ಕೋರೋನಾ ದುರಂತ : ಡಿವೈಎಸ್‌ಪಿ ನೇತೃತ್ವದಲ್ಲಿ 24 ಮಂದಿ ಅಂತ್ಯಕ್ರಿಯೆ
ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ಕೊರೋನಾದಿಂದ ಮೃತಪಟ್ಟ 24 ಮಂದಿ ಅಂತ್ಯಕ್ರಿಯೆ ನಡೆಯಲಿದೆ. ಕೊರೋನಾ ವಾರಿಯರ್ಸ್ ಕೊರತೆ ಹಿನ್ನೆಲೆಯಲ್ಲಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.
ಚಾಮರಾಜನಗರ (ಮೇ.03): ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದು ಕೊರೋನಾ ವಾರಿಯರ್ಸ್ ಕೊರತೆ ಹಿನ್ನೆಲೆ ಇವರೆಲ್ಲರ ಶವಸಂಸ್ಕಾರದ ಜವಾಬ್ದಾರಿಯನ್ನು ಇಲ್ಲಿನ ಡಿವೈಎಸ್‌ಪಿ ಪ್ರಯದರ್ಶಿನಿ ಶಾಣೆಕೊಪ್ಪ ತೆಗೆದುಕೊಂಡಿದ್ದಾರೆ.
ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶಿನಿ ಶಾಣೆಕೊಪ್ಪ ಸ್ವತಹ ಪಿಪಿಇ ಕಿಟ್ ಧರಿಸಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಕೊರೋನಾ ಹಿನ್ನೆಲೆ ಪಾಲ್ಗೊಂಡವರಿಗೂ ಸೋಂಕು ತಗುಲಬಹುದಾದ ಭೀತಿ ಹಿನ್ನೆಲೆ ಕುಟುಂಬಕ್ಕೆ ಹಸ್ತಾಂತರ ಮಾಡುವ ಬದಲು ಡಿವೈಎಸ್‌ಪಿ ನೇತೃತ್ವದಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಕೋವಿಡ್ ನಿಂದ ಮೃತಪಟ್ಟವರ ವಿವರ..
ಕೀರ್ತನ , ತಿಮ್ಮರಾಜಿಪುರ
ಮೋಹನ್ ರಾಜ್ ಮೆಗಾವಾತ್,
ಸರೋಜಮ್ಮ, ಕಾಮಗೆರೆ.
ಮಹದೇವಸ್ವಾಮಿ, ನಂಜದೇವನಪುರ
ನಿಂಗಮ್ಮ, ಗುಂಡ್ಲುಪೇಟೆ
ಮಂಜುಳ, ಗುಂಡ್ಲುಪೇಟೆ
ಮಹದೇವಮ್ಮ, ನರಸೀಪುರ
ಪುಟ್ಟಮಾದನಾಯ್ಕ, ಜೋತಿಗೌಡನಪುರ
ಸುರೇಂದ್ರ, ದೊಡ್ಡಹೊಮ್ಮಾ.
ಮಹದೇವ್ ಸ್ವಾಮಿ, ಯರಿಯೂರು.
ಬೇಬಿ, ಚಾಮರಾಜನಗರ
ವೆಂಕಟಮ್ಮ, ಚಾಮರಾಜನಗರ
ಸುಮೇಶ್, ಚಾಮರಾಜನಗರ
ಗೀತಾ ಲಕ್ಷ್ಮಿ, ಚಾಮರಾಜನಗರ
ಅಜಯ್, ಕೆಸ್ತೂರು
ರಂಗಸ್ವಾಮಿ, ಚನ್ನಿಪುರದೊಡ್ಡಿ
ಯೋಗೇಶ್, ವೀರಯ್ಯನಪುರ
ದೊಡ್ಡಯ್ಯ, ಮಂಗಳ ಹೊಸೂರು
ಗುರುಪ್ರಸಾದ್ ಲಕ್ಕೂರು
ಶಿವಸ್ವಾಮಿ, ಚಂದಕವಾಡಿ
ಮಹದೇವಮ್ಮ, ಹನೂರು
ಸರೋಜಮ್ಮ, ಚಾಮರಾಜನಗರ
"
ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿ; ಸರ್ಕಾರವನ್ನು ದೂಷಿಸಿ ನುಣುಚಿಕೊಳ್ಳಲೆತ್ನಿಸಿದ ಶಾಸಕ ...
ಡೀಸಿ ಹೇಳಿಕೆ ಅಲ್ಲಗಳೆದ ಕುಟುಂಬಸ್ಥರು : ಚಾಮರಾಜನಗರ ಆಸ್ಪತ್ರೆಯಲ್ಲಿ ಒಂದೇ ದಿನ 24 ಮಂದಿ ಮೃತಪಟ್ಟಿದ್ದು ಇವರೆಲ್ಲರ ಸಾವಿಗೆ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ.
ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು ..
ಆಕ್ಸಿಜನ್ ಕೊರೆತೆಯಿಂದ ಈ ದುರಂತವಾಗಿಲ್ಲ ಎನ್ನುವ ಡೀಸಿ ರವಿ ಹೇಳಿಕೆ ಅಲ್ಲಗಳೆದ ಮೃತರ ಸಂಬಂಧಿಗಳು ನಿನ್ನೆ ಮಧ್ಯಾಹ್ನ ಆಕ್ಸಿಜನ್ ಒಂದು ಲೋಡ್ ಬಂದ ಮೇಲೆ ನಾವು ಆಸ್ಪತ್ರೆಗೆ ಸೇರಿಸಿದೆವು. ಸಂಜೆ 4.30ಕ್ಕೆ ಆಸ್ಪತ್ರೆ ಸೇರಿದವರು ರಾತ್ರಿ 10.30ಕ್ಕೆ ಸಾವಿಗೀಡಾಗಿದ್ದಾರೆ. ಒಂದೇ ವಾರ್ಡ್‌ನಲ್ಲಿ ಒಂದು ಸಾಲಿನಲ್ಲಿ ಇದ್ದವರೆಲ್ಲ ಸಾವಿಗೀಡಾಗಿದ್ದಾರೆ. ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಬದಲಾಯಿಸಿರಲಿಲ್ಲ. ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿವೆ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"