2 ದಿನದಲ್ಲಿ 4.65 ಕೋಟಿ ರು. ಮೌಲ್ಯದ ಮದ್ಯ ಮಾರಾಟ  ಜಿಲ್ಲಾದ್ಯಂತ ನೈಟ್‌ ಕರ್ಫ್ಯೂ ನಡುವೆಯು ಹೊಸ ವರ್ಷದ ಸಂಭ್ರಮದಲ್ಲಿ ಹರಿದ ಮದ್ಯದ ಹೊಳೆ  

ವರದಿ: ಕಾಗತಿ ನಾಗರಾಜಪ್ಪ.

ಚಿಕ್ಕಬಳ್ಳಾಪುರ (ಜ.04): ಜಿಲ್ಲಾದ್ಯಂತ ಹೊಸ ವರ್ಷದ ಸಂಭ್ರಮಕ್ಕೆ (New Year) ಮೋಜು, ಮಸ್ತಿ ನಡೆಸದಂತೆ ರಾಜ್ಯ ಸರ್ಕಾರ ಹಲವು ಕಠಿಣ ನಿಬಂಧನೆಗಳನ್ನು ವಿಧಿಸಿದ್ದರೂ ಕೂಡ ಜಿಲ್ಲೆಯಲ್ಲಿ ಮದ್ಯದ ಹೊಳೆ ಹರಿದಿದ್ದು ಕೇವಲ ಎರಡು ದಿನದಲ್ಲಿ ಮಾತ್ರ ದಾಖಲೆಯ ಮದ್ಯ ಮಾರಾಟವಾಗಿ ರಾಜ್ಯ ಸರ್ಕಾರದ (Govt Of Karnataka) ಬೊಕ್ಕಸಕ್ಕೆ ಜಿಲ್ಲೆಯಿಂದ ಕೋಟಿ ಕೋಟಿ ಆದಾಯ ಹರಿದು ಹೋಗಿದೆ. ಹೌದು, 2022ನೇ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ರಾಜ್ಯ ಸರ್ಕಾರ ಒಮಿಕ್ರೋನ್‌ (Omicron) ಆತಂಕದ ನಡುವೆಯು ವಿಧಿಸಿದ್ದ ನೈಟ್‌ ಕರ್ಫ್ಯೂ ವನ್ನು ಲೆಕ್ಕಿಸದೇ ಮೋಜು, ಮಸ್ತಿಯಲ್ಲಿ ತೊಡಗಿದ್ದ ಜಿಲ್ಲೆಯ ಮದ್ಯಪ್ರಿಯರಿಂದ ಬರೋಬ್ಬರಿ 4.65 ಕೋಟಿಯಷ್ಟು ಮೌಲ್ಯದ ಮದ್ಯ ಮಾರಾಟ ಆಗಿರುವುದು ಅಬಕಾರಿ ಇಲಾಖೆ ನೀಡಿರುವ ಅಂಶಗಳಿಂದ ಬಯಲಾಗಿದೆ.

ಮದ್ಯ ಮಾರಾಟ ದಾಖಲೆ

ಜಿಲ್ಲಾದ್ಯಂತ 188ಕ್ಕೂ ಅಧಿಕ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಜೊತೆಗೆ ಎಂಆರ್‌ಪಿ ದರದಲ್ಲಿ ಮಾರಾಟವಾಗುವ ಮದ್ಯದಂಗಡಿಗಳಿದ್ದು ಈ ಬಾರಿ ಅಬಕಾರಿ ಇಲಾಖೆ ಗುರಿ ಮೀರಿ ದಾಖಲೆ ಪ್ರಮಾಣದಲ್ಲಿ ಹೊಸ ವರ್ಷದ ಹಿಂದಿನ ಹಾಗೂ ಮೊದಲ ದಿನವೇ ಮದ್ಯ (Luquor) ಮಾರಾಟಗೊಂಡಿರುವುದು ಕಂಡು ಬಂದಿದೆ. ಬೀಯರ್‌ಗಿಂತ ಭಾರತೀಯ ಮದ್ಯ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಗೊಂಡಿದ್ದು ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ ಐಎಂಎಲ್‌ ಮದ್ಯ ಬರೋಬ್ಬರಿ 3.14 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ. ಅದೇ ರೀತಿ ಶನಿವಾರ 91 ಲಕ್ಷದಷ್ಟುಐಎಂಎಲ್‌ ಮದ್ಯ ಮಾರಾಟವಾಗಿದೆ.

ಯಾವ ಮದ್ಯ ಎಷ್ಟು ಮಾರಾಟ?

ಜಿಲ್ಲೆಯಲ್ಲಿ ಶುಕ್ರವಾರ ಮದ್ಯದ ಡೀಪೋಗಳಿಂದ ಎಂಐಎಲ್‌ (MIL) ಮದ್ಯ 8,267 ಬಾಕ್ಸ್‌ ಮಾರಾಟವಾಗಿದ್ದು ಅದರ ಒಟ್ಟಾರೆ ಮೌಲ್ಯ 3 ಕೋಟಿ 14 ಲಕ್ಷದ 44 ಸಾವಿರ ರು,ಗಳಾದರೆ ಬೀಯರ್‌ ಒಟ್ಟು 2,716 ಬಾಕ್ಸ್‌ ಮಾರಾಟಗೊಂಡಿದ್ದು ಅದರ ಒಟ್ಟು ಮೌಲ್ಯ 46,93 ಲಕ್ಷ ರು,ಗಳಾಗಿವೆ. ಶನಿವಾರ ಐಎಂಎಲ್‌ ಮದ್ಯ 2,145 ಬಾಕ್ಸ್‌ ಮಾರಾಟ ಮಾಡಿದ್ದು ಅದರ ಒಟ್ಟು ಮೌಲ್ಯ 13.47 ಲಕ್ಷ ರು, ಬೀಯರ್‌ ಒಟ್ಟು 802 ಬಾಕ್ಸ್‌ ಮಾರಾಟಗೊಂಡಿದ್ದು ಅದರ ಒಟ್ಟು ಮೌಲ್ಯ 13.47 ಲಕ್ಷ ರು,ಗಳಾಗಿವೆಯೆಂದು ಜಿಲ್ಲಾ ಅಬಕಾರಿ ಆಯುಕ್ತ ನರೇಂದ್ರ ಕುಮಾರ್‌ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಕೋವಿಡ್‌ ಮೂರನೇ ಅಲೆ ಆತಂಕದ ಹಿನ್ನಲೆಯಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಜನದಟ್ಟಣೆಗೆ ಬ್ರೇಕ್‌ ಹಾಕಲು ರಾಜ್ಯ ಸರ್ಕಾರ (Karnataka Govt) ನೈಟ್‌ ಕರ್ಫ್ಯೂನಂತಹ ಹಲವು ನಿಬಂಧನೆಗಳನ್ನು ವಿಧಿಸಿದರೂ ಯಾವುದಕ್ಕೂ ಲೆಕ್ಕಿಸದೇ ಎಣ್ಣೆ ಪ್ರಿಯರು ಹೊಸ ವರ್ಷದಂತ ಕುಡಿದು ಮೋಜು, ಮಸ್ತಿಯಲ್ಲಿ ತೊಡಗಿದ್ದರು ಎನ್ನುವುದಕ್ಕೆ ಜಿಲ್ಲೆಯಲ್ಲಿ ಎರಡು ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಸಾಕ್ಷಿಯಾಗಿದೆ.

ಶೇ.25 ರಿಂದ 30 ರಷ್ಟುಹೆಚ್ಚಳ

2022ನೇ ಹೊಸ ವರ್ಷದ ಸಂಭ್ರಮದಲ್ಲಿ ಜಿಲ್ಲಾದ್ಯಂತ ರಾಜ್ಯ ಸರ್ಕಾರ ನೈಟ್‌ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮದ್ಯ ಮಾರಾಟ ನಡೆದಿದೆ. ಅಬಕಾರಿ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ ಸಾಮಾನ್ಯ ದಿನಗಳಗಿಂತ ಜಿಲ್ಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಎರಡು ದಿನದಲ್ಲಿ ಬರೋಬ್ಬರಿ ಶೇ.25 ರಿಂದ 30 ರಷ್ಟುಮದ್ಯ ಮಾರಾಟದಲ್ಲಿ ಹೆಚ್ಚಳ ಕಂಡಿದೆ.

  • 2 ದಿನದಲ್ಲಿ 4.65 ಕೋಟಿ ರು. ಮೌಲ್ಯದ ಮದ್ಯ ಮಾರಾಟ
  •  ಜಿಲ್ಲಾದ್ಯಂತ ನೈಟ್‌ ಕರ್ಫ್ಯೂ ನಡುವೆಯು ಹೊಸ ವರ್ಷದ ಸಂಭ್ರಮದಲ್ಲಿ ಹರಿದ ಮದ್ಯದ ಹೊಳೆ
  • ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಜಿಲ್ಲೆಯಿಂದ ಕೋಟಿ ಕೋಟಿ ಆದಾಯ