Asianet Suvarna News Asianet Suvarna News

Chamarajanagar: ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪ್ಲಾಸ್ಟಿಕ್‌ ಚೀಲದಲ್ಲಿ ಪತ್ನಿಯ ದೇಹ ಸಾಗಿಸಿದ ಪತಿ

ಕೂಲಿ ಕಾರ್ಮಿಕರು ಹೆಚ್ಚಾಗಿರುವ ಬಡತನದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರದಲ್ಲಿ ಸಾವನ್ನಪ್ಪಿದ ಪತ್ನಿಯನ್ನು ಧಾರ್ಮಿಕ ಸಂಪ್ರದಾಯದಂತೆ ಶವ ಸಂಸ್ಕಾರ ಮಾಡಲು ಹಣವಿಲ್ಲದೇ ತನ್ನ ಪತ್ನಿಯ ಶವವನ್ನು ಪ್ಲಾಸ್ಟಿಕ್‌ ಮೂಟೆಯಲ್ಲಿ ಸಾಗಣೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ

Chamarajanagar Husband carried his wife body in plastic bag without money for cremation sat
Author
First Published Dec 7, 2022, 2:19 PM IST

ಚಾಮರಾಜನಗರ (ಡಿ.7): ರಾಜ್ಯದ ಗಡಿಜಿಲ್ಲೆ ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿರುವ ಬಡತನದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬಡತನದಲ್ಲಿಯೇ ಜೀವನ ಮಾಡಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಪತ್ನಿಯನ್ನು ಧಾರ್ಮಿಕ ಸಂಪ್ರದಾಯದಂತೆ ಶವ ಸಂಸ್ಕಾರ ಮಾಡಲು ಹಣವಿಲ್ಲದೇ ತನ್ನ ಪತ್ನಿಯ ಶವವನ್ನು ಪ್ಲಾಸ್ಟಿಕ್‌ ಮೂಟೆಯಲ್ಲಿ ಸಾಗಣೆ ಮಾಡಿರುವ ಘಟನೆ ನಡೆದಿದೆ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಾಗೆಪುರ ಗ್ರಾಮದ ಕಾಳಮ್ಮ (26) ಮೃತರಾಗಿದ್ದಾರೆ. ದಂಪತಿ ಕಳೆದ ಹಲವು ವರ್ಷಗಳಿಂದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ವಾಸವಿದ್ದರು. ಆದರೆ, ಇವರು ಕೂಲಿ ಕಾರ್ಮಿಕ ಕೆಲಸ ಮಾಡುವುದು ಹಾಗೂ ಚಿಂದಿ ಆಯುವ ಮೂಲಕ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ರವಿಯ ಪತ್ನಿ ಕಾಳಮ್ಮ ಅವರಿಗೆ ಅನಾರೋಗ್ಯ ಇದ್ದರೂ ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲಿದ ಮಹಿಳೆ ಸಾವನ್ನಪ್ಪಿದ್ದಾಳೆ. ಇನ್ನು ಇವರ ಬಡತನವನ್ನು ಕಂಡು ಯಾರೊಬ್ಬರೂ ಕೂಡ ನೆರವಿಗೆ ಬಂದಿಲ್ಲ. ಇತ್ತ ಹಣವಿಲ್ಲದೆ ಯಾರ ಸಹಾಯವೂ ಸಿಗುವುದಿಲ್ಲ ಎಂದರಿತ ರವಿ ತನ್ನ ಪತ್ನಿಯ ಶವವನ್ನು ಚಾಪೆ, ಹಾಸಿಗೆ ಮತ್ತು ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿಕೊಂಡು ರಸ್ತೆಯಲ್ಲಿ ಸಾಗಿಸುತ್ತಿರುವ ದೃಶ್ಯ ಇಡೀ ಮನುಕುಲವನ್ನೇ ಅಣಕಿಸುವಂತಿದೆ.

Chitradurga: ಕಾಲು ಜಾರಿ ಬಿದ್ದು ಪತ್ನಿ ಸಾವು, ಶಂಕಿಸಿದ್ದ ವೈದ್ಯ, ಪೋಸ್ಟ್ ಮಾರ್ಟಂ ಬಳಿಕ ಸತ್ಯ ಬಯಲು

ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ: ಗ್ರಾಮದ ರಸ್ತೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಶವ ಸಾಗಿಸುತ್ತಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡಿದಾಗ ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಈಗ ಮೃತಪಟ್ಟಿದ್ದಾಳೆ. ನನ್ನ ಬಳಿ ಶವ ಸಂಸ್ಕಾರ ಮಾಡಲು ಹಣವಿರಲಿಲ್ಲ. ಹೀಗಾಗಿ, ಮನೆಯಲ್ಲಿದ್ದ ಹಾಸಿಗೆಗಳು ಮತ್ತು ಪ್ಲಾಸ್ಟಿಕ್‌ ಚೀಲದ ಟಾರ್ಪಲ್‌ನಲ್ಲಿ ಶವವನ್ನು ಸುತ್ತಿಕೊಂಡು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ಆಂಬುಲೆನ್ಸ್ ಕರೆಸಿ, ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ಭಿಕ್ಷೆ ಬೇಡಿ ಹೆಂಡತಿ ಶವ ಸಂಸ್ಕಾರಕ್ಕೆ ಯತ್ನ: ನನ್ನ ಬಿಟ್ಟು ಬಂದು ಒಂದು ವಾರವಾಗಿತ್ತು. ಅವಳು ಬಂದು ಕುಂದಹಳ್ಳಿಯಲ್ಲಿ ಚಿಂದಿ ಆಯುತ್ತಾ ಬಂದ ಹಣದಲ್ಲಿ ಜೀವನ ಮಾಡಿಕೊಂಡಿದ್ದಳು. ನಾನು ಭಿಕ್ಷೆ ಬೇಡಿಕೊಂಡು ಊರೂರು ಸುತ್ತಾಡಿಕೊಂಡು ಬರುನಾನು ಭಿಕ್ಷೆ ಬೇಡಿಕೊಂಡು  ಬರುತ್ತಿದ್ದೆ. ಇವತ್ತು ಬಂದು ನೋಡಿದಾಗ ಕುಡಿಯಲು ನೀರು ಇಲ್ಲದೇ, ತಿನ್ನಲು ಆಹಾರ ಇಲ್ಲದೇ ಹುಷಾರಿಲ್ಲದೇ ಕಣ್ಣು ಮುಚ್ಚಿಕೊಂಡಿದ್ದಳು. ಶಾಲೆಯ ಪಕ್ಕದಲ್ಲಿಯೇ ಇದ್ದುದರಿಂದ ಮಕ್ಕಳು ನೋಡಿ ಭಯ ಪಡುತ್ತಾರೆ ಎಂದುಕೊಂಡು ಹಾಸಿಗೆ ಮತ್ತು ಪ್ಲಾಸ್ಟಿಕ್‌ನಲ್ಲಿ ಹೆಂಡತಿಯ ಶವ ಸುತ್ತಿಕೊಂಡು ಊರೊಳಗೆ ಬಂದು ಜನರ ಬಳಿ ಭಿಕ್ಷೆ ಬೇಡಿಕೊಂಡು ಪತ್ನಿಯ ಶವ ಸಂಸ್ಕಾರ ಮಾಡಬೇಕು ಎಂದುಕೊಂಡಿದ್ದೆ. ಎಲ್ಲರ ಬಳಿ ಹಣ ಕೇಳುತ್ತಿರುವಾಗ ಪೊಲೀಸರು ಬಂದು ಶವವನ್ನು ಚಾಮರಾಜನಗರಕ್ಕೆ ತಂದಿದ್ದಾರೆ ಎಂದು ಮೃತ ಮಹಿಳೆಯ ಪತಿ ರವಿ ಹೇಳಿದ್ದಾನೆ.

Follow Us:
Download App:
  • android
  • ios