Asianet Suvarna News Asianet Suvarna News

Chikkaballapura Utsava : ಚಿಕ್ಕಬಳ್ಳಾಪುರ ಜಿಲ್ಲೆ ಇನ್ಮೇಲೆ ಫಲಪುಪ್ಪ ಗಿರಿಧಾಮ ನಾಡು

ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 15 ವರ್ಷಗಳ ತುಂಬಿದ ಹಿನ್ನೆಲೆಯಲ್ಲಿ ಶನಿವಾರದಿಂದ ಆರಂಭಗೊಂಡ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಜಿಲ್ಲೆಗೆ ಹೊಸದಾಗಿ ಫಲಪುಪ್ಪ ಗಿರಿಧಾಮ ನಾಡು ಎಂದು ನಾಮಕಾರಣವನ್ನು ಮಾಡುವ ಮೂಲಕ ಚಿಕ್ಕಬಳ್ಳಾಪುರ ಉತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.   

Chikkaballapura district now flowers sanctuary city gow
Author
First Published Jan 8, 2023, 5:54 PM IST

ಚಿಕ್ಕಬಳ್ಳಾಪುರ (ಜ.8): ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 15 ವರ್ಷಗಳ ತುಂಬಿದ ಹಿನ್ನೆಲೆಯಲ್ಲಿ ಶನಿವಾರದಿಂದ ಆರಂಭಗೊಂಡ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಜಿಲ್ಲೆಗೆ ಹೊಸ ನಾಮಕಾರಣವನ್ನು ಮಾಡುವ ಮೂಲಕ ಚಿಕ್ಕಬಳ್ಳಾಪುರ ಉತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಮೈಸೂರನ್ನು ಸಾಂಸ್ಕೃತಿಕ ನಗರಿ, ಕೋಲಾರನ್ನು ಚಿನ್ನದ ನಾಡು, ರಾಮನಗರವನ್ನು ಗೊಂಬೆಗಳ ನಗರಿ, ಬಿಜಾಪುರವನ್ನು ಗೊಮ್ಮಟ ನಗರಿ ಎನ್ನುವ ರೀತಿಯಲ್ಲಿ ಇನ್ನೂ ಮುಂದೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಫಲಪುಪ್ಪ ಗಿರಿಧಾಮ ನಾಡು ಎಂದು ಸರ್ಕಾರ ನಾಮಕರಣ ಮಾಡಿದೆ.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಿಕ್ಕಬಳ್ಳಾಪುರ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಟ್ಯಾಗ್‌ ಲೈನ್‌ ಆಗಿ ಫಲಪುಪ್ಪ ಗಿರಿಧಾಮ ಎನ್ನುವ ನಾಮಫಲಕವನ್ನು ಸಿಎಂ ವೇದಿಕೆ ಕಾರ್ಯಕ್ರಮದಲ್ಲಿ ಆನಾವರಣಗೊಳಿಸಿದರು.

ಇಂದಿನಿಂದ 8 ದಿನ ವೈಭವದ ಚಿಕ್ಕಬಳ್ಳಾಪುರ ಉತ್ಸವ: ಸುದೀಪ್‌, ಶಂಕರ್‌ ಮಹದೇವನ್‌ ಮತ್ತಿತರರು ಭಾಗಿ

ಈ ವೇಳೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂಟಿಬಿ ನಾಗರಾಜ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್‌, ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಸಿಇಒ ಪಿ.ಶಿವಶಂಕರ್‌, ಎಸ್ಪಿ ನಾಗೇಶ್‌, ಸೇರಿದಂತೆ ಜಿಲ್ಲಾಡಳಿತ ಇದಕ್ಕೆ ಸಾಕ್ಷಿಯಾಯಿತು.

 

8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ

ವಿದ್ಯುತ್‌ ದೀಪಾಲಂಕಾರಕ್ಕೆ ಸಿಎಂ ಚಾಲನೆ: ಚಿಕ್ಕಬಳ್ಳಾಪುರ ಉತ್ಸವ ಉದ್ಘಾಟನೆ ನೆರವೇರಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಉತ್ಸವದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ವಿಶೇಷ ವಿದ್ಯುತ್‌ ದೀಪಾಲಂಕಾರಕ್ಕೆ ಮುಖ್ಯ ವೇದಿಕೆ ಮೇಲಿಂದಲೇ ರೀಮೋಟ್‌ ಒತ್ತುವ ಮೂಲಕ ವಿದ್ಯುತ್‌ ದೀಪಾಲಂಕಾರಕ್ಕೆ ಚಾಲನೆ ನೀಡಿದರು.

Follow Us:
Download App:
  • android
  • ios