Chhatrapati Shivaji Jayanti ಬೆಳಗಾವಿಯಲ್ಲಿ ಸತತ 12 ಗಂಟೆಗಳ ಕಾಲ ಅದ್ಧೂರಿ ಮೆರವಣಿಗೆ!
- ಕೋವಿಡ್ ಹಿನ್ನೆಲೆ ಎರಡು ವರ್ಷ ಅದ್ಧೂರಿ ಮೆರವಣಿಗೆ ನಡೆದಿರಲಿಲ್ಲ
- ಇದೇ ಮೊದಲ ಬಾರಿ ಡ್ರೋಣ್ ಮೂಲಕ ಖಾಕಿ ಕಣ್ಗಾವಲು
- ಶಾಂತಿಯುತ ಮೆರವಣಿಗೆ ಸಾಗಲು ಎರಡು ಸಾವಿರಕ್ಕೂ ಅಧಿಕ ಪೊಲೀಸರ ಶ್ರಮ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಮೇ.5): ಕಳೆದ ಎರಡು ವರ್ಷಗಳಿಂದ ಕೋವಿಡ್ (Covid 19) ಹಿನ್ನೆಲೆ ನಡೆಯದ ಶಿವಜಯಂತಿ (Shiv Jayanti) ಮೆರವಣಿಗೆ ಈ ವರ್ಷ ಅತಿ ವಿಜೃಂಭಣೆಯಿಂದ ನೆರವೇರಿತು. ಬುಧವಾರ ಸಂಜೆ 6 ಗಂಟೆಗೆ ಆರಂಭಗೊಂಡಿದ್ದ ಶಿವಜಯಂತಿ ಮೆರವಣಿಗೆ ಇಂದು ಬೆಳಗ್ಗೆ 6 ಗಂಟೆಗೆ ಮುಕ್ತಾಯಗೊಂಡಿತು. ಶಾಂತಿಯುತವಾಗಿ ಮೆರವಣಿಗೆ ( Procession) ಸಾಗಲು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಎರಡು ಸಾವಿರಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದರು.
ಅಷ್ಟೇ ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಇದೇ ಮೊದಲ ಬಾರಿ ಖಾಕಿ ಡ್ರೋಣ್‌ಗಳನ್ನು ತರೆಯಿಸಿ ಮೆರವಣಿಗೆಯುದ್ದಕ್ಕೂ ಕಣ್ಗಾವಲು ಇಟ್ಟಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ (Chhatrapati Shivaji Maharaj Jayanti) ನಿಮಿತ್ತ ನಿನ್ನೆ ಸಂಜೆ 6 ಗಂಟೆಗೆ ಮೆರವಣಿಗೆಗೆ ಶಾಸಕರಾದ ಅಭಯ್ ಪಾಟೀಲ್ ಅನಿಲ್ ಬೆನಕೆ ಚಾಲನೆ ನೀಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಜೈ ಶಿವಾಜಿ-ಜೈ ಭವಾನಿ ಎಂಬ ಘೋಷ ವಾಕ್ಯಗಳೊಂದಿಗೆ ಆರಂಭವಾದ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು.
MANGALURU ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ: ವಿಎಚ್ ಪಿ ಆರೋಪ
ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕಲಾಕೃತಿಗಳು, ರೂಪಕಗಳು ವಾದ್ಯಮೇಳಗಳು, ದೇಸಿ ಸೊಗಡಿನ ಡೋಲು ಮೆರವಣಿಗೆಗೆ ಮೆರಗು ತಂದವು. ಬೆಳಗಾವಿ ನಗರದ ನರಗುಂದಕರ್ ಭಾವೆ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮಾರುತಿ ಬೀದಿ, ಕಿರ್ಲೋಸ್ಕರ್ ರಸ್ತೆ, ರಾಮದೇವ ಬೀದಿ, ಸಮಾದೇವಿ ಬೀದಿ, ಕಾಲೇಜು ರಸ್ತೆ, ಬೋಗಾರವೆಸ್, ವೃತ್ತದ ಮಾರ್ಗವಾಗಿ ರಾಮಲಿಂಗಖಿಂಡ ಬೀದಿ, ಮೇಮು ಕಲಾನಿ ಚೌಕ್, ತಹಶೀಲ್ದಾರ್ ಗಲ್ಲಿ, ಬಾಂದೂರ್ ಗಲ್ಲಿ ಮಾರ್ಗವಾಗಿ ಕಪಿಲೇಶ್ವರ ದೇವಸ್ಥಾನ ಬಳಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ಶಿವಚರಿತ್ರೆ ಕಟ್ಟಿಕೊಟ್ಟ ರೂಪಕಗಳು: ಬೆಳಗಾವಿ (Belagavi) ನಗರದ ವಿವಿಧ ಬಡಾವಣೆಗಳಿಂದ 70ಕ್ಕೂ ಹೆಚ್ಚು ರೂಪಕಗಳು ಛತ್ರಪತಿ ಶಿವಾಜಿ ಮಹಾರಾಜರ ಸಾಹಸಕಥೆ ಬೀರುವ ಶಿವಚರಿತ್ರೆ ಕಟ್ಟಿ ಕೊಟ್ಟವು. ವಿವಿಧ ಯುವಕ ಮಂಡಳ, ಮಹಿಳಾ ಸ್ವ ಸಹಾಯ ಸಂಘಗಳು ಸದಸ್ಯರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಕಿರುನಾಟಕಗಳನ್ನು ಪ್ರದರ್ಶಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯ ಜೀವನ, ಅವರು ಕಲಿತ ಯುದ್ಧ ಕಲೆ, ಪಟ್ಟಾಭಿಷೇಕ, ಕೋಟೆಗಳನ್ನು ಗೆದ್ದು ರಾಜ್ಯಭಾರ ಮಾಡಿರುವ ಪ್ರಸಂಗ, ರಾಜ ತಾಂತ್ರಿಕತೆ, ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ದರ್ಬಾರ್ ಹಾಗೂ ಅಫಜಲ್ ಖಾನ್‌ನನ್ನು ಜಾಣ್ಮೆಯಿಂದ ವಧಿಸಿದ ದೃಶ್ಯ, ಜೀಜಾಮಾತೆಯ ಮಾರ್ಗದರ್ಶನ, ದಾದಾಜಿ ಕೊಂಡದೇವರ ಗುರೋಪದೇಶ, ಶಿವಾಜಿ ಮಹಾರಾಜರ ಭಕ್ತಿಗೆ ಪ್ರಸನ್ನಳಾಗಿ ಕೋಲ್ಹಾಪೂರದ ಮಹಾಲಕ್ಷ್ಮಿ ದೇವಿ ಖಡ್ಗ ಪ್ರದಾನ ಮಾಡಿದ ದೃಶ್ಯ ಹೀಗೆ ಹತ್ತು ಹಲವು ಘಟನಾವಳಿಗಳನ್ನು ಮೆರವಣಿಗೆಯುದ್ದಕ್ಕೂ ಭಾಗಿಯಾದ ರೂಪಕಗಳು ಕಟ್ಟಿಕೊಟ್ಟವು.
Chikkamagaluru ಕಾರಿಗೆ ಅಪ್ಪಳಿಸಿದ ವಿದ್ಯುತ್ ಕಂಬ, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಸಂಪೂರ್ಣ ಕೇಸರಿಮಯವಾಗಿದ್ದ ಕುಂದಾನಗರಿ ಬೆಳಗಾವಿ: ಇನ್ನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯುದ್ದಕ್ಕೂ ಭಗವಾ ಧ್ವಜಗಳು ರಾರಾಜಿಸಿದವು. ವಿವಿಧ ಸಂಘಟನೆಗಳ ಯುವಕರ ಶಕ್ತಿ ಪ್ರದರ್ಶನ, ಬೆಂಕಿ ಉಗುಳುವಿಕೆ, ಸಿಡಿಮದ್ದು ಸಿಡಿಸಿ, ಗುಲಾಲು ಸಿಂಪಡಿಸಿ ಯುವಕರು ಸಂಭ್ರಮಿಸಿದರು. ಡಿಜೆ ಸೌಂಡ್ ಸಿಸ್ಟಮ್ ಎದುರಂತೂ ಯುವಕರು ಸಖತ್ ಸ್ಟೆಪ್ ಹಾಕಿದರು.
ಶಾಸಕ ಅರವಿಂದ ಬೆಲ್ಲದ ಅಕ್ರಮಗಳನ್ನು ಬಯಲಿಗೆ ಎಳೆಯುವೆ: ನಾಗರಾಜ್ ಗೌರಿ