ ಜಿಲ್ಲೆಯ ಆಟೋ ಚಾಲಕರು ನಿಟ್ಟುಸಿರುಬಿಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿಂದ ಈ ವಿಚಾರವಾಗಿ ಹೋರಾಟ ರೂಪಿಸಿ, ಆಟೋ ಚಾಲಕರ (Auto Drivers) ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು, ಎರಡು ಮೂರು ಬಾರಿ ಜಿಲ್ಲಾಧಿಕಾರಿ ಸಮಕ್ಷಮ ಆರ್‌ಟಿಎ (RTA) ಸಭೆಯಲ್ಲಿ ಭಾಗವಹಿಸಿ ಇಡೀ, ಜಿಲ್ಲೆಯ ಆಟೋ ಚಾಲಕರ ಪರವಾಗಿ ಹೋರಾಟ ನಡೆಸಿದ ಜಿಲ್ಲೆಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮುಖಂಡರನ್ನು ಕೊಪ್ಪ (Koppa) ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹೋರಾಟದ ಮುಂಚೂಣಿ ನಾಯಕರಾದ ಶೃಂಗೇರಿ (Sringeri) ಕ್ಷೇತ್ರದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌.ಜಗದೀಶ್‌ (HR Jagadish), ಮೂಡಿಗೆರೆಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಅಮರ್‌ನಾಥ್‌, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಶೃಂಗೇರಿ ಕ್ಷೇತ್ರದ ಅಧ್ಯಕ್ಷರಾದ ವಿಜೇಂದ್ರ ಹರಿಹರಪುರ, ಕುದುರೆಗುಂಡಿಯ ಶಾಶ್ವತ್‌, ಜಯಪುರದ ಸಂಪತ್‌, ನ.ರಾ.ಪುರದ ಮಧುಸೂದನ್‌, ಮಡಬೂರಿನ ಸದಾನಂದ ಮೂಡಿಗೆರೆಯ ನಾಗೇಶ್‌, ನಗರಾಧ್ಯಕ್ಷರಾದ ಮಹಮ್ಮದ್‌ ಅನ್ವರ್‌, ಶೃಂಗೇರಿಯ ಚಂದ್ರಶೇಖರ್‌, ಬಿ.ಎಚ್‌.ಕೈಮರದ ಪ್ರಕಾಶ್‌ ಅವರುಗಳನ್ನು ಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಯು.ಪಿ.ವಿಜಯ್‌ಕುಮಾರ್‌ ಶಾಲು ಹೊದಿಸಿ, ಸನ್ಮಾನಿಸಿದರು.

ಆಟೋ ಚಾಲಕರ ಹೋರಾಟದಲ್ಲಿ ಕೈ ಜೋಡಿಸಿದ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಡಿ.ಎನ್‌.ಜೀವರಾಜ್‌, ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ (TD Rajegowda) ಅವರ ಸಹಕಾರವನ್ನು ಸ್ಮರಿಸಿದರು.

ಸಭೆಗೆ ಜಿಲ್ಲೆಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಎಲ್ಲ ಸದಸ್ಯರು ಭಾಗವಹಿಸಿದ್ದರು.

ಆಟೊ ದರ ಏರಿಕೆ :  ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜಧಾನಿ ಬೆಂಗಳೂರಿನ (Bengaluru) ನಾಗರಿಕರು ಇನ್ನು ಮುಂದೆ ಆಟೋ ಪ್ರಯಾಣ (Auto Travel) ದರದ ಹೊರೆ ಹೊರಬೇಕಾಗಿದೆ.

ನಗರದಲ್ಲಿ ಒಂಬತ್ತು ವರ್ಷಗಳ ನಂತರ ಆಟೋ ಪ್ರಯಾಣ ದರ (Auto Fares) ಹೆಚ್ಚಳಗೊಂಡಿದ್ದು, 1.8 ಕಿ.ಮೀ. ದೂರದವರೆಗೂ ಕನಿಷ್ಠ ಪ್ರಯಾಣ ದರದ ಮೊತ್ತವನ್ನು 25 ರು.ಗಳಿಂದ 30 ರು.ಗಳಿಗೆ ಏರಿಕೆ ಮಾಡಲಾಗಿದೆ. ಡಿ.1ರಿಂದ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿ.ಮೀ.ದರವನ್ನು 13ರಿಂದ 15 ರು.ಗಳಿಗೆ ಹೆಚ್ಚಿಸಲಾಗಿದೆ. ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿರಲಿದೆ. ಆನಂತರ ಪ್ರತಿ 15 ನಿಮಿಷಕ್ಕೆ 5 ರು. ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ 5 ರು. ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗಲಿದೆ ಎಂದು ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದ್ದಾರೆ.

ಆಟೋ ದರ ಹೆಚ್ಚಳ : ಸಂಘಟನೆಗಳಲ್ಲೇ ಒಡಕು

ಈ ಕುರಿತು ಹೊರಡಿಸಿರುವ ಆದೇಶದಲ್ಲಿ ಅವರು, ದರಗಳ ವಿವರವನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ನಿರ್ದೇಶಿಸಿದ್ದಾರೆ.

Follow Us:
Download App:
  • android
  • ios