ಸರ್ಕಾರ ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. 

ಚಾಮರಾಜನಗರ (ಡಿ.17): ಸರ್ಕಾರ ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ನಡೆದ ಜಿಲ್ಲಾ ಬೆಳ್ಳಿಹಬ್ಬ ಮಹೋತ್ಸವ ಪ್ರಯುಕ್ತ ಜಿಲ್ಲೆಯ ಪ್ರಬುದ್ಧ ರಾಜಕಾರಣ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯು ಸಂಪದ್ಬರಿತ ಜಿಲ್ಲೆಯಾಗಿದ್ದು, ಮೈಸೂರು ಜಿಲ್ಲೆಗಿಂತ ನಾವು ಕಡಿಮೆ ಇಲ್ಲ , ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು ಜಿಲ್ಲೆಯ ಅಭಿವೃದ್ಧಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಸರ್ಕಾರ ಬೆಳ್ಳಿಹಬ್ಬವನ್ನು ಜವಾಬ್ದಾರಿಯುತವಾಗಿ ಮಾಡಬೇಕಿತ್ತು. ಸರ್ಕಾರ ಬೆಳ್ಳಿಹಬ್ಬವನ್ನು ಜವಾಬ್ಧಾರಿಯುತವಾಗಿ ಮಾಡಬೇಕಿತ್ತು. ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದ ಜಿಲ್ಲೆಯ ಬೆಳ್ಳಿಯಹಬ್ಬ ಆಚರಿಸಲಾಗುವುದು ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ದಿ. ಎಚ್‌.ಎಸ್‌.ಮಹದೇವಪ್ರಸಾದ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಿದ್ದು, ಎಂಜಿನಿಯರ್‌ ಕಾಲೇಜು, ಮೆಡಿಕಲ್‌ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜು, ವಿಶ್ವವಿದ್ಯಾನಿಲಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಆಗಲು ಮಹದೇವಪ್ರಸಾದ್‌ ಕಾರಣ ಎಂದರು.

Chamarajanagar: ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಸಿಎಂ ಬೊಮ್ಮಾಯಿ

ಶಾಸಕರು, ಸಚಿವರು, ಮುಖ್ಯಮಂತ್ರಿಗಳು ನಾವೆಲ್ಲರೂ ಜನಸೇವಕರು ರಾಜಕಾರಣಿಗಳಲ್ಲಿ ವಿಶಾಲವಾದ ಮನೋಭಾವನೆ ಇರಬೇಕು, ಸಂಕುಚಿತ ಮನೋಭಾವನೆ ಇದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಸರ್ಕಾರ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್‌ ಕೊಡಬೇಕು. 39 ತಾಲೂಕುಗಳಲ್ಲಿ ಹಿಂದುಳಿದ ತಾಲೂಕುಗಳಾಗಿದ್ದು, ಅದರಲ್ಲಿ ಚಾಮರಾಜನಗರ ಕೂಡ ಒಂದಾಗಿದೆ. ಸರ್ಕಾರ ಹೆಚ್ಚು ಅನುದಾನ ಕೊಟ್ಟಾಗ ಮಾತ್ರ ಜಿಲ್ಲೆಯ ಪ್ರಗತಿ ಸಾಧಿಸಲು ಸಾಧ್ಯ ಎಂದರು. 

ಮಹಾಸಭಾ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾ ಬೆಳ್ಳಿಹಬ್ಬ ಆಚರಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ ವಿಫಲವಾಗಿದೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ನಮ್ಮ ಸಂಘಟನೆ ವತಿಯಿಂದ ಮಾಡಲಾಗುತ್ತಿದೆ ಎಂದರು. ಹರವೆ ವಿರಕ್ತಮಠದ ಶ್ರೀಸರ್ಪಭೂಷಣಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್‌.ಜಯಣ್ಣ, ಎ.ಆರ್‌.ಕೃಷ್ಣಮೂರ್ತಿ, ಜಿ.ಪಂ.ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ಜಿ.ಪಂ.ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್‌ ಮಾತನಾಡಿದರು.

ಸನ್ಮಾನ: ಮಾಜಿ ಶಾಸಕರಾದ ಎಸ್‌.ಜಯಣ್ಣ, ಎ.ಆರ್‌.ಕೃಷ್ಣಮೂರ್ತಿ, ಜಿ.ಪಂ.ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ಜಿ.ಪಂ.ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್‌, ಮಾಜಿ ಸದಸ್ಯ ಬಿ.ಪಿ.ನಟರಾಜಮೂರ್ತಿ , ಹೊಸೂರು ಜಗದೀಶ್‌, ಸಿ.ಕೆ.ಮಂಜುನಾಥ್‌, ಮಹದೇವಸ್ವಾಮಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ ನಾಯಕ, ಮಾಜಿ ಸದಸ್ಯ ಗಣೇಶ್‌ ದೀಕ್ಷಿತ್‌, ಬಿಎಸ್‌ ಪಿ ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಸೈಯದ್‌ ಅಕ್ರಂ, ಚಾ.ವೆಂ. ರಾಜ್‌ ಗೋಪಾಲ್‌ ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿರಾಜು, ಡಾ. ಬಿ.ಪಿ. ನಟರಾಜಮೂರ್ತಿ,ಮಹೇಶ್‌ ಗೌಡ, ಚಾ.ರಾ.ಕುಮಾರ್‌, ಲಿಂಗರಾಜು ಎನ್‌. ರಾಜುಗೌಡ, ಶಾ.ಮುರಳಿ, ಹೊಸೂರು ಜಗದೀಶ್‌, ಪ್ರಭಾಕರ್‌, ಮಹದೇವಸ್ವಾಮಿ, ಅರುಣ್‌ ಕುಮಾರ್‌ ಗೌಡ, ಸಾಗರ್‌ ರಾವತ್‌ ಇದ್ದರು.

ಚಾ.ನಗರ ಜಿಲ್ಲೆಯಾಗಬೇಕೆನ್ನುವ ಚರ್ಚೆಗಳಲ್ಲಿ ವಾಟಾಳ್‌ ಭಾಗವಹಿಸಿಲ್ಲ: ಚಾಮರಾಜನಗರ ಜಿಲ್ಲೆಯಾಗಬೇಕೆನ್ನುವ ಚರ್ಚೆಯಲ್ಲಿ ವಾಟಾಳ್‌ ನಾಗರಾಜ್‌ ಭಾಗವಹಿಸಿಲ್ಲ. ಇದು ವಾಸ್ತವ ಅನ್ಯತಾ ಭಾವಿಸಬೇಡಿ ಎಂದು ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಹೇಳಿದರು. ನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ನಡೆದ ಜಿಲ್ಲಾ ಬೆಳ್ಳಿಹಬ್ಬ ಮಹೋತ್ಸವ ಅಂಗವಾಗಿ ಜಿಲ್ಲೆಯ ಪ್ರಬುದ್ಧ್ದ ರಾಜಕಾರಣ ಕುರಿತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹನೂರಿಂದ ಮಹದೇಶ್ವರ ಬೆಟ್ಟದ ರಸ್ತೆ ಅಭಿವೃದ್ಧಿಗೆ 100 ಕೋಟಿ: ಸಿಎಂ ಬೊಮ್ಮಾಯಿ

ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ರಾಮಸಮುದ್ರ ಮಹದೇವನಾಯಕ, ಗಣೇಶ್‌ ದೀಕ್ಷಿತ್‌, ಸಿ.ಜಿ.ಶ್ರೀನಿವಾಸಶೆಟ್ಟಿರು, ಎಸ್‌.ಕೃಷ್ಣಮೂರ್ತಿ, ನಾಗೇಶ್‌ರಾವ್‌, ಹೊಮ್ಮದ ಜಿ.ಎಸ್‌. ದೊರೆಸ್ವಾಮಯ್ಯ ಇವರೆಲ್ಲ ಅಂದು ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಹೋರಾಟ ಸಮಿತಿ ಸ್ಥಾಪಿಸಿ ಹೋರಾಟ ಮಾಡಿದ ಮಹಾಪುರುಷರು ಎಂದರು. ಚಾಮರಾಜನಗರ ಜಿಲ್ಲೆಯನ್ನಾಗಿ ಹೋರಾಟ ಮಾಡಿದವರಲ್ಲಿ ಮಾಜಿ ಸಚಿವರಾದ ನಾಗಪ್ಪ, ಮಹದೇವಪ್ರಸಾದ್‌, ಡಿ.ಟಿ.ಜಯಕುಮಾರ್‌ ಸೇರಿದಂತೆ ಅನೇಕರು ನಿಧನರಾಗಿದ್ದಾರೆ, ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ಕ್ಷೇತ್ರ ಪುನರ್‌ ವಿಂಗಡನೆ ವೇಳೆ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಜಾಸ್ತಿಯಾಗುತ್ತದೆ. ಇನ್ನೊಂದು ಹೊಸ ಕ್ಷೇತ್ರ ಉದಯವಾಗಲು ಸಾಧ್ಯವಾಗುತ್ತದೆ ಎಂದರು.