Chikkaballapura; ಇಲಿಗಳ ಕಾಟ ತಾಳಲಾರದೆ ಬೆಕ್ಕು ಸಾಕಿದ ಪೊಲೀಸರು!
ಕಳೆದ ಒಂದು ವರ್ಷದಿಂದ ಬೆಕ್ಕು ಸಾಕುತ್ತಿರುವ ಪೊಲೀಸರಿಗೆ ಇಲಿಗಳ ಕಾಟದಿಂದ ಕೊನೆಗೂ ಮುಕ್ತಿ ಸಿಕ್ಕಿದೆ. ಇಲಾಖೆಯ ಮಹತ್ವದ ದಾಖಲೆಗಳು ಸೇಫ್ ಆಗಿದೆ. ಯಾವ ಠಾಣೆಯಲ್ಲಿ ಬೆಕ್ಕು ಸಾಕಲಾಗಿದೆ ಎಂಬ ಸ್ಟೋರಿ ಇಲ್ಲಿದೆ.
ವರದಿ; ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಬಳ್ಳಾಪುರ (ಜೂನ್ 30): ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸರು ಇಲಿಗಳ ಕಾಟದಿಂದಾಗಿ ಮುಕ್ತಿ ಪಡೆಯಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ. ಹೌದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟದಿಂದ ಮಹತ್ವದ ದಾಖಲೆಗಳನ್ನು ಕಳೆದುಕೊಳ್ಳುತ್ತಿರುವ ಪೊಲೀಸರಿಗೆ ಈಗ ಮೂಕ ಪ್ರಾಣಿಯ ಆಸೆರೆ ಅನಿವಾರ್ಯವಾಗಿದ್ದು, ಠಾಣೆಯಲ್ಲಿ ಬೆಕ್ಕುಗಳನ್ನು ಸಾಕಿಕೊಂಡಿದ್ದಾರೆ.
ಈ ಹಿಂದೆ ಠಾಣೆಯಲ್ಲಿ ಇಲಾಖೆಯ ಮಹತ್ವದ ದಾಖಲೆಗಳನ್ನು ಇಲಿಗಳ ಕಾಟದಿಂದ ರಕ್ಷಣೆ ಮಾಡಲು ಪರದಾಟ ನಡೆಸುವಂತಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಬೆಕ್ಕನ್ನು ಸಾಕುತ್ತಿರುವುದರಿಂದ ಇಲಿಕಾಟದಿಂದ ಪೊಲೀಸ್ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಜೊತೆಗೆ ಎಲ್ಲಾ ಸಿಬ್ಬಂದಿಯು ಬೆಕ್ಕನ್ನು ಹಾರೈಕೆ ಮಾಡುತ್ತಾ ಕೆಲಸದಲ್ಲಿ ನಿರತರಾಗಿದ್ದಾರೆ.
Dharwad New SP ಪತ್ರಿಕಾಗೋಷ್ಠಿ, ಮಧ್ಯ ಮಾರಾಟಕ್ಕೆ ಇನ್ಮುಂದೆ ಬ್ರೇಕ್
ಪೊಲೀಸರಂತೆ ಠಾಣೆಯಲ್ಲಿ ಬೆಕ್ಕು ಗಸ್ತು
ಹೌದು ಪೊಲೀಸ್ ಸಿಬ್ಬಂದಿ ಯಾವುದೆ ಅನಾಹುತ, ಅಪರಾಧ ಗಳು ಆಗದಂತೆ ಬೀಟ್ ಪೊಲೀಸರಾಗಿ ಗಸ್ತು ಮಾಡುತ್ತಿದ್ರೆ, ಇತ್ತ ಪೊಲೀಸ್ ಠಾಣೆಯಲ್ಲಿ ದಾಖಲೆಗಳು ಹಾಳಾಗದಂತೆ ಪ್ರತಿನಿತ್ಯ, ರಾತ್ರಿ ಹಗಲು ದಾಖಲೆಗಲಿ ಇರೋ ಕಡೆ ಇಲಿಗಳು ಬಾರದಂತೆ ಕಟ್ಟೆಚ್ಚರ ವಹಿಸುತ್ತಿದೆ. ಹೀಗಾಗಿ ಠಾಣೆಯಲ್ಲಿ ದಾಖಲೆಗಳು ಸುರಕ್ಷಿತವಾಗಿವೆ. ಇದರಿಂದಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದು, ಯಾವುದೇ ದಾಖಲೆಗಳು ಡ್ಯಾಮೇಜ್ ಆಗದಂತೆ ಬೆಕ್ಕು ನಿಗಾ ವಹಿಸುತ್ತಿರುವುದು ವಿಶೇಷ.
ಇಲಿಗಳ ಕಾಟಕ್ಕೆ ಬೇಸತ್ತು ಹೋಗಿದ್ದ ಪೊಲೀಸರು!
ಕೊಲೆ ಆರೋಪಿಗಳು, ಕಳ್ಳರು, ಪುಂಟ ಪೋಕರಿಗಳನ್ನು ಮಟ್ಟ ಹಾಕಿ ಯಶಸ್ವಿಯಾಗಿದ್ದ ಪೊಲೀಸರಿಗೆ ಇಲಿಗಳ ಹಾವಳಿ ಹೆಚ್ಚಾಗಿತ್ತು. ಇಲಿಗಳ ಕಾಟಕ್ಕೆ ಪೊಲೀಸರು ರೋಸಿ
ಹೊಗಿದ್ರು.. ಪ್ರತಿದಿನ ಬೆಳಗಾದ್ರೆ ಸಾಕು ಇಲಿಗಳು ಠಾಣೆಗೆ ನುಗ್ಗಿ ದಾಖಲೆಗಳನ್ನು ಹಾಳು ಮಾಡುತ್ತಿದ್ದವು, ಇದರಿಂದ ಬೆಕ್ಕನ್ನು ಸಾಕುವ ಐಡಿಯಾ ಮಾಡಿದ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಕೊನೆಗೂ ದಾಖಲೆಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Udupi; ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ವಿಶಿಷ್ಟ ಕಲ್ಪನೆಗೆ ಮರುಚಾಲನೆ
l
ಬೆಕ್ಕಿಗೆ ಕಳ್ಳ ಇಲಿಗಳನ್ನು ಹಿಡಿಯೋದೆ ಕಾಯಕ!
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ನಗರ ಪ್ರದೇಶದಿಂದ ಸ್ವಲ್ಪ ದೂರದಲ್ಲಿದ್ದು, ಸುತ್ತಮು ಬಯಲು ಪ್ರದೇಶವಿದೆ, ಹೀಗಾಗಿ ಅಲ್ಲಿ ಇಲಿಗಳು ಓಡಾಟ ನಡೆಸೋದು ಹೆಚ್ಚು, ಇಂತಹ ಕಳ್ಳ ಇಲಿಗಳನ್ನು ಭೇಟೆಯಾಡಿ ಅವುಗಳನ್ನು ಠಾಣೆಗೆ ಬಾರದಂತೆ ಬೆಕ್ಕು ನೋಡಿಕೊಳ್ಳುತ್ತಿದೆ. ಕಳೆದ ಒಂದು ವರ್ಷದಿಂದ ಬೆಕ್ಕು ಸಾಕುತ್ತಿರುವ ಪೊಲೀಸರಿಗೆ ಇಲಿಗಳ ಕಾಟದಿಂದ ಕೊನೆಗೂ ಮುಕ್ತಿ ಸಿಕ್ಕಿದೆ. ಇದರಿಂದ ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ.
ಇನ್ನೂ ಹೊಸ ಐಡಿಯಾ ಹುಡುಕಿದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆಗಳು ಕೇಳಿ ಬರುತ್ತಿವೆ. ಇದೇ ಪ್ರಯೋಗವನ್ನು ಇಡೀ ರಾಜ್ಯದ ಪೋಲಿಸ್ ಠಾಣೆಗಳಲ್ಲಿ ಪ್ರಯೋಗಿಸಿದರೆ ಒಂದು ಕಡೆ ಮೂಕ ಪ್ರಾಣಿಗಳ ರಕ್ಷಣೆ ಮತ್ತೊಂದು ಕಡೆ ಇಲಾಖೆಗೆ ಸಂಬಂಧಪಟ್ಟಂತಹ ಮಹತ್ವವಾದ ದಾಖಲೆಗಳನ್ನು ರಕ್ಷಿಸಬಹುದೆಂಬುವುದಕ್ಕೆ ಗೌರಿಬಿದನೂರು ಪೊಲೀಸ್ ಠಾಣೆ ಮುಖ್ಯ ಉದಾಹರಣೆಯಾಗಿದೆ.