Asianet Suvarna News Asianet Suvarna News

Dharwad New SP ಪತ್ರಿಕಾಗೋಷ್ಠಿ, ಮಧ್ಯ ಮಾರಾಟಕ್ಕೆ ಇನ್ಮುಂದೆ ಬ್ರೇಕ್

ಧಾರವಾಡ ಜಿಲ್ಲೆಗೆ ಹೊಸದಾಗಿ ಆಗಮಿಸಿದ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಜಿಲ್ಲೆಯಲ್ಲಿ ಎನೇ ಸಮಸ್ಯಗಳಿದ್ರು ನನ್ನ ಮುಂದೆ ಮುಕ್ತವಾಗಿ  ಹಂಚಿಕ್ಕೊಳ್ಳಬಹುದು ಎಂದಿದ್ದಾರೆ.

Lokesh Bharamappa Jagalasar  appointed as new SP for Dharwad gow
Author
Bengaluru, First Published Jun 30, 2022, 3:56 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಜೂನ್ 30) : ಧಾರವಾಡ ಜಿಲ್ಲೆಗೆ ಹೊಸದಾಗಿ ಆಗಮಿಸಿದ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಅವರು ಕಳೆದ ಎರಡು ದಿನದ ಹಿಂದೆ ಅಧಿಕಾರ ಸ್ವಿಕಾರ ಮಾಡಿದ್ದಾರೆ. ಇಂದು ಮಾದ್ಯಮಗಳ ಜೊತೆ ಮಾತನಾಡಿದ ಲೋಕೇಶ ಜಗಲಾಸರ್ ಅವರು ನಾನು ಧಾರವಾಡ ಜಿಲ್ಲೆಗೆ ಹೊಸದಾಗಿ ಅಧಿಕಾರ ಸ್ವಿಕಾರ ಮಾಡಿಕ್ಕೊಂಡಿದ್ದೇನೆ. ಜಿಲ್ಲೆಯಲ್ಲಿ ಎನೇ ಸಮಸ್ಯಗಳಿದ್ರೂ ನನ್ನ ಮುಂದೆ ಮುಕ್ತವಾಗಿ ಸಾರ್ವಜನಿಕರು, ಮಾದ್ಯಮದವರು ಹಂಚಿಕ್ಕೊಳ್ಳಬಹುದು ಎಂದರು. 

ಎಸ್ಪಿ ಕಚೇರಿ ಆವರಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಎಸ್ಪಿ. ಜಿಲ್ಲೆಯಲ್ಲಿ ಎನೆ ಅಪರಾಧಗಳು ನಡೆದರೆ ನಮ್ಮ ಸಿಬ್ಬಂದಿಗಳು ಜನರಿಗೆ ಸ್ಪಂದನೆ ನೀಡುವಂತೆ ನಾನು ಇಗಾಗಲೆ ಸೂಚನೆ ನೀಡಿದ್ದೆನೆ. ನಾವು ಸಾರ್ವಜನಿಕರ ಹಿತ ದೃಷ್ಠಿಗೆ ಕೆಲಸ ಮಾಡಲು ಸದಾ ಸಿದ್ದನಿದ್ದೆನೆ. ಸಾರ್ವ ಜನಿಕರು, ಆಪಿಸ್ ಸಮಯದಲ್ಲಿ ನನ್ನ ನಂಬರಗೆ ಎನೆ ಸಮಸ್ಯಗಳಿದ್ರು ನೇರವಾಗ ಕರೆ ಮಾಡಬಹುದು ಎಂದರು. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭೆಗೂ ಮುನ್ನವೇ ಪ್ರತ್ಯೇಕ ಪಾಲಿಕೆ ಹೋರಾಟ!

ಇನ್ನು ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟವನ್ನ ನಿಲ್ಲಿಸಲು ಕೆಲಸ ಮಾಡಲಾಗುವುದು, ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯವರು ಜಂಟಿ ಕಾರ್ಯಾಚರಣೆ ಮಾಡಿ ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಅಂತಹುಗಳ ಮನೆಗಳ ಮೆಲೆ ರೇಡ್ ಮಾಡಲಾಗುವುದು, ಎಂದು ಮದ್ಯ ಮಾರಾಟ ದಂದೆಕೋರರಿಗೆ ಖಡಕ್ ಎಚ್ಚರಿಕೆಯನ್ನ ನೀಡಿದರು. 

ಇನ್ನು ಅತಿಹೆಚ್ಚು ದಾಬಾಗಳಲ್ಲಿ ಮದ್ಯ ಸಿಗುತ್ತಿದೆ.ಮದ್ಯ ರಾತ್ರಿಯವರೆಗೂ ದಾಬಾಗಳು ಸ್ಟಾಟ್ ಇರುತ್ತೆ. ಎಂಬ ಮಾದ್ಯಗಳ ಪ್ರಶ್ನೆಗೆ ಮಾತನಾಡಿದ ಅವರು ನಾವು ದಾಬಾಗಳಲ್ಲಿ ನಿಗಾ ಇಡುತ್ತೆವೆ, ಎಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಜಿಲ್ಲೆಯಲ್ಲಿ ರೌಢಿಗಳಿಗು ಕೂಡಾ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ. 

Davangere ಸಿಟಿಯಲ್ಲಿ ಈಗ 24 ಗಂಟೆಯೂ ಸಿಸಿಟಿವಿ ಕಣ್ಗಾವಲು

ಇನ್ನು ಬಂಡಾಯದ ನಾಡು ನವಲಗುಂದದಲ್ಲಿ ಅತಿ ಹೆಚ್ಷಾಗಿ ಪೋಲಿಸ್ ಇಲಾಖೆ ಕೆಲಸ ಮಾಡುತ್ತೆ.ಯಾಕೆಂದ್ರ ಮಹದಾಯಿ ಹೋರಾಟಕ್ಕಾಗಿ ಇಗಾಗಲೆ ರೈತರು ಮತ್ತೆ ಹೋರಾಟ ಮಾಡಲು ಮುಂದಾದರೆ ಎನೆಲ್ಲ ಬಂದೂಬಸ್ತಗಳನ್ನ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಕಳೆದ 2016 ರಲ್ಲಿ ನಡೆದ ಲಾಠಿಚಾರ್ಜ ಘಟನೆಯನ್ನ ಒಂದು ಸಾರಿ ಮೆಲುಕು ಹಾಕಿ ನವಲಗುಂದದಲ್ಲಿ ಎನೆಲ್ಲ ಪೊಲಿಸ್ ಇಲಾಖೆ ಬಂದೂಬಸ್ತಗಳನ್ನ ನೀಡಬೇಕು ಅದನ್ನ ಪೊಲಿಸ್ ಇಲಾಖೆ ಖಂಡಿತ ಮಾಡುತ್ತೆ. ಇನ್ನು ಜಿಲ್ಲೆಯ ಎಲ್ಲ ತಾಲೂಕುಗಳ ಪೋಲಿಸ್ ಠಾಣೆಗೆ ನಾನು ಬೇಟಿ ಕೊಡಲಿದ್ದೆನೆ. ಜನ ಸಂಪರ್ಕ ಸಭೆಗಳನ್ನ ಕೂಡಾ ಮಾಡುತ್ತೆನೆ ಎಂದರು.

ಬಿಜೆಪಿಯಿಂದ ಬೆದರಿಕೆ, ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ರೋಷಾವೇಷ

ಇಗಾಗಲೆ ಬಾಗಲಕೋಟೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಧಾರವಾಡ ಜಿಲ್ಲೆಗೆ ನಾನು ವರ್ಗಾವಣೆ ಯಾಗಿ ಬಂದಿದ್ದೆನೆ. ಎನೆ ಇದ್ರು ನನ್ನ ಜೋತೆ ನೇರವಾಗಿ ಮುಕ್ತವಾಗಿ ಎಲ್ಲರೂ ಸಹಾರವನ್ನ ನೀಡಬೇಕು ಎಂದು ಮಾಸ್ಯಮದವರಿಗೆ ಹೇಳಿದರು.ಇನ್ನು ಸಮಾಜದಲ್ಲಿ ಶಾಂತತೆಯನ್ನ ಕಾಪಾಡಲೂ ಪೋಲಿಸ್ ಇಲಾಖೆ ಮತ್ತು ಮಾದ್ಯಗಳ ಪಾತ್ರ ತುಂಬಾ ದೊಡ್ಡದಿದೆ. ಎಲ್ಲರೂ ಸೇರಿ ಜಿಲ್ಲೆಯ ಶಾಂತತೆಯನ್ನ ಕಾಪಾಡಿಕ್ಕೊಂಡು ಹೋಗೋಣ ಎಂದು ಸಭಾಂಗಣದಲ್ಲಿ ಮಾತನಾಡಿದರು. 

Follow Us:
Download App:
  • android
  • ios