Asianet Suvarna News Asianet Suvarna News

ಇಂದಿನಿಂದ 8 ದಿನ ವೈಭವದ ಚಿಕ್ಕಬಳ್ಳಾಪುರ ಉತ್ಸವ: ಸುದೀಪ್‌, ಶಂಕರ್‌ ಮಹದೇವನ್‌ ಮತ್ತಿತರರು ಭಾಗಿ

ಜಿಲ್ಲೆಯಾಗಿ ಚಿಕ್ಕಬಳ್ಳಾಪುರಕ್ಕೆ 15 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಉತ್ಸವದ ಹೊಸ್ತಿಲಲ್ಲಿ ನವ ವಧುವಿನಂತೆ ಜಿಲ್ಲಾ ಕೇಂದ್ರ ಸರ್ವ ರೀತಿಯಲ್ಲೂ ಸಿಂಗಾರಗೊಂಡು ಜನರನ್ನು ಕೈ ಬೀಸಿ ಕರೆಯುತ್ತಿದ್ದು, ಜ.7ರಿಂದ 8 ದಿನಗಳ ಕಾಲ ಜಿಲ್ಲಾಡಳಿತ ಆಯೋಜಿಸಿರುವ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

8 days of glorious Chikkaballapur Utsav from jan 7th gvd
Author
First Published Jan 7, 2023, 1:39 PM IST

ಚಿಕ್ಕಬಳ್ಳಾಪುರ (ಜ.07): ಜಿಲ್ಲೆಯಾಗಿ ಚಿಕ್ಕಬಳ್ಳಾಪುರಕ್ಕೆ 15 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಉತ್ಸವದ ಹೊಸ್ತಿಲಲ್ಲಿ ನವ ವಧುವಿನಂತೆ ಜಿಲ್ಲಾ ಕೇಂದ್ರ ಸರ್ವ ರೀತಿಯಲ್ಲೂ ಸಿಂಗಾರಗೊಂಡು ಜನರನ್ನು ಕೈ ಬೀಸಿ ಕರೆಯುತ್ತಿದ್ದು, ಜ.7ರಿಂದ 8 ದಿನಗಳ ಕಾಲ ಜಿಲ್ಲಾಡಳಿತ ಆಯೋಜಿಸಿರುವ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿಕ್ಕಬಳ್ಳಾಪುರ ಉತ್ಸವದ ಭಾಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪದ್ಮಶ್ರೀ ಶಂಕರ್‌ ಮಹದೇವನ್‌, ನಟ ಕಿಚ್ಚ ಸುದೀಪ್‌ರ ಭಾಗವಹಿಸಲಿದ್ದು ಪ್ರವೀಣ್‌ ಗೋಡ್ಕಿಂಡಿ, ನಿರುಪಮ, ರಾಜೇಂದ್ರ ಸೇರಿ ಅನೇಕ ಅಂತಾರಾಷ್ಟ್ರೀಯ ಕಲಾವಿದರಿಂದ ಗಾಯನ, ನೃತ್ಯ ವೈಭವದ ಪ್ರದರ್ಶನವಿದ್ದು ಅಂದು ಸಾಂಸ್ಕೃತಿಕ ಜಗತ್ತೇ ನಗರದಲ್ಲಿ ಮೈದಳೆಯಲಿದೆ.

ದೀಪಾಲಂಕಾರ: ನಗರದ ಪ್ರಮುಖ ರಸ್ತೆಗಳಾದ ಬಿಬಿ ರಸ್ತೆ, ಎಂಜಿ ರಸ್ತೆ, ಬಜಾರ್‌ ರಸ್ತೆ, ವಾಪಸಂದ್ರ ಮುಖ್ಯ ರಸ್ತೆ, ಗಂಗಮ್ಮ ಗುಡಿ ರಸ್ತೆ, ನಂದಿ ರಸ್ತೆ, ಶಿಡ್ಲಘಟ್ಟ ರಸ್ತೆಯಿಂದ ಡೀಸಿ ಕಚೇರಿವರೆಗೂ ಕೂಡ ಉತ್ಸವಕ್ಕೆ ಮೆರಗು ನೀಡುವ ವಿದ್ಯುತ್‌ ದೀಪಾಲಂಕಾರ ಎಲ್ಲರನ್ನು ಉತ್ಸವದ ಕಡೆ ಆಕರ್ಷಿಸುವ ನಿಟ್ಟಿನಲ್ಲಿ ಮಾಡಲಾಗಿದ್ದು ಎಲ್ಲೆಲ್ಲೂ ಉತ್ಸವದ್ದೇ ಮಾತು ಕೇಳಿ ಬರುತ್ತಿದ್ದು, ಅಕ್ಷರಶಃ ವಿಶ್ವ ವಿಖ್ಯಾತ ಹಂಪಿ, ದಸರಾ ಮಾದರಿಯಲ್ಲಿ ಮಾಡಿರುವ ವಿದ್ಯುತ್‌ ದೀಪಾಲಂಕಾರದಿಂದ ಇಡೀ ಚಿಕ್ಕಬಳ್ಳಾಪುರ ನಗರ ಎತ್ತ ಕಣ್ಣಾಯಿಸಿದರೂ ಝಗಮಗಿಸುತ್ತಿದೆ.

ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

ಫಲ-ಪುಷ್ಪ, ವಸ್ತು ಪ್ರದರ್ಶನ: ಇನ್ನು, ಉತ್ಸವಕ್ಕೆ ಸ್ವಾಗತಿಸುವ ಬೃಹತ್‌ ಫ್ಲೆಕ್ಸ್‌, ಬ್ಯಾನರ್‌, ಜಾನಪದ ಶೈಲಿಯ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಜೊತೆಗೆ ಚಿಕ್ಕಬಳ್ಳಾಪುರ ಉತ್ಸವದ ಭಾಗವಾಗಿ ತೋಟ ಗಾರಿಕೆ ಇಲಾಖೆಯಿಂದ ಆಕರ್ಷಕ ಫಲಪುಪ್ಪ ಪ್ರದರ್ಶನ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಖಾದಿ, ಆರೋಗ್ಯ ಇಲಾಖೆ, ನರಗಾ ಯೋಜನೆಯಡಿ ಗ್ರಾಹಕರಿಗೆ, ರೈತರಿಗೆ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿವಿಧ ಬಗೆಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.

ಇತಿಹಾಸ ಸೃಷ್ಟಿಸಲಿದೆ: ನಂದಿಬೆಟ್ಟ, ನಂದಿ ಭೋಗನಂದೀಶ್ವರ ಆಲಯದ ಸೆಟ್‌ ಅಳವಡಿಸಿ ಮುಖ್ಯವೇದಿಕೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರಿಗೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಧ್ವನಿ, ಬೆಳಕು ವ್ಯವಸ್ಥೆ ಅಳವಡಿಸಲಾಗಿದೆ. ಒಟ್ಟಾರೆ ‘ಚಿಕ್ಕಬಳ್ಳಾಪುರ ಉತ್ಸವ’ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಜನಮಾನಸದಲ್ಲಿ ಉಳಿಯಲಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಉಗ್ರ ನಂಟಲ್ಲಿ ಸೆರೆಯಾದ ರಿಹಾನ್‌ ತಂದೆಗೆ ಕಾಂಗ್ರೆಸ್‌ ನಂಟು: ಶಾಸಕ ರಘುಪತಿ ಭಟ್‌

ಕಾರ್ಯಕ್ರಮಕ್ಕೆ ಸಿಎಂ ಚಾಲನೆ: ಶನಿವಾರ ಸಂಜೆ 5.30ಕ್ಕೆ ಗಂಟೆಗೆ ನಗರದ ಜಿಲ್ಲಾ ಸರ್‌ಎಂವಿ ಕ್ರೀಡಾಂಗಣದಲ್ಲಿ ನಂದಿಬೆಟ್ಟ, ನಂದಿ ಬೋಗನಂದೀಶ್ವರ ಆಲಯದ ಪ್ರತಿಬಿಂಬವಾಗಿ ನಿರ್ಮಿಸಿರುವ ವೈಭವದ ಮುಖ್ಯ ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಚುಂಚಶ್ರೀಗಳ ಸಾನಿಧ್ಯದಲ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ವಹಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನೀಲ್‌ ಕುಮಾರ್‌ ಭಾಗವಹಿಸಲಿದ್ದಾರೆ.

Follow Us:
Download App:
  • android
  • ios