ಚಾಮರಾಜನಗರ ವಿವಿ ಭವಿಷ್ಯ ಡೋಲಾಯಮಾನ; ಸರ್ಕಾರದ ನಡೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಆಕ್ರೋಶ

ಬಿಜೆಪಿ ಸರ್ಕಾರ ಸ್ಥಾಪಿಸಿದ್ದ 7 ವಿವಿಗಳು ಪುನಃ ಮಾತೃ  ವಿವಿಗಳೊಂದಿಗೆ ಪುನರ್‌ ವಿಲೀನ ಮಾಡಲು ಸರ್ಕಾರ ಚಿಂತನೆ. ಸರ್ಕಾರದ ನಡೆಗೆ ಚಾಮರಾಜನಗರ ವಿವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಭಾರಿ ವಿರೋಧ ವ್ಯಕ್ತವಾಗಿದೆ
 

Chamarajanagar University re-merged with Mysore University issue Students, lecturers outraged at chamarajangar rav

ಚಾಮರಾಜನಗರ (ಡಿ.12): ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಹೊಂದಿರುವ  ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಅಂಬೇಡ್ಕರ್ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಹಿಂದಿನ ಬಿಜೆಪಿ ಸರ್ಕಾರ ಮುಂದಾಗಿತ್ತು. ಅದಕ್ಕಾಗಿ ನೂತನ ವಿವಿ ಸಹ ಸ್ಥಾಪನೆಯಾಗಿ ಕಾಡಂಚಿನ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾ ಕಿರಣವಾಗಿತ್ತು. ಆದ್ರೆ ಈಗ ಉನ್ನತ ಶಿಕ್ಷಣ ಸಚಿವರ ಆ ಒಂದು ಮಾತು ಈಗ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಆತಂಕ ಸೃಷ್ಠಿಸಿದೆ. 

ಶೇ. 52% ರಷ್ಟು ದಟ್ಟ ಕಾನನ, ಇನ್ನುಳಿದ 48% ಭೂ ಪ್ರದೇಶ ಹೊಂದಿರುವ, ಕೇರಳ ಹಾಗೂ ತಮಿಳುನಾಡಿನ ಗಡಿ ಹಂಚಿ ಕೊಳ್ಳುವ ಮೂಲಕ ಚಾಮರಾಜನಗರ ಗಡಿ ಜಿಲ್ಲೆ ಎಂದು ಹೆಸರುವಾಸಿಯಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ, ಶಾಪಗ್ರಸ್ಥ ಜಿಲ್ಲೆ ಎಂಬ ಹಣೆ ಪಟ್ಟಿ ಹೊಂದಿದ್ದು, ಶೈಕ್ಷಣಿಕವಾಗಿ ಮುಂದೆ ತರಲು ಕಳೆದ ಬಿಜೆಪಿ ಸರ್ಕಾರ ಮೈಸೂರು ವಿವಿಯಿಂದ ಪ್ರತ್ಯೇಕಗೊಳಿಸಿ ನೂತನವಾಗಿ ಚಾಮರಾಜನಗರ ಅಂಬೇಡ್ಕರ್ ವಿವಿಯನ್ನ ಸ್ಥಾಪಿಸಿತ್ತು. ಅಂಬೇಡ್ಕರ್ ವಿವಿ ಸ್ಥಾಪನೆಯಾದ ಬೆನ್ನಲ್ಲೇ ಮೈಸೂರಿಗೆ ಹೋಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳು ಚಾಮರಾಜನಗದ ನೂತನ ವಿವಿಗೆ ಅಡ್ಮಿಷನ್ ಆಗುವ ಮೂಲಕ ವ್ಯಾಸಂಗ ಮಾಡುವ ಆಸಕ್ತಿ ತೋರಿಸಿದ್ರು. ಎಲ್ಲವೂ ಸರಿ ಹೋಯ್ತು ಅನ್ನುವಷ್ಟರಲ್ಲಿ ಈಗ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬರ ಸಿಡಿಲು ಬಡಿತಂದಾಗಿದೆ. ಉನ್ನತ ಶಿಕ್ಷಣ ಸಚಿವರು ನೂತನ 7 ವಿವಿಯನ್ನು, ಮೂಲ ವಿವಿಗೆ ವಿಲೀನ ಗೊಳಿಸುವ ಮಾತು ಈಗ ಸಾವಿರಾರು ಬಡ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ಗುಂಡ್ಲುಪೇಟೆ: ಎಸ್ಸಿ, ಎಸ್ಟಿ ಸ್ಮಶಾನ ಒತ್ತುವರಿ: ಡಿಸಿಗೆ ಸಚಿವ ಮಹದೇವಪ್ಪ ಪತ್ರ

Chamarajanagar University re-merged with Mysore University issue Students, lecturers outraged at chamarajangar rav

ಸರ್ಕಾರದ ನಡೆಗೆ ಚಾಮರಾಜನಗರ ವಿವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ  ಭಾರಿ ವಿರೋಧ ವ್ಯಕ್ತವಾಗಿದ್ದು,  ಚಾಮರಾಜನಗರ  ಪ್ರತ್ಯೇಕ ವಿವಿ ಆದ ಮೇಲೆ ಹೆಚ್ಚಳವಾಗಿದ್ದು ಈ ಬಾರಿ     700 ವಿದ್ಯಾರ್ಥಿಗಳ  ಪೈಕಿ 600 ಕ್ಕು ಹೆಚ್ಚು ವಿದ್ಯಾರ್ಥಿನಿಯರೆ ಪ್ರವೇಶಾತಿ ಪಡೆದಿದ್ದು  ಹೆಣ್ಣು ಮಕ್ಕಳು, ಗಡಿ ಹಾಗು ಕಾಡಂಚಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗಿದ್ದ ನೂತನ ಚಾಮರಾಜನಗರ  ವಿವಿ ಯಾವುದೇ ಕಾರಣಕ್ಕೂ ಮುಚ್ಚಬಾರದು. ಇನ್ನೊಂದೆಡೆ ಚಾಮರಾಜನಗರದ ನೂತನ  ವಿವಿ ಯ ಬೋಧಕ ಬೋಧಕೇತರರಿಗೆ ಸುಮಾರು 4 ತಿಂಗಳಿಂದ ವೇತನ ಪಾವತಿಯಾಗದೆ  ಬೋಧಕ ಬೋಧಕೇತರ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ..

70ಕ್ಕೂ ಹೆಚ್ಚು ಉಪನ್ಯಾಸಕರು 35ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿಗೆ ವೇತನವೇ ಇಲ್ಲ!

ಚಾಮರಾಜನಗರ ಅಂಬೇಡ್ಕರ್ ವಿವಿ ಘೋಷಣೆಯಾದ ಬಳಿಕ ಕಾಡಂಚಿನ ಬಡ ಸೋಲಿಗ ಹಾಗೂ ಬುಡಕಟ್ಟು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅಡ್ಮಿಷನ್ ಆಗುವ ಮೂಲಕ ಉನ್ನತ ಶಿಕ್ಷಣವನ್ನ ವ್ಯಾಸಂಗ ಮಾಡಲು ಮುಂದಾಗಿದ್ದಾರೆ. ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂ ನಿಂದಲೂ ಸಹ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಿದ್ದಾರೆ. 22 ಪದವಿ ಕಾಲೇಜುಗಳು ಸಹ ಈ ಚಾಮರಾಜನಗರ ಅಂಬೇಡ್ಕರ್ ವಿವಿಯ ಅಡಿಯಲ್ಲಿ ಬರುತ್ತೆ. 7 ಸಾವಿರ ವಿದ್ಯಾರ್ಥಿಗಳು ಸಹ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ವಂತ ಜಿಲ್ಲೆ ಹಾಗೂ ಹತ್ತಿರ ಎಂಬ ಕಾರಣಕ್ಕೆ ಗಡಿ ಪ್ರದೇಶ ಹಾಗೂ ಕಾಡಂಚಿನ ಪ್ರದೇಶಗಳಿಂದ ಬರುತ್ತಿರುವ ವಿದ್ಯಾರ್ಥಿಗಳು ಮತ್ತೆ ಮೈಸೂರು ವಿವಿ ಯೊಂದಿಗೆ ಪುನರ್ ವಿಲೀನ ಮಾಡಿದರೆ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸುವ ಸಾಧ್ಯತೆ ಇದ್ದು ದೂರದ ಮೈಸೂರಿಗೆ ಹೋಗಲಾಗದೆ ಉನ್ನತ ಶಿಕ್ಷಣದಿಂದ  ವಂಚಿತರಾಗುವ ಆತಂಕ ಉಂಟುಮಾಡಿದೆ.   ಈಗ ಇದ್ದಕ್ಕಿದ್ದಂತೆ ಚಾಮರಾಜನಗರ  ಅಂಬೇಡ್ಕರ್ ವಿವಿಯನ್ನ ಮೂಲ ವಿವಿಯಾದ ಮೈಸೂರು ವಿವಿಗೆ ವಿಲೀನಗೊಳಿಸೊದು ಬೇಡ ಹಿಂದುಳಿದ ಜಿಲ್ಲೆ ಚಾಮರಾಜನಗರಲ್ಲೆ ಪ್ರತ್ಯೇಕ ಚಾಮರಾಜನಗರ ವಿವಿ ಇರಲಿ ಅನ್ನೋದು ವಿಧ್ಯಾರ್ಥಿಗಳ ಕೂಗು.

ಮಲೆ ಮಹದೇಶ್ವರ ಬೆಟ್ಟದಲ್ಲೂ ಈಗ ವನ್ಯಜೀವಿ ಸಫಾರಿ ಆರಂಭ! ಬುಕಿಂಗ್ ಹೇಗೆ? ಫೀ ಎಷ್ಟು? ಇಲ್ಲಿದೆ ಮಾಹಿತಿ

Chamarajanagar University re-merged with Mysore University issue Students, lecturers outraged at chamarajangar rav

ಒಟ್ಟಿನಲ್ಲಿ ಅರ್ಥಿಕ ಹೊರೆಯ ನೆಪವೊಡ್ಡುತ್ತಿರುವ ರಾಜ್ಯ ಸರ್ಕಾರ ಒಂದು ವೇಳೆ ಚಾಮರಾಜನಗರದ ಅಂಬೇಡ್ಕರ್ ವಿವಿಯನ್ನ ಮೈಸೂರಿನ ಮಾನಸ ಗಂಗೊತ್ರಿ ಮೂಲ ವಿವಿಗೆ ವಿಲೀನ ಮಾಡಿದ್ದೆ ಆದಲ್ಲಿ ಮುಂದೆ ಹೋರಾಟ ರೂಪಿಸಿ ವಿವಿ ಉಳಿಸಿಕೊಳ್ಳಲೂ ಸಾಹಿತಿಗಳು,ಶೈಕ್ಷಣಿಕ ಚಿಂತಕರು ವಿದ್ಯಾರ್ಥಿಗಳೊಂದಿಗೆ ಹೋರಾಟಕ್ಕಿಳಿಯಲಿದ್ದಾರೆ.

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್

Latest Videos
Follow Us:
Download App:
  • android
  • ios