Chitradurga: ಕಾಲು ಜಾರಿ ಬಿದ್ದು ಪತ್ನಿ ಸಾವು, ಶಂಕಿಸಿದ್ದ ವೈದ್ಯ, ಪೋಸ್ಟ್ ಮಾರ್ಟಂ ಬಳಿಕ ಸತ್ಯ ಬಯಲು

ಬೆಳಗ್ಗೆ ತಾನೇ ಮನೆಯಲ್ಲಿ ಕಾಲು ಜಾರಿ ಬಿದ್ದು ವೈದ್ಯೆ ಡಾ.ರೂಪಾ‌ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಚಿತ್ರದುರ್ಗದಾದ್ಯಂತ ಸದ್ದು ಮಾಡಿತ್ತು. ಆದ್ರೆ  ಜಿಲ್ಲಾಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಬಳಿಕ ಬಯಲಾಯ್ತು ಅಸಲಿ ಸತ್ಯ. ಡೆತ್ ನೋಟ್ ಬರೆದಿಟ್ಟು ತಲೆಗೆ ಗುಂಡ ಹಾರಿಸಿಕೊಂಡು ಆತ್ಮಹತ್ಯೆ ಶಂಕೆ 

Chitradurga doctor roopa committed suicide gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್‌

ಚಿತ್ರದುರ್ಗ (ಡಿ.5): ಬೆಳಗ್ಗೆ ತಾನೇ ಮನೆಯಲ್ಲಿ ಕಾಲು ಜಾರಿ ಬಿದ್ದು ವೈದ್ಯೆ ಡಾ.ರೂಪಾ‌ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ಆದ್ರೆ ಸಂಜೆ ವೇಳೆಗಾಗಲೇ ರೂಪಾ‌ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪ್ರತಿಯೊಬ್ಬರ ಕಣ್ಣು ನಿಬ್ಬೆರಗು ಮಾಡುವಂತೆ ಮಾಡಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಕುಷ್ಟ ರೋಗ ನಿವಾರಣಾಧಿಕಾರಿಯಗಿ ಕಾರ್ಯ ನಿರ್ವಹಿಸ್ತಿದ್ದ ಡಾ.ರೂಪಾ ತಮ್ಮ‌ ನಿವಾಸದಲ್ಲಿ ಮನೆಯಲ್ಲಿನ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ತಮ್ಮ ಮನೆಯ ಮೇಲ್ಗಡೆ ಮಹಡಿಯಲ್ಲಿ ಇದ್ದ ಪತಿ ಡಾ. ರವಿ ಕೆಳಗೆ ಬಂದಾಗ ಶಾಕ್ ಆಗಿ ಕೂಡಲೇ ವೈದ್ಯೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಅತಿಯಾದ ರಕ್ತಸ್ರಾವ ಆದ ಕಾರಣ, ವೈದ್ಯೆ ರೂಪ ಸಾವನ್ನಪ್ಪಿದ್ದು‌ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಕಾಲು ಜಾರಿಯೇ ಬಿದ್ದಿರಬಹುದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಆದ್ರೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಪೋಸ್ಟ್ ಮಾರ್ಟಂ ಮಾಡುವ ವೇಳೆ ಅನುಮಾನ ಮೂಡಿದ್ದು, ಕೂಡಲೇ ಹೆಚ್ಚಿನ ಮಾಹಿತಿಹಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವೈದ್ಯರ ಆಧಾರದ ಮೇಲೆ ಪೊಲೀಸರು ತನಿಖೆ ಚುಕುರುಗೊಳಿಸಿದ್ದು, ವೈದ್ಯೆ ರೂಪಾ ಸಾವಿಗೆ ಸಂಜೆ ವೇಳೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವತಃ ವೈದ್ಯೆಯೇ 'ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ನಾನೇ ಕಾರಣ. ಪೊಲೀಸರಿಗೆ ದೂರು ನೀಡಬೇಡಿ' ಎಂದು ಡೆತ್ ನೋಟ್ ಬರೆದಿಟ್ಟು,‌ ತಲೆಗೆ ಗುಂಡು ಹಾರಿಸಿಕೊಂಡು ರೂಪಾ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಳಕಿಗೆ ಬಂದಿದೆ.

ಇನ್ನು ಸಾವಿಗೆ ನಿಖರವಾದ ಕಾರಣ ಏನಿರಬಹುದು ಎಂದು ತನಿಖೆ ಆರಂಭಿಸಿರುವ ಪೊಲೀಸರು, ಈಗಾಗಲೇ ಬೆಂಗಳೂರಿನಿಂದ FSL ನ‌ ವಿಶೇಷ ತಂಡ ಆಗಮಿಸಿದ್ದು,ಪ್ರಕರಣದ ತನಿಖೆ ಮುಂದುವರಿದಿದೆ.  FSL ಅವರ ವರದಿ ಬಂದ ಬಳಿಕವೇ ಸಾವಿಗೆ ಸೂಕ್ತ ಕಾರಣ ಏನೆಂಬುದು ಬೆಳಕಿಗೆ ಬರಲಿದೆ ಎಂದು ಎಸ್ಪಿ ತಿಳಿಸಿದರು.

 ವೈದ್ಯೆ ರೂಪಾ ಅವರ ಸಾವಿನ ಬಗ್ಗೆ ಬೆಳಗ್ಗೆ‌ 'ಇದೊಂದು ಅಸಹಜ ಸಾವು, ಮನೆಯಲ್ಲಿ‌ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.' ಎಂದು ಮಾಹಿತಿ‌‌ ನೀಡಿದ್ದ ಪತಿ ಡಾ. ರವಿಗೆ ಸಂಜೆ ವೈದ್ಯರು ನೀಡಿರೋ‌ ಮಾಹಿತಿ ಶಾಕ್  ನೀಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಅವರನ್ನೇ ವಿಚಾರಿಸಿದ್ರೆ, ಈ ಹಿಂದೆ ನಾವು 25 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ‌ ಬೆಳೆದು ಸುಮಾರು ಕೋಟ್ಯಂತರ ರೂಪಾಯಿ ಸಾಲ‌ ಮಾಡಿ ಕೈ ಸುಟ್ಟುಕೊಂಡಿದ್ದೆವು. ಅದರ ಬಗ್ಗೆ ಪ್ರತೀ ಬಾರಿಯೂ ಇಬ್ಬರು ಚರ್ಚೆ ಮಾಡಿ ಬೇಸರ ವ್ಯಕ್ತಪಡಿಸಿದ್ದೇವೆ' ಎಂದು ಹೇಳಿಕೆ ನೀಡಿದ್ದಾರೆ. ನಷ್ಟದ ಹಿನ್ನೆಲೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

4 ಗಂಟೆ ಆಸ್ಪತ್ರೆಗೆ ವಿದ್ಯುತ್ ಕಡಿತ, ನಾಲ್ವರು ಮಕ್ಕಳ ದಾರುಣ ಸಾವು!

ಇದರೊಟ್ಟಿಗೆ ಖಾಸಗಿ ಹೋಟೆಲ್ ಒಂದನ್ನು ಖರೀದಿಸಿ ಅದ್ರಲ್ಲೂ ನಷ್ಟ ಅನುಭವಿಸಿ ಬಳಿಕ ಹೋಟೆಲನ್ನು ಮಾರಾಟ ಮಾಡಿದ ನೋವಿತ್ತು. ಅಲ್ಲದೇ ಇತ್ತೀಚೆಗೆ ಪತ್ನಿ ರೂಪಾ ಅವರ ಪೋಷಕರ ಸಾವಿನಿಂದ ವೈದ್ಯೆ ತುಂಬಾ ಕುಗ್ಗಿಹೋಗಿದ್ದರು. ಪೋಷಕರ ಸಾವನ್ನು ನೆನಪಿಸಿಕೊಂಡು ಮನೆಯಲ್ಲಿ ಆಗಾಗ ದುಃಖಿಸುತ್ತಿದ್ದರು. ಇದನ್ನು ಹೊರತುಪಡಿಸಿದ್ರೆ ನಮ್ಮ ಜೀವನದಲ್ಲಿಯೇ ನಾವು ಯಾವುದೇ ರೀತಿಯ ಗಲಾಟೆ ಮಾಡಿಕೊಂಡಿಲ್ಲ. ನಮ್ಮಲ್ಲಿ ಯಾವುದೇ ವಿಚಾರಕ್ಕೂ ವೈಮನಸ್ಸು ಬಂದಿಲ್ಲ. ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ, ಡೆತ್ ನೋಟ್ ನಲ್ಲಿಯೂ ಕೂಡ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. FSL ಟೀಂ ಬಂದ ಬಳಿಕ ವರದಿ ಏನೇ‌ ಬಂದ್ರು, ಪೊಲೀಸರ ಎಲ್ಲಾ ತನಿಖೆಗೂ ನಾನು ಸಹಕರಿಸ್ತೀನಿ ಎಂದು ತಿಳಿಸಿದ್ದಾರೆ. ಒಟ್ಟಾರೆ ವೈದ್ಯಯ ಸಾವು ಖಿನ್ನತೆ, ಬೇಸರದಿಂದ ಮಾಡಿಕೊಂಡಿರುವ ಆತ್ಮಹತ್ಯೆಯೋ, ಕೊಲೆಯೋ ಎಂಬುದು ತನಿಖೆಯ ನಂತರವೇ ಗೊತ್ತಾಗಲಿದೆ.

MUMBAI NEWS: ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ಎನ್‌ಆರ್‌ಐ ಉದ್ಯಮಿ

Latest Videos
Follow Us:
Download App:
  • android
  • ios