ಸದಾ ತುಂಬಿ ತುಳುಕುವ ಗೋಪಾಲಸ್ವಾಮಿ ಬೆಟ್ಟದ ಬಸ್: ಸ್ವಲ್ಪ ಆಯಾ ತಪ್ಪಿದರೂ ಹರೋ ಹರ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಇದು ಕರ್ನಾಟಕದ ಪ್ರಸಿದ್ದ ಪ್ರೇಕ್ಷಣೀಯ ಧಾರ್ಮಿಕ ಸ್ಥಳ.  ಆದ್ರೆ ಈ ಬೆಟ್ಟಕ್ಕೆ ತಲುಪಲು ಸರಿಯಾದ ವ್ಯವಸ್ಥೆಇಲ್ಲ.

Chamarajanagar himavad gopalaswamy hills KSRTC bus service suh

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಇದು ಕರ್ನಾಟಕದ ಪ್ರಸಿದ್ದ ಪ್ರೇಕ್ಷಣೀಯ ಧಾರ್ಮಿಕ ಸ್ಥಳ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಕ್ಕೆ ನಿತ್ಯ ರಾಜ್ಯ ಹಾಗು ನೆರೆಯ ತಮಿಳುನಾಡು, ಕೇರಳ ರಾಜ್ಯದ ನೂರಾರು ಪ್ರವಾಸಿಗರು ಆಗಮಿಸಿ ಪ್ರಕೃತಿ ರಮ್ಯ ರಮಣೀಯತೆಯನ್ನು ಸವಿದು ಹೋಗುತ್ತಾರೆ. ಇನ್ನೂ  ಹಿಮವದ್ ಗೋಪಾಲಸ್ವಾಮಿ ಬೆಟ್ಟ ವರ್ಷ ಪೂರ್ತಿ ಮಂಜಿನಿಂದ ಕೂಡಿರುತ್ತದೆ. ಆ ಸೊಬಗನ್ನು ಕಣ್ತುಂಬಿಕೊಳ್ಳಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ್ತಾರೆ. 

ಅದ್ರಲ್ಲೂ ವೀಕೆಂಡ್‌ನಲ್ಲಂತೂ ಪ್ರವಾಸಿಗರ ಸಂಖ್ಯೆ ಹೇಳತೀರದು. ಆದ್ರೆ ಈ ಬೆಟ್ಟಕ್ಕೆ ತಲುಪಲು ಸರಿಯಾದ ವ್ಯವಸ್ಥೆಇಲ್ಲ ಈ ಬೆಟ್ಟದ ತಪ್ಪಲಿನ ದ್ವಾರದಿಂದ ಬೆಟ್ಟದ ಮೇಲಿನ ದೇಗುಲದ ತನಕದ ಏರು ತಗ್ಗಿನ, ಅಂಕುಡೊಂಕಿನ ಕಡಿದಾದ ರಸ್ತೆಯ ಪ್ರಯಾಣ. KSRTC ಟಿಕೆಟ್ ತೆಗೆದುಕೊಳ್ಳಲು ಮಾತ್ರ ಕ್ಯೂ ಆದರೆ ಬಸ್ ಹತ್ತಲು ಸರಿಯಾದ ಕ್ಯೂ ಸೌಲಭ್ಯವಿಲ್ಲ. ಜನರು ಸರದಿಯನ್ನು ಅನುಸರಿಸದೆ ಇರುವುದರಿಂದ ಭಾರೀ ನೂಕು ನುಗ್ಗುವಿಕೆ ಮತ್ತು ತಳ್ಳುವಿಕೆಯಿಂದಾಗಿ  ಜನರು ಹೈರಾಣಾಗುತ್ತಿದ್ದಾರೆ. ಬಸ್ಸನಲ್ಲಿ ಎರಡು ಪಟ್ಟು ಜನರನ್ನು ತುಂಬಲಾಗುತ್ತಿದೆ, ಬಸ್‌ ನಲ್ಲಿ ನಿಂತು ಹೋಗಲೂ ಜಾಗವಿಲ್ಲದಂತಾಗುತ್ತಿದೆ.ಇನ್ನು  ಇದು ಘಾಟ್ ವಿಭಾಗದ ರಸ್ತೆಯಾಗಿದ್ದು, ಮಾರ್ಗವು ಅತ್ಯಂತ ಅಪಾಯಕಾರಿ ಯಾಗಿದೆ. ಬೆಟ್ಟಕ್ಕೆ ಹೋಗುವ ರಸ್ತೆಗಳು ಉತ್ತಮವಾಗಿಲ್ಲ ಮತ್ತು ಓವರ್‌ಲೋಡ್ ಬಸ್‌ಗಳಿಂದ ಹೆಚ್ಚು ಅಪಾಯಕಾರಿಯಾಗಿದೆ. ವಾರಾಂತ್ಯದಲ್ಲಿ ಕೇವಲ 4 ಬಸ್‌ಗಳ ವ್ಯವಸ್ಥೆಯಿದ್ದು,  ಜನಸಂದಣಿಯಿಂದ ಬಸ್‌ ಉಸಿರಾಡಲು ಜಾಗವಿಲ್ಲದಷ್ಟು ತುಂಬಿರುತ್ತದೆ. ಜನರ ಸಮಯವು ಸುಮ್ಮನೆ ವ್ಯರ್ಥ ವಾಗುತ್ತದೆ. ಇನ್ನು ಈ ಅವ್ಯವಸ್ಥೆಗೆ ಸಂಬಂಧಿಸಿದಂತೆ  ಪೊಲೀಸ್ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಮತ್ತು ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ದೂರು ಸ್ವೀಕರಿಸಲು ಸಿದ್ಧರಿಲ್ಲ.

ಗೋಪಾಲಸ್ವಾಮಿ ಬೆಟ್ಟದ ವಿಶೇಷತೆ

ಹೊಯ್ಸಳರ ಕಾಲದ ದೇವಾಲಯ ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದೆ. ಮಕ್ಕಳಿಲ್ಲದವರು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿದೆ. ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ ಎನ್ನಲಾಗಿದೆ. ಈ ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದ್ದಾನೆ ಎನ್ನಲಾಗುತ್ತೆದ. ದಿನಕಳೆದಂತೆ ಮೈಸೂರಿನ ಒಡೆಯರ ಕಾಲದಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು . ದೇಗುಲದಲ್ಲಿ ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀ ಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಅಂತಲೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ್ದಂತೆ. ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣ ಆಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ಬಲಿಪೀಠ, ಧ್ವಜ ಸ್ತಂಭಗಳು ಗಮನಸೆಳೆಯುತ್ತವೆ.
 

Latest Videos
Follow Us:
Download App:
  • android
  • ios