Crop Insurance for Farmers: 15 ದಿನದೊಳಗೆ ರೈತರಿಗೆ ಬೆಳೆ ವಿಮೆ
- ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಗೆ ಬೆಳೆ ಹಾನಿ
- ರೈತರು ಬೆಳೆ ವಿಮೆ ಮಾಡಿಸಿ ಕೊಂಡಿದ್ದಲ್ಲಿ ಅಂತಹ ಕೃಷಿ ಬೆಳೆಗಳ ಸಂತ್ರಸ್ತ ರೈತರಿಗೆ ಕೂಡಲೆ ವಿಮಾ ಪರಿಹಾರ
ಚಿಕ್ಕಬಳ್ಳಾಪುರ (ನ.25): ಜಿಲ್ಲೆಯಲ್ಲಿ (Chikkaballapura) ಇತ್ತೀಚಿಗೆ ಸುರಿದ ಭಾರಿ ಮಳೆಗೆ ಬೆಳೆ ಹಾನಿಯಾಗಿರುವ ರೈತರು ಬೆಳೆ ವಿಮೆ ಮಾಡಿಸಿ ಕೊಂಡಿದ್ದಲ್ಲಿ ಅಂತಹ ಕೃಷಿ ( agriculture ) ಬೆಳೆಗಳ ಸಂತ್ರಸ್ತ ರೈತರಿಗೆ ಕೂಡಲೆ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ, ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪನಿಯ ಉಪ ವ್ಯವಸ್ಥಾಪಕರಿಗೆ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬೆಳೆ ವಿಮೆ (insurance) ಪರಿಹಾರ ಪಾವತಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 15 ದಿನಗಳ ಒಳಗಾಗಿ ಸಂತ್ರಸ್ತ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಪಾವತಿಸುವ ಕುರಿತು ತುರ್ತು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈ ವರ್ಷ ದಾಖಲೆಯ ಮಳೆಯಾಗಿದೆ (Rain). ಕಟಾವಿಗೆ ಬಂದ ಶೇ.50 ರಷ್ಟು ಕೃಷಿ ಬೆಳೆಗಳು ಅತೀವೃಷ್ಟಿಗೆ ನಾಶವಾಗಿವೆ. ಇಂತಹ ಸಂಕಷ್ಟದ ಸಂದಿಗ್ಧ ಸಮಯದಲ್ಲಿ ಸಹಾಯವಾಗಲೆಂದೇ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಅತೀ ಶೀಘ್ರವಾಗಿ ಬೆಳೆ ವಿಮೆ (insurance) ಪರಿಹಾರವನ್ನು ಪಾವತಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟಬೆಳೆ ವಿಮೆ ಕಂಪನಿಗಳು ಮುಂದಾಗಬೇಕು. ಅಗತ್ಯ ಮಾಹಿತಿಯನ್ನು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳು ಸಂತ್ರಸ್ತ ರೈತರಿಂದ ಪಡೆದಿದ್ದು, ಆ ಎಲ್ಲಾ ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಿ ಬೆಳೆ ವಿಮೆ ಪಾವತಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ರಾಗಿ (Millet), ಮುಸುಕಿನ ಜೋಳ, ನೆಲಗಡಲೆ, ತೊಗರಿ ಬೆಳೆ ಬೆಳೆಯುವ 10,563 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಈ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ-94, ಗೌರಿಬಿದನೂರು ತಾಲೂಕಿನಲ್ಲಿ-5092, ಗುಡಿಬಂಡೆ ತಾಲೂಕಿನಲ್ಲಿ-1086, ಚಿಂತಾಮಣಿ ತಾಲೂಕಿನಲ್ಲಿ-269, ಬಾಗೇಪಲ್ಲಿ ತಾಲೂಕಿನಲ್ಲಿ-2824,ಶಿಡ್ಲಘಟ್ಟತಾಲ್ಲೂಕಿನಲ್ಲಿ-1198 ರೈತರು ಬೆಳೆ ವಿಮೆ ಮಾಡಿಸಿದ್ದಾರೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಎಲ್ .ರೂಪಾ, ಅಗ್ರಿಕಲ್ಚರಲ್ ಇನ್ಸುರೆಸ್ಸ್ ಕಂಪನಿಯ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ವರುಣ್, ಶ್ರೀನಿವಾಸ್, ಪ್ರಗತಿ ಪರ ರೈತರಾದ ಮಾರಪ್ಪನಹಳ್ಳಿ ನವೀನ್, ಕುರುಬೂರು ಚಂದ್ರಶೇಖರ್ ಗೌಡ, ಶಿಡ್ಲಘಟ್ಟದ ಮಂಜುನಾಥ ಹಾಗೂ ವಿಮಾ ಕಂಪನಿಗಳ ತಾಲೂಕು ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
10,563 ರೈತರಿಂದ ಬೆಳೆ ವಿಮೆ
ಬೆಳೆ ವಿಮೆ ಮಾಡಿಸಿರುವ 10,563 ಜನರಲ್ಲಿ ಬಹುತೇಕ ರೈತರ ಬೆಳೆಗಳು ಮಳೆಹಾನಿಗೆ ಒಳಗಾಗಿ ಅಪಾರ ನಷ್ಟವಾಗಿದೆ. ಆ ಎಲ್ಲಾ ರೈತರಿಗೆಲ್ಲ ಕೂಡಲೆ ಬೆಳೆ ವಿಮೆ ಪಾವತಿಸಲು ಮುಂದಾಗಿ ಎಂದು ವಿಮಾ ಕಂಪನಿಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿದರು ಹಾಗೂ ಮುಂದಿನ ದಿನಗಳಲ್ಲಿ ಬೆಳೆ ವಿಮೆ ಮಾಡಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಡೀಸಿ ಸೂಚನೆ ನೀಡಿದರು.
ಹಾನಿ ತಪ್ಪುಸಲು ಏನು ಮಾಡಬೇಕು..?
ವ್ಯಾಪಕ ಮಳೆಯಿಂದ (Heavy rain) ಜಿಲ್ಲೆಯಲ್ಲಿ (Chikkaballapura District) ಕೃಷಿ, ತೋಟಗಾರಿಕಾ ಬೆಳೆಗಳು ಸಂಕಷ್ಟದಲ್ಲಿವೆ. ಈಗಾಗಲೇ ಅನೇಕ ಬೆಳೆ (Crops) ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಕಳೆದ ಅನೇಕ ದಿನಗಳಿಂದಲೂ ಜಿಲ್ಲಯಲ್ಲಿ ಸುರಿಯುತ್ತಿರುವ ಮಳೆಯಿಂದ (Rain) ಸಾವಿರಾರು ಎಕರೆಯಲ್ಲಿ ಬೆಳೆದ ವಿವಿಧ ರೀತಿಯ ಬೆಳೆಗಳು ನಷ್ಟವಾಗಿದೆ. ಬೆಳೆ ಕೊಳೆಯುವುದು. ಮೊಳಕೆಯೊಡೆವುದು. ಕೊಚ್ಚಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇತ್ತ ಅನ್ನದಾತ (farmers) ಕಂಗಾಲಾಗಿದ್ದಾನೆ. ಹಾಗಾದರೆ ಮಳೆಯಿಂದ ಬೆಳೆ ಸಂರಕ್ಷಣೆ ಹೇಗೆ ..? ಕೃಷಿ ವಿಜ್ಞಾನಿಗಳು (Scientist) ನೀಡಿರುವ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಕೃಷಿ ವಿಜ್ಞಾನಿಗಳು ನೀಡಿರುವ ಸಲಹೆಗಳಿಂದ ನಷ್ಟ ತಪ್ಪಿಸಿ ಬೆಳೆಗಳನ್ನು ರಕ್ಷಿಸಿ.
ಸತತ ಮೂರು ದಿನಗಳಿಂದ ಸುರಿದ ಮಳೆಯಿಂದ ಹೊಲದಲ್ಲಿ ನಿಂತ ನೀರನ್ನು (water) ಬಸಿದು ಹೋಗುವಂತೆ ಮಾಡಬೇಕು. ಸತತ ಮಳೆಯಿಂದಾಗಿ ಬೆಳೆಗಳ ಎಲೆ ಹಳದಿ (yellow) ಬಣ್ಣವಾಗುವ ಸಾಧ್ಯತೆ ಇರುವುದರಿಂದ ರೈತರು 19:19:19 ಪ್ರತಿ ಲೀಟರ್ ನೀರಿಗೆ 6 ಮಿ.ಲೀ. ಬೆರೆಸಿ ಸಿಂಪಡಿಸಬೇಕು.
ತೊಗರಿ ಮತು ಅವರೆ : ಜಿಲ್ಲೆಯಾದ್ಯಂತ ತೊಗರಿ ಬೆಳೆಯು ಹೂ (Flower) ವಾಡುವ ಹಂತದಲ್ಲಿದೆ. ಆಂತಹ ಕಡೆ ಕಾಯಿ ಕೊರಕ ಕೀಟದ ಮೊಟ್ಟೆ (egg) ಮತ್ತು ಮೊದಲನೇ ಹಂತದ ಹುಳುಗಳು ಕಂಡುಬಂದಿವೆ. ಇವುಗಳ ಸಂಖ್ಯೆಯು ಆರ್ಥಿಕ ನಷ್ಟವನ್ನುಂಟು ಮಾಡುವಷ್ಟು ಇರುವುದರಿಂದ ತಪ್ಪದೇ ರೈತರು ಮೊದಲನೇ ಸಿಂಪರಣೆಯಾಗಿ ಮೋಟ್ಟೆ ನಾಶಕಗಳಾದ ಪ್ರೋಫೆನೋಫಾಸ್ (profenophos) 50 ಇಸಿ 2.0 ಮಿ.ಲೀ. ಅಥವಾ ಥಯೋಡಿಕಾರ್ಬ 0.6 ಗ್ರಾಂ. ಅಥವಾ ಮಿಥೋಮಿಲ್ 0.6 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿಎಕರೆಗೆ 250 ಲೀಟರ್ ಸಿಂಪರಣಾ ದ್ರಾವಣ ಉಪಯೋಗಿಸಬೇಕು.