ಚಾಮರಾಜನಗರ(ಜ.12): ಪುರಾಣ ಪ್ರಸಿದ್ಧ ಹಿನ್ನೆಲೆ ಹೊಂದಿರುವ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯ ಮೊದಲನೆ ದಿನ ನಡೆದ ಚಂದ್ರ ಮಂಡಲೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

ಹನೂರು ತಾಲೂಕಿನ ಚಿಕ್ಕಲ್ಲೂರು ಪುಣ್ಯಕ್ಷೇತ್ರದಲ್ಲಿ ಚಂದ್ರಮಂಡಲೋತ್ಸವವು ಈ ಬಾರಿ ಚಂದ್ರಗ್ರಹಣದಿಂದಾಗಿ ಶುಕ್ರವಾರ ರಾತ್ರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಚಂದ್ರಮಂಡಲೊತ್ಸವ ಜರುಗಿತು.

'ನೆಟ್ಟಗಿರುವ ಕ್ಯಾಬಿನೆಟ್‌ ಮಾಡದೆ ಅಭಿವೃದ್ಧಿ ಏನ್‌ ಮಾಡ್ತೀರಾ'..?

ಸಿದ್ದಪ್ಪಾಜಿ ಭಕ್ತರು ಅಪಾರ ಸಂಖ್ಯೆಯಲ್ಲಿ ವೃತ್ತಾಕಾರದಲ್ಲಿ ನಿರ್ಮಿಸಿರುವ ವೇದಿಕೆಯ ಮೇಲೆ ಚಂದ್ರಮಂಡಲಕ್ಕೆ ಜ್ಯೋತಿ ಬೆಳಗಿಸಿ ಧಗಧಗನೆ ಉರಿಯುವ ವೇಳೆ ನೀಲಗಾರರು ಹಾಗೂ ಭಕ್ತ ಸಾಗರವೇ ಹರಿದು ಬಂದು ಜಯ ಘೋಷಣೆಗಳನ್ನು ಕೂಗಿದರು.

ಚಂದ್ರಮಂಡಲ ಈ ಬಾರಿ ಉತ್ತರ ದಿಕ್ಕಿಗೆ ವಾಲಿದ್ದು, ಆ ಭಾಗದಲ್ಲಿ ಉತ್ತಮ ಮಳೆ ಜೊತೆಗೆ ಬೆಳೆಯಾಗುವ ನಂಬಿಕೆಯೊಂದಿಗೆ ಭಕ್ತರು ಚಂದ್ರಮಂಡಲಕ್ಕೆ ತಾವು ಬೆಳೆದ ದವಸ ಧಾನ್ಯ ಹಾಗೂ ಹಣ್ಣು ಮತ್ತು ನಾಣ್ಯಗಳನ್ನು ಎಸೆದು ತಮ್ಮ ಇಷ್ಟಾರ್ಥವನ್ನು ಸಲ್ಲಿಸಿದರು. ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿದ್ದಪ್ಪಾಜಿ, ಮಂಟೇಸ್ವಾಮಿ ಪರ ಘೋಷಣೆಗಳನ್ನು ಕೂಗಿದರು. ಇದೇ ವೇಳೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುತ್ತೇಳು ಗ್ರಾಮಸ್ಥರು ಭಾಗವಹಿಸಿದರು.

ಕಂಡಾಯಗಳ ಮೆರವಣಿಗೆ:

ಶ್ರೀ ಕ್ಷೇತ್ರ ಚಿಕ್ಕಲ್ಲೂರು ಜಾತ್ರಾ ಮಹೋತ್ಸವದ ಅಂಗವಾಡಿ ಶುಕ್ರವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸವ ಮುನ್ನ ಹಳೆ ಮಠದಿಂದ ಕಂಡಾಯಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ದೇವಸ್ಥಾನದ ಬಳಿ ಬಂದು ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿದರು. ಈ ವೇಳೆ ಸುತ್ತುಮುತ್ತಲಿ ಗ್ರಾಮಗಳ ನೀಲಗಾರರು ಹಾಡಿದ ಸಿದ್ದಪ್ಪಾಜಿಯ ಕುರಿತ ಹಾಡು ಮುಗಿಲು ಮುಟ್ಟುವಂತಿತ್ತು. ಹರಕೆ ಹೊತ್ತ ಭಕ್ತರು ದೇವಾಲಯದ ಮುಂಭಾಗ ಧೂಪ ಹಾಕಿ ಇಷ್ಟಾರ್ಥ ಸಿದ್ದಿಸುವಂತೆ ನಿವೇದನೆ ಮಾಡಿಕೊಳ್ಳುವ ಮೂಲಕ ಭಕ್ತ ಸಾಗರವೇ ಹರಿದು ಬಂದಿತು.

ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯ ಸಂಭ್ರಮ ಹೀಗಿತ್ತು..!

ಚಂದ್ರಮಂಡಲೋತ್ಸವನ್ನು ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ಇದ್ದ ಕಾರಣ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.