Asianet Suvarna News Asianet Suvarna News

Ramanagara: ಕುಡುಕರ ಅಡ್ಡೆಯಾದ ಶಾಲಾ ಆವರಣ, ಸುಸಜ್ಜಿತ ಕಾಂಪೌಂಡ್ ಇಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ

ರಾಮನಗರ ಜಿಲ್ಲೆ ಚನ್ನಪಟ್ಟಣ ಟೌನ್ ನ 30ನೇ ವಾರ್ಡ್ ನ ವೀರೇಗೌಡನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದಾಗಿದ್ದು, ಈ ಶಾಲೆ ಸ್ಥಾಪನೆಯಾಗಿ 40 ವರ್ಷಗಳ ಕಳೆಯುತ್ತಾ ಬಂದಿದೆ. ಅಲ್ಲಿಂದ ಇಲ್ಲಿಯ ತನಕ ಈ ಶಾಲೆಗೆ  ಕಾಂಪೌಂಡ್ ಇಲ್ಲದ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ.

Channapatna govt  school campus is a drunkard's den gow
Author
First Published Dec 9, 2022, 7:17 PM IST

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್

ರಾಮನಗರ (ಡಿ.9): ಆ ಕ್ಷೇತ್ರ ಇಬ್ಬರು ಘಟಾನುಘಟಿ ನಾಯಕರು ಪ್ರತಿನಿಧಿಸುವ ಕ್ಷೇತ್ರ ಆದ್ರೆ ಆ ಕ್ಷೇತ್ರದಲ್ಲಿ ಕಳೆದ 40 ವರ್ಷಗಳ‌ ಹಿಂದೆ ಆರಂಭವಾಗಿರುವ ಶಾಲೆಗೆ ಇದುವರೆಗೂ ಒಂದು ಕಾಂಪೌಂಡ್ ನಿರ್ಮಾಣ ಆಗಿಲ್ಲ, ಬೆಳಿಗ್ಗೆ ಆದ್ರೆ ಸಾಕು ಶಾಲೆಯ ಅಂಗಳದಲ್ಲೇ ರಾಶಿಗಟ್ಟಲೇ ಬಿಯರ್ ಬಾಟಲ್ ಗಳು, ಇರುತ್ತವೆ ಪ್ರತಿದಿನ ಅದನ್ನು ಕ್ಲೀನ್ ಮಾಡೋದೆ ವಿಧ್ಯಾರ್ಥಿಗಳ ಕೆಲಸವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ, ರಾಮನಗರ ಜಿಲ್ಲೆ ಚನ್ನಪಟ್ಟಣ ಟೌನ್ ನ 30ನೇ ವಾರ್ಡ್ ನ ವೀರೇಗೌಡನ ದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದಾಗಿದ್ದು, ಈ ಶಾಲೆ ಸ್ಥಾಪನೆಯಾಗಿ 40 ವರ್ಷಗಳ ಕಳೆಯುತ್ತಾ ಬಂದಿದೆ. ಅಲ್ಲಿಂದ ಇಲ್ಲಿಯ ತನಕ ಈ ಶಾಲೆಗೆ  ಕಾಂಪೌಂಡ್ ಇಲ್ಲದ ಕಾರಣ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿದೆ, ಶಾಲೆಯ ಮುಂಭಾಗದಲ್ಲೇ ರಾಜ್ಯ ಹೆದ್ದಾರಿ ಇರುವ ಹಿನ್ನೆಲೆ ಚನ್ನಪಟ್ಟಣದಿಂದ ಹಲಗೂರು ಹಾಗೂ ಸಾತನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇರುವ ಕಾರಣ  ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಾಲೆಯ ಮುಂಭಾಗ ಇರುವ ಜಾಗದಲ್ಲಿ ಶಾಲೆ ಮುಗಿದ ಮೇಲೆ ಅಲ್ಲಿನ ಸ್ಥಳೀಯರು ವಾಹನಗಳನ್ನು ಪಾರ್ಕಿಂಗ್ ಮಾಡಿ ಆವರಣದಲ್ಲಿ ಬೆಳೆದಿರುವ ಗಿಡಗಳನ್ನು ಹಾಳು ಮಾಡುತ್ತಿದ್ದಾರೆ.

ಇನ್ನು ಈ ಶಾಲೆಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಟೀಚರ್ ಪಾಠದ ಜೊತೆ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳಿಸುವ ಜವಾಬ್ದಾರಿ ಕೂಡ ಈ ಶಿಕ್ಷಕರ ಮೇಲಿದೆ, ಅಲ್ಲದೆ ಶನಿವಾರ ಭಾನುವಾರ ರಜೆ ಇದ್ದ ಕಾರಣ ಶಾಲಾ ಆವರಣ ಕುಡುಕರ ಅಡ್ಡೆ ಯಾಗಿ ಮಾರ್ಪಡುತ್ತದೆ. ಶಾಲೆ ಆರಂಭಿಸಬೇಕಾದರೆ ಬಾಟಲ್‌ಗಳು ಹಾಗೂ ಇನ್ನಿತರ ವಸ್ತುಗಳನ್ನ ಶಾಲಾ ಶಿಕ್ಷಕರ ಸುಚಿಗೊಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ, ಎಷ್ಟು ಬಾರಿ ಜಲಪ್ರತಿನಿಧಿಗಳಿಗೆ ಹಾಗೂ ನಗರಸಭಾ ಸದಸ್ಯರಿಗೆ ಕಾಂಪೌಂಡ್ ಕಟ್ಟಿಸುವಂತೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.

Dharwad: ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದ ಶಾಲೆಗೆ ಬೀಗ ಜಡಿದಿದ್ದ ಗ್ರಾಮಸ್ಥರು, ಬಿಇಒ ಸಂಧಾನ ಬಳಿಕ ಶಾಲೆ ಓಪನ್‌

 

ಇನ್ನು ಈ ಕ್ಷೇತ್ರದಲ್ಲಿ ಇಬ್ಬರು ಘಟಾನುಘಟಿ ನಾಯಕರು ಇದ್ದಾರೆ 20 ವರ್ಷ ಶಾಸಕರಾಗಿ ಹಾಗೂ ಎರಡು ಬಾರಿ ಮಂತ್ರಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಸಿಪಿ ಯೋಗೆಶ್ವರ್ ಒಂದು ಕಡೆ ಆದ್ರೆ ಮತ್ತೊಂದು ಕಡೆ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಇದೆ ಕ್ಷೇತ್ರದಿಂದ ಗೆದ್ದು ಎರಡನೇ ಬಾರಿ ಮುಖ್ಯಮಂತ್ರಿ ಆದವರು ಇವರಿಬ್ಬರಿಗೂ ಎಷ್ಟೇ ಮನವಿ ಮಾಡಿದರು ಈ ಶಾಲೆಗೆ ಸುಸಜ್ಜಿತವಾದ ಒಂದು ಕಾಂಪೌಂಡ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.

 

 Tamil Nadu: ಸರ್ಕಾರಿ ಶಾಲೆ ಶೌಚಾಲಯದಲ್ಲಿ ಪತ್ತೆಯಾಯ್ತು ನವಜಾತ ಶಿಶು ಶವ..!

ಒಟ್ಟಾರೆಯಾಗಿ ಮಕ್ಕಳು ಆಟವಾಡಲು ವ್ಯಾಯಾಮಕ್ಕೆ ಬಳಸಿಕೊಳ್ಳಬೇಕಾದ ಶಾಲೆಯ ಆವರಣದ ಜಾಗವನ್ನು ಸ್ಥಳೀಯರು ಪಾರ್ಕಿಂಗ್ ಗೆ  ಕುಡುಕರ ಅಡ್ಡೆಯಾಗಿ ಮಾಡಿಕೊಂಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ.

Follow Us:
Download App:
  • android
  • ios