ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.

ಚನ್ನರಾಯಪಟ್ಟಣ (ಜು.19): ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.

ಮೈತುಂಬಾ ಸಾಲ, ಆಸ್ತಿ ಕೊಡದ ತಂದೆ, ನಡೆದೇಹೋಯ್ತು ಕೊಲೆ

ನಿವೃತ್ತ ಶಿಕ್ಷಕರಾಗಿದ್ದ ಚನ್ನೇಗೌಡ ಎಂಬುವವರು ಮಗನಿಂದ ಹತ್ಯೆಗೀಡಾಗಿದ್ದು, ತಂದೆಯನ್ನು ಕೊಂದ ಮಗ ಬಿಂದುಕುಮಾರ ಅದೇ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಹಲವು ಕಾರಣಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದ ಬಿಂದುಕುಮಾರ ಅದರಿಂದ ಹೊರಬರಲು ತನ್ನ ತಂದೆಯ ಬಳಿ ಆಸ್ತಿ ಕೊಡುವಂತೆ ದಂಬಾಲು ಬಿದ್ದಿದ್ದ. ಮಗನ ಬುದ್ದಿ ತಿಳಿದಿದ್ದ ತಂದೆ ಚನ್ನೇಗೌಡರು ಆಸ್ತಿ ಕೊಡಲು ನಿರಾಕರಿಸುತ್ತಿದ್ದರು. 

ಆಸ್ತಿ ಕೊಡದ ತಂದೆಯನ್ನ ಕೊಂದು ತಾನೂ ಇಲ್ಲವಾದ!

ಇದರಿಂದ ತಂದೆಯ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದ ಬಿಂದುಕುಮಾರ ತನ್ನ ತಂದೆಯ ಮನೆಗೆ ಬಂದು ಇದೇ ವಿಚಾರವಾಗಿ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ತನ್ನ ಮೇಲೆ ನಿಯಂತ್ರಣ ಕಳೆದುಕೊಂಡ ಮಗ ತನ್ನ ತಂದೆಯನ್ನು ಕೊಂದಿದ್ದಾನೆ. ನಂತರ ಏನು ಮಾಡಬೇಕೆಂದು ಗೊತ್ತಾಗದೆ ಅದೇ ಮನೆಯಲ್ಲಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ.

ವಿಷಯ ತಿಳಿದು ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಎಸ್ಪಿ ಶುಭನ್ವಿತಾ ಕೂಡ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.