ಚಾಮರಾಜನಗರ(ಜ.12): ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳಾಗ್ತಿದ್ರೂ ನೆಟ್ಟಗಿರುವ ಕ್ಯಾಬಿನೆಟ್‌ ರಚನೆ ಮಾಡೋಕೋ ಆಗಿಲ್ಲ. ಇನ್ನೂ ಅಭಿವೃದ್ಧಿ ಏನ್‌ ಮಾಡ್ತೀರಾ ಮುಖ್ಯಮಂತ್ರಿಗಳೇ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೃಷ್ಣಬೈರೇಗೌಡ ಅವರು ಪ್ರಶ್ನಿಸಿದ್ದಾರೆ.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಿವಂಗತ ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದಲ್ಲಿ 34 ಮಂತ್ರಿ ಮಾಡಲು ಸಾಧ್ಯವಾಗಿಲ್ಲ. ನಿಮಗೆ 34 ಮಂತ್ರಿಗಳು ಏಕೆ ಬೇಕು, ಅವರಿಲ್ಲದೇ ಹಾಗೇ ಅಭಿವೃದ್ಧಿ ಮಾಡ್ತೀರಾ, ನಿಮ್ಮನ್ನು ಯಾರು ಕೇಳುವವರು ಇಲ್ಲ, ಸತ್ಯವನ್ನು ಪ್ರಶ್ನೇ ಮಾಡುವಂತಿಲ್ಲ. ಪ್ರಶ್ನಿಸುವ ಮುಕ್ತ ವಾತಾವರಣ ರಾಜ್ಯದಲ್ಲಿ ಏಕೆ ದೇಶದಲ್ಲೇ ಉಳಿದಿಲ್ಲ. 6 ತಿಂಗಳಾಗ್ತಿದೆ ರಾಜ್ಯದಲ್ಲಿ ಏನು ಯೋಜನೆ ಕೊಟ್ಟಿದ್ದೀರಾ ಹೇಳುವುದಕ್ಕೆ ನಿಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.

ಸಿಎಎ, ಎನ್‌ಆರ್‌ಸಿ ಬೆಟ್ಟ ಅಗೆದು ಇಲಿ ಹಿಡಿದಂಗೆ:

ರಾಜ್ಯದಲ್ಲಿ ಹಾಗೂ ದೇಶದಲ್ಲಿ ರೈತರ ಸಮಸ್ಯೆಬಗೆಹರಿಸಿಲ್ಲ, ಉದ್ಯೋಗದ ಸಮಸ್ಯೆ ಬಗೆಹರಿಸಿಲ್ಲ, ನೆರೆಯಿಂದ ಹಾನಿಯಾದವರಿಗೆ ಪರಿಹಾರ ಕೊಡುವುದಕ್ಕೆ ಆಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ಸಿಎಎ, ಎನ್‌ಆರ್‌ಸಿ, ಎಂದು ಜನರ ಗಮನ ಬೇರಡೆ ಸೆಳೆಯುವ ಕೆಲಸವನ್ನು ಮಾಡುತ್ತಿದ್ದಿದ್ದಾರೆ ಇದೊಂದು ಬೆಟ್ಟ ಅಗೆದು ಇಲಿ ಹಿಡಿದಂಗೆ ಎಂದು ಆರೋಪಿಸಿದ್ದಾರೆ.

ಚಾಮರಾಜನಗರ: ಭಂಗಿ ಸೇವೆಗೆ ಬೆಳೆದಿದ್ದ 101 ಕೆಜಿ ಗಾಂಜಾ ವಶ..!

ಸಿಎಎ, ಎನ್‌ಆರ್‌ಸಿ ಎಂದು ಹೊರ ದೇಶದಿಂದ ಬಂದ 25 ಲಕ್ಷ ಜನರನ್ನು ಪತ್ತೆಹಚ್ಚಲು 130 ಕೋಟಿ ಜನರನ್ನು ಲೈನ್‌ನಲ್ಲಿ ನಿಲ್ಲಿಸುವಂತ ಕೆಲಸ ಮಾಡುತ್ತಿದ್ದಾರೆ. ಇದರಿಂದ 25 ಲಕ್ಷ ಜನರು ಹೊರದೇಶದಿಂದ ಬಂದಿರುವವರು ಸಿಕ್ಕಿದರೆ ಅವರನ್ನು ಎಲ್ಲಿಗೆ ಕಳುಹಿಸುತ್ತೀರಾ? ಅವರನ್ನು ಯಾವ ದೇಶ ಕರೆದುಕೊಂಡು ಹೋಗುತ್ತದೆ. ಅವರಿಗೆ ನಮ್ಮ ದೇಶದಲ್ಲೇ ನೀವು ಸ್ಥಳಕೊಟ್ಟು ಅವರಿಗೆ ಮನೆ ನಿರ್ಮಿಸಿಕೊಟ್ಟು ಆಹಾರ, ನೀರು ಎಲ್ಲವನ್ನು ನೀಡಬೇಕಾಗುತ್ತದೆ. ಈ ಪುರುಷಾರ್ಥಕ್ಕೆ ಏಕೆ ಮಾಡುತ್ತಿದ್ದೀರಾ ಇದರಿಂದ ವಾಸ್ತವವಾಗಿ ಇಲಿನೂ ಸಿಗಲ್ಲ ಎಂದು ಹೇಳಿದ್ದಾರೆ.

ಕಲ್ಪವೃಕ್ಷದ ಕೆಳಗೆ ಗಾಂಜಾ ಬೆಳೆ: ರೈತ ಅರೆಸ್ಟ್