ಶಾಸಕ ಅರವಿಂದ ಬೆಲ್ಲದ ಅಕ್ರಮಗಳನ್ನು ಬಯಲಿಗೆ ಎಳೆಯುವೆ: ನಾಗರಾಜ್ ಗೌರಿ

  • ಶಾಸಕ ಅರವಿಂದ  ಬೆಲ್ಲದ ಅವರ ಅಕ್ರಮವನ್ನ  30 ದಿನದಲ್ಲಿ ಬಯಲಿಗೆಳೆಯುತ್ತೆನೆ 
  • ಬೆಲ್ಲದ ಅವರಿಂದ ರಾಜಕಾಲುವೆ ಅತಿಕ್ರಮಣ 
  • ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೆತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌರಿ ಆರೋಪ

 

congress leader nagaraj gouri illegal activities allegations against MLA Arvind Bellad gow

 ಧಾರವಾಡ (ಮೇ.5): ಶಾಸಕ ಅರವಿಂದ ಬೆಲ್ಲದ ಅವರು ಉಣಕಲ್ ಕೆರೆಯ ಪಕ್ಕದಲ್ಲಿ  ಅವರು ಕಾರ್ ಶೋರೋಮ್ ಇದೆ. ರಾಜಕಾಲುವೆಯನ್ನ ಶಾಸಕ ಅರವಿಂದ ಬೆಲ್ಲದ ಅವರು ಅತಿಕ್ರಮಣ ಮಾಡಿಕ್ಕೊಂಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಅವರ ವಿರುದ್ದ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೆತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌರಿ   ಕಿಡಿಕಾರಿದರು. ಪತ್ರಿಕಾಗೋಷ್ಠಿ ಮಾತನಾಡಿದ ಅವರು ಶಾಸಕ ಅರವಿಂದ ಬೆಲ್ಲದ ಅವರ ಅಕ್ರಮಗಳನ್ನ ಬಯಲಿಗೆಳೆಯುತ್ತೆನೆ ಎಂದು ಹೇಳಿದರು.

ಶಾಸಕ ಅರವಿಂದ ಅವರು ಕರೆ ಒತ್ತುವರಿ, ಮತ್ತು ರಾಜಕಾಲುವೆಯನ್ನ ಅತಿಕ್ರಮಣ ಮಾಡಿಕ್ಕೋಂಡು ಕಾರ್ ಶೋರೂಮ್ ಗಳನ್ನ ನಿರ್ಮಾಣ ಮಾಡಿದ್ದಾರೆ. ಧಾರವಾಡದ ಕೊಪ್ಪದಕೇರೆ ಬಾವಿಯನ್ನ ಮುಚ್ಚುವ ಕೆಲಸವನ್ನ ಮಾಡಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರು ಕೆರೆ, ಬಾವಿ, ಕಾಲುವೆ ನುಂಗುವಂತ ಶಾಸಕರಾಗಿದ್ದಾರೆ..ಅಧಿಕಾರಿಗಳು ಅವರ ಕೈ ಗೊಂಬೆ ಯಾಗಿದ್ದಾರೆ..ಪಾಲಿಕೆಯಲ್ಲಿ ಮಾಹಿತಿ ಕೇಳಿದರೆ ಯಾವುದೆ ಮಾಹಿತಿಯನ್ನ ನೀಡುತ್ತಿಲ್ಲ. 1990 ರಿಂದ ಸಿ ಎ ಸೈಟ್ ಗಳನ್ನ ಶಾಸಕರು ಕುಟುಂಬಸ್ಥರ ಹೆಸರಲ್ಲಿ ಪಡೆದುಕ್ಕೊಂಡಿದ್ದಾರೆ. ಎಲ್ಲ ಅಧಿಕಾರಿಗಳಿಗೆ ಹೆದರಿಸಿ ತಮ್ಮ‌ಕಪಿಮುಷ್ಠಿಯಲ್ಲಿ ಇಟ್ಟುಕ್ಕೊಂಡಿದ್ದಾರೆ. ಅಧಿಕಾರಿಗಳು ಕೂಡಾ ಶಾಸಕರ ಕೈ ಗೊಂಬೆಯಾಗಿದ್ದಾರೆ. 

Tumakuru ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ವಾಸನೆ

ನಾನು ಆರ ಟಿ ಆಯ್ ಅಡಿಯಲ್ಲಿ ಮಾಹಿತಿಯನ್ನ ಕೇಳುತ್ತೇನೆ. ನನಗೆ 30 ದಿನದಲ್ಲಿ ಮಾಹಿತಿ ಕೊಡಬೇಕು, ಆರ್ ಟಿ ಆಯ್ ಅಡಿಯಲ್ಲಿ ಮಾಹಿತಿಯನ್ನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿಯನ್ನ ಕೇಳುತ್ತೆನೆ ಅಧಿಕಾರಿಗಳು ಕೊಡದೆ ಹೋದರೆ ನಾನು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸುತ್ತೆನೆ.

ಕಳೆದ 10 ವರ್ಷದಿಂದ ಶಾಸಕ ಅರವಿಂದ ಬೆಲ್ಲದ ಅವರು ಅವಳಿ ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನ ಅತಿಕ್ರಮಣ ಮಾಡಿಕ್ಕೊಂಡಿದ್ದಾರೆ..ಆದಷ್ಡು ಬೇಗ ನಾನು ಶಾಸಕ ಅರವಿಂದ ಬೆಲ್ಲದ ಅವರ ಅಕ್ರಮಗಳನ್ನ ಬಯಲಿಗೆ ಎಳೆಯುತ್ತೆನೆ...ಎಂದು ಶಾಸಕ ಅರವಿಂದ ಬೆಲ್ಲದ ಅವರಿಗೆ ಸವಾಲ್ ಹಾಕಿದ ನಾಗರಾಜ ಗೌರಿ..ಇನ್ನು ಕೆಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡ್ತಾ ಇದ್ರೆ ಅವರನ್ನ‌ ಎತ್ತಂಗಡಿ ಮಾಡುವ ಕೆಲಸವನ್ನ ಶಾಸಕ ಅರವಿಂದ ಬೆಲ್ಲದ ಅವರು ಮಾಡುತ್ತಿದ್ದಾರೆ.

ಮಂಗಳೂರಿನಲ್ಲಿ ಬುರ್ಖಾಧಾರಿಗಳ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣು!

PSI  ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!: ಪಿ ಎಸ್ ಐ ನೇಮಕಾತಿಯಲ್ಲಿ (PSI Recruitment Scam)  ಬಾರಿ ಅಕ್ರಮ ದಂಧೆ ಸರಕಾರದಲ್ಲಿ ನಡಿತಾ ಇದೆ. 2021 ರಲ್ಲಿ ಆದ ಪಿಎಸ್ಐ ನೋಟಿಪಿಕೇಶ‌ನ್ ಆಗಿ ಪೆಬ್ರವರಿ 2022 ರಂದು ಮತ್ತೊಮ್ಮೆ ನೋಟಿಪಿಕೇಶನ್ ಮಾಡಿತ್ತ ಸರಕಾರ ಪರೀಕ್ಷೆ ಅಡಿಯಲ್ಲಿ 545 ಜನ ಅಭ್ಯರ್ಥಿ ಗಳ ಪ್ರೋವಿಶಜನಲ್ ಲಿಸ್ಟ  ನಲ್ಲಿ ಆಯ್ಕೆ ಯಾಗಿದ್ದರು. ಕೆಪಿಸಿಸಿ ಮಾಧ್ಯಮ ವಿಶ್ಲೆಷಕ ಪಿ ಎಚ್ ನೀರಲಕೇರಿ (KPCC media analyst P.H. Neeralakeri  ) ಅವರು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ವಿದ್ಯಾರ್ಥಿಗಳಿಗೆ ಬ್ಲೂಟೂಥ್, ಮತ್ತು ವಿದ್ಯಾವಂತ ಅಭ್ಯರ್ಥಿ ಗಳ ಪಕ್ಕ ಮೊತ್ತೊಬ್ಬ ವಿದ್ಯಾರ್ಥಿಯ ಕುಳಿತುಕ್ಕೊಂಡು ಅವನು ಮಾರ್ಕ್ ಮಾಡಿದ್ದನ್ನೇ ಇವರು ಮಾರ್ಕ್ ಮಾಡಬೇಕು, ಒಂದು ಅಭ್ಯರ್ಥಿಯಿಂದ 80 ಲಕ್ಷ ಪಡೆದುಕೊಂಡು ಆಯ್ಕೆ ಮಾಡಿದ್ದಾರೆ ಎಂದು ಪ್ರತಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೆಷಕ ಪಿ ಎಚ್ ನೀರಲಕೇರಿ ಹೇಳಿದ್ದಾರೆ.

ಕಳೆದ 21 ದಿನದ ಹಿಂದೆ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯಾ ಎಂಬುವಳು ಬಿಜೆಪಿಯ ಅಪ್ಪಟ ಕಾರ್ಯಕರ್ತೆ, ಅವಳ ಹೀಂದೆ ಯಾವ ಶಾಸಕರು ಇದಾರೆ ಎಂಬುದು ತನಿಕೆಯಾಗಬೇಕು. ಸಿಐಡಿ ಮೇಲೆ ಪ್ರಭಾವ ಬೀರಿ ಸಚಿವರೊಬ್ಬರು ಅವರ  ಸಹೋದರನನ್ನ ಬಿಡಿಸಿ ಕಳಿಸಿದ್ದಾರೆ. ಸಿಐಡಿಯಿಂದ ಪಾರದರ್ಶಕವಾದ ತನಿಖೆ ಆಗ್ತಾ ಇಲ್ಲ , ಇದರಲ್ಲಿ ಸಿಐಡಿ ಪೇರ್ ಆಗಿ ವಿಚಾರಣೆಗೆ ಸರಕಾರ ಬಿಡ್ತಾ ಇಲ್ಲ.

ಕೇವಲ ಮರು‌ ಪರೀಕ್ಷೆ ಯಾರಿಗೆ ಮಾಡ್ತಾ ಇದಾರೆ ಅನ್ನೋದನ್ನ‌ ಸರಕಾರ ಸ್ಪಷ್ಟಪಡಿಸಬೇಕು. ಸರಕಾರದ ಮಂತ್ರಿಗಳು ಭಾಗಿಯಾಗಿದ್ದಾರೆ. ಸರಕಾರ ಪ್ರಕರಣ ಮುಚ್ಚಿ ಹಾಕಲು ಮರುಪರೀಕ್ಷೆ ಮಾಡ್ತಾ ಇದೆ. ಆದರೆ ಈ ಪ್ರಕರಣವನ್ನ ಕ್ಲಿಯರ್ ಮಾಡದೆ ಮರುಪರೀಕ್ಷೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಸರಕಾರದಲ್ಲಿ ಅಕ್ರಮಗಳನ್ನ‌ ಎತ್ತಿ ಹಿಡಿಯಲು ಇದೊಂದು ಪ್ರಕರಣ ಸಾಕು.  ಆರೋಪಿಗಳನ್ನು ರಕ್ಷಿಸುತ್ತಿರುವ ಸಚಿವರು ನೈತಿಕ‌ಹೊಣೆ ಹೊತ್ತು ರಾಜೀನಾಮೆ‌ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios