Asianet Suvarna News Asianet Suvarna News

ಮುಂದಿನ 5 ದಿನಗಳ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಡಿ. 24ರ ವರೆಗೆ ಮಳೆಯಾಗುವ ಸಂಭವವಿಲ್ಲ.

Chance of rain in next 5 days is less snr
Author
First Published Dec 21, 2023, 10:21 AM IST

ತಿಪಟೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಡಿ. 24ರ ವರೆಗೆ ಮಳೆಯಾಗುವ ಸಂಭವವಿಲ್ಲ.

ಗಾಳಿಯು ವೇಗದಲ್ಲಿ ಬೀಸಲಿದ್ದು ವಾತಾವರಣ ಗರಿಷ್ಠ ಉಷ್ಣಾಂಶದಿಂದ ಕೂಡಿರಲಿದ್ದು ಮುಂದಿನ 5 ದಿನಗಳಲ್ಲಿ ಮಳೆಯಾಗುವ ಸಂಭವ ಕಡಿಮೆಯಿದ್ದು ಒಣ ಹವಾಮಾನ ಮುಂದುವರಿಯಲಿದೆ ಎಂದು ತಾಲೂಕಿನ ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿ ಡಾ.ವಿ. ಗೋವಿಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕಟಾವು ಮತ್ತು ಒಕ್ಕಣೆ ಮಾಡಬಹುದಾಗಿದ್ದು ಆಧ್ರತೆ ಹೆಚ್ಚಿರುವುದರಿಂದ ವಾಣಿಜ್ಯ ಕೋಳಿ ಶೆಡ್ ಮತ್ತು ರೇಷ್ಮೆ ಹುಳು ಘಟಕಗಳ ಕೋಣೆಯಲ್ಲಿ ಕೃತಕ ಶಾಖಗಳ ಮೂಲಕ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕು ಎಂದರು.

ತಮಿಳುನಾಡಲ್ಲಿ ವ್ಯಾಪಕ ಮಳೆ

ತಮಿಳುನಾಡು (ಡಿ.20): ಚೆನ್ನೈ ಭಾನುವಾರ ಸುರಿದ ಭಾರೀ ಮಳೆಗೆ ತತ್ತರಿಸಿರುವ ದಕ್ಷಿಣ ತಮಿಳುನಾಡಿನ ಕನ್ಯಾ ಕುಮಾರಿ, ತಿರುನೆಲ್ವೇಲಿ, ತೂತ್ತುಕುಡಿ ಮತ್ತು ತೆಂಕಾಸಿಗಳಲ್ಲಿ ಮಳೆ ಕಡಿಮೆಯಾ ಗಿದೆಯಾದರೂ ಪ್ರವಾಹ ಸ್ಥಿತಿ ಮುಂದು ವರೆದಿದ್ದು ರಾಜ್ಯದಲ್ಲಿ ಈವರೆಗೆ ಮಳೆ ಸಂಬಂಧಿಸಿದ ಘಟನೆಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಮಂಗಳವಾರ ತಿಳಿಸಿದ್ದಾರೆ

ಮಳೆಯಿಂದಾಗಿ ತೂತ್ತುಕುಡಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 800 ಮಂದಿ ಪೈಕಿ ಸೋಮವಾರ ರಾತ್ರಿ 300 ಜನರನ್ನು ಸುರಕ್ಷಿತವಾಗಿ ಸ್ಥಳೀಯ ಶಾಲೆಗೆ ಸ್ಥಳಾಂತರಿಸಲಾಗಿದೆ.

CWRC Meeting: ಭಾರಿ ಮಳೆಗೆ ತಮಿಳುನಾಡು ಕೊಚ್ಚಿ ಹೋದ್ರೂ ಪರವಾಗಿಲ್ಲ, ನಮಗೆ 14 ಟಿಎಂಸಿ ಕಾವೇರಿ ನೀರು ಬೇಕು!

ಈಗಾಗಲೇ ಮೇಲಿನ ನಾಲ್ಕೂ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಿ ಸಲಾಗಿದೆ. ಅಲ್ಲದೇ ಅತ್ಯಧಿಕ ಮಳೆಯಿಂ ದಾಗಿ ದಕ್ಷಿಣ ತಮಿಳುನಾಡಿನ ಬಹುತೇಕ ಆಣೆಕಟ್ಟುಗಳ ನೀರಿನ ಮಟ್ಟವು ಶೇ.80ರಿಂದ 100ರಷ್ಟಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಭಾನುವಾರ ಮತ್ತು ಸೋಮವಾರಕ್ಕೆ ಹೋಲಿಸಿದರೆ ತಮಿಳು ನಾಡಿನಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿದೆ ಯಾದರೂ, ರಸ್ತೆಗಳು, ತಗ್ಗು ಪ್ರದೇಶಗಳು ಮತ್ತು ಇತರ ವಸತಿ ಸಮುಚ್ಚಯಗಳಲ್ಲಿ ಪ್ರವಾಹದ ನೀರು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಜನರು ತೀರಾ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯ ಹವಾಮಾನ ಇಲಾಖೆಯು ರಾಜ್ಯದಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ.

ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ

ರೈಲು ನಿಲ್ದಾಣದಲ್ಲಿ ಸಿಲುಕಿದ್ದ 300 ಮಂದಿ ರಕ್ಷಣೆ: ಇನ್ನು ರಾಜ್ಯದಲ್ಲಿ ದಾಖಲೆಯ 95. ಸೆ.ಮೀ ಮಳೆಗೆ ತುತ್ತಾ ಗಿರುವ ತೂತ್ತುಕುಡಿ ರೈಲು ನಿಲ್ದಾಣದ ಸುತ್ತ ಪ್ರವಾಹ ಸೃಷ್ಟಿಯಾಗಿದ್ದರಿಂದ ನಿಲ್ದಾಣದಲ್ಲೇ ಸಿಲುಕಿದ್ದ 800 ಜನರ ಪೈಕಿ 300 ಜನರನ್ನು ರಕ್ಷಣೆ ಮಾಡಲಾಗಿದೆ. ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ ಮಾಡಲಾ ಗುತ್ತಿದ್ದು, ನಿಲ್ದಾಣದಲ್ಲಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. 

100 ಎನ್‌ಡಿಆರ್‌ಎಫ್‌ ಸಿಬ್ಬಂದಿ ತಂಡ ನಿಲ್ದಾಣದಲ್ಲಿ ಜನರ ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿದ್ದು, ರಕ್ಷಿಸಿದರವನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios