20 ಲಕ್ಷ ಲಂಚ: ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಸೇರಿ 4 ಜನರ ಸೆರೆ

40 ಲಕ್ಷ ರು. ಲಂಚ ಕೇಳಿ, 20 ಲಕ್ಷ ರು. ಪಡೆಯುತ್ತಿದ್ದಾಗ ಖಾಸಗಿ ರೆಸಾರ್ಟ್‌ನಲ್ಲಿ ನಗರಸಭೆಯ ಹಾಲಿ ಅಧ್ಯಕ್ಷರ ಪತಿ, ನಗರಸಭೆ ಹಾಲಿ ಸದಸ್ಯ ಸೇರಿ ನಾಲ್ವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು. 

Chickballapur CMC Member and 4 People Arrested For Taken Bribe grg

ಚಿಕ್ಕಬಳ್ಳಾಪುರ(ಡಿ.18):  ನಗರಸಭೆಯಲ್ಲಿ ನಿವೇಶನಗಳಿಗೆ ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದಾಗ ಗೌರಿಬಿದನೂರು ನಗರಸಭೆಯ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 40 ಲಕ್ಷ ರು. ಲಂಚ ಕೇಳಿ, 20 ಲಕ್ಷ ರು. ಪಡೆಯುತ್ತಿದ್ದಾಗ ಖಾಸಗಿ ರೆಸಾರ್ಟ್‌ನಲ್ಲಿ ನಗರಸಭೆಯ ಹಾಲಿ ಅಧ್ಯಕ್ಷರ ಪತಿ, ನಗರಸಭೆ ಹಾಲಿ ಸದಸ್ಯ ಸೇರಿ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಅವರ ಪತಿ ಅನಂತರಾಜು, ನಗರಸಭೆ 5ನೇ ವಾರ್ಡ್‌ ಸದಸ್ಯ ಆರ್‌.ಪಿ.ಗೋಪಿನಾಥ್‌, 1ನೇ ವಾರ್ಡ್‌ನ ನಗರಸಭೆ ಸದಸ್ಯೆ ಪತಿ ಸಿ.ಮೈಲಾರಪ್ಪ ಹಾಗೂ 20ನೇ ವಾರ್ಡ್‌ನ ನಗರಸಭಾ ಸದಸ್ಯೆ ಪತಿ ಪುರಸಭಾ ಸದಸ್ಯ ಜಿ.ಮಂಜುನಾಥ ಬಂಧಿತರು.

ಬಂಧಿತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕಿನ ರಾಜಾನುಕುಂಟೆ ಸಮೀಪದ ರೆಸಾರ್ಚ್‌ನಲ್ಲಿ ಲಂಚದ ಹಣ ಸ್ಪೀಕರಿಸುವ ವೇಳೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಪವನ್‌ ನೆಜ್ಜೂರು, ಲೋಕಾಯುಕ್ತ ಡಿವೈಎಸ್‌ಪಿ ಭೂತೇಗೌಡ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕರಾದ ಸಲೀಂ ನದಾಫ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ಅಮರೇಶ್‌ಗೌಡ ಹಾಗೂ ಕೃಷ್ಣಮೂರ್ತಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

BIG 3 HERO: ಚಿಕ್ಕಬಳ್ಳಾಪುರದ ವೈದ್ಯ ದಂಪತಿ & ಮಂಗಳೂರಿನ ಕ್ರಿಯೇಟಿವ್ ಆರ್ಟಿಸ್ಟ್ ರಾಜ್ ಕುಮಾರ್

ಏನಿದು ಪ್ರಕರಣ:

ಬೆಂಗಳೂರು ನಗರ ಜಿಲ್ಲೆಯ ಯಲಹಂಕದ ಅದ್ದೆ ವಿಶ್ವನಾಥಪುರದ ಮಂಜುನಾಥ ಎಂಬುವರು ಶ್ರೀಸಾಯಿ ಪ್ರಾಪರ್ಟೀಸ್‌ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದು, ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿಯ ಮಾದನಹಳ್ಳಿಯ ಬಳಿ 7.39 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿದ್ದಾರೆ. ನಿಯಮದಂತೆ ಗೌರಿಬಿದನೂರು ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದಿದ್ದು, ಪ್ರಾಧಿಕಾರದಿಂದಲೇ ಖಾತೆ ಮಾಡಿಕೊಡಲು ನ.15ರಂದು ನಗರಸಭೆಗೆ ಪತ್ರ ಬರೆದಿದ್ದಾರೆ. ನ.25ರಂದು ನಗರಸಭೆ ಪೌರಾಯುಕ್ತರಿಗೆ ಇ-ಸ್ವತ್ತು ಕೊಡಲು ಮನವಿ ಸಲ್ಲಿಸಿದ್ದಾರೆ. ಆದರೆ ನಗರಸಭೆ ಸದಸ್ಯರಾದ ಗೋಪಿ ಹಾಗೂ ಮೈಲಾರಿ ಎಂಬವರು ಖಾತೆ ಮಾಡಿಕೊಡಲು ತಮ್ಮನ್ನು ಭೇಟಿ ಮಾಡದೆ ನೇರವಾಗಿ ಪೌರಾಯಕ್ತರಿಗೆ ಮನವಿ ಸಲ್ಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಮಗೆ ದುಡ್ಡು ಕೊಡದೆ ಹೇಗೆ ಖಾತೆ ಮಾಡಿಸಿಕೊಳ್ಳುತ್ತಿ ನೋಡಿಕೊಳ್ಳುತ್ತೇವೆಂದು ಬೆದರಿಕೆ ಹಾಕಿದ್ದಾರೆ.
ಬಳಿಕ ಗೋಪಿ ಹಾಗೂ ಮೈಲಾರಿ ನಿವೇಶನಗಳಿಗೆ ಖಾತೆ ಮಾಡಿಕೊಡಲು 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತು ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಬಂಧಿತರು ಯಾರು?

1. ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಅವರ ಪತಿ ಅನಂತರಾಜು
2. ನಗರಸಭೆ 5ನೇ ವಾರ್ಡ್‌ ಸದಸ್ಯ ಆರ್‌.ಪಿ.ಗೋಪಿನಾಥ್‌
3. ನಗರಸಭೆ 1ನೇ ವಾರ್ಡ್‌ ಸದಸ್ಯೆ ಪತಿ ಮೈಲಾರಪ್ಪ
4. ನಗರಸಭೆ 20ನೇ ವಾರ್ಡ್‌ ಸದಸ್ಯೆ ಪತಿ ಮಂಜುನಾಥ್‌
 

Latest Videos
Follow Us:
Download App:
  • android
  • ios