Asianet Suvarna News Asianet Suvarna News

ಬೆಂಗಳೂರು: ವಿಜಯದಶಮಿಗೆ ಬಿಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು, ಡಿಕೆಶಿ

ಕಾವೇರಿ 5ನೇ ಹಂತ ಯೋಜನೆಯು ಭಾರತ ದೇಶದ ಅತೀದೊಡ್ಡ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ ಒಂದಾಗಿದೆ. ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸಲು ಸಮರ್ಥವಾಗಿದೆ. ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಂತಹ ಯೋಜನೆ ಅನು ಸ್ಥಾನಗೊಳಿಸಿಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

Cauvery water for 110 villages under BBMP for Vijayadashami Says DCM DK Shivakumar grg
Author
First Published Sep 24, 2024, 12:40 PM IST | Last Updated Sep 24, 2024, 12:40 PM IST

ಬೆಂಗಳೂರು(ಸೆ.24):  ಬಿಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಸುಮಾರು 4 ಲಕ್ಷ ಮನೆಗಳಿಗೆ ಕಾವೇರಿ ನೀರು ಒದಗಿಸುವ ಬೃಹತ್ ಯೋಜನೆ 'ಕಾವೇರಿ  5ನೇಹಂತ'ವನ್ನು ವಿಜಯದಶಮಿ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. 

ಸೋಮವಾರ ಮೈಸೂರು ರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪ ಮತ್ತು ಕೆಂಗೇರಿ ಬಳಿ ಬೃಹತ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ, ಕನಕಪುರದ ಹಾರೋಹಳ್ಳಿಯಲ್ಲಿ ನೂತನ ಪಂಪಿಂಗ್ ಸ್ಟೇಷನ್ ಮತ್ತು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡ ನಹಳ್ಳಿಯಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಕೊನೆ ಹಂತದ ಕಾಮಗಾರಿಗಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾವೇರಿ 5ನೇ ಹಂತ ಯೋಜನೆಯು ಭಾರತ ದೇಶದ ಅತೀದೊಡ್ಡ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ ಒಂದಾಗಿದೆ. ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸಲು ಸಮರ್ಥವಾಗಿದೆ. ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಂತಹ ಯೋಜನೆ ಅನು ಸ್ಥಾನಗೊಳಿಸಿಲ್ಲ, 775 ಎಂ.ಎಲ್.ಡಿ ಸಾಮರ್ಥದ ಅತ್ಯಾಧುನಿಕ ನೀರು ಶುದ್ದೀಕರಣ ಘಟಕವನ್ನು ಹೊಂ ದಿರುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ. ಸಣ್ಣ ಪುಟ್ಟ ಕಾಮಗಾರಿಗಳು 15 ದಿನಗಳಲ್ಲಿ ಮುಗಿಸಿ ಉದ್ಘಾಟನೆ ಮಾಡಲಾಗುತ್ತದೆ ಎಂದು ತಿಳಿಸಿದರು. 

ಅರ್ಧ ಬೆಂಗಳೂರಿಗೆ ಸೆ.21ರಂದು ಕಾವೇರಿ ನೀರು ಪೂರೈಕೆ ಸ್ಥಗಿತ: ನಿಮ್ ಏರಿಯಾ ಇದೇನಾ ಪಟ್ಟಿ ನೋಡಿ..!

ಕಾವೇರಿ 5ನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಪಂಪಿಂಗ್ ಕೇಂದ್ರಗಳ ಸಹಾಯದಿಂದ ಸುಮಾರು 110 ಕಿಮೀ ದೂರದಿಂದ 500 ಹಾಗೂ 2,200 ಎಂ.ಎಂ.ನಷ್ಟು ವ್ಯಾಸದ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್ ಎತ್ತರಕ್ಕೆ ಹರಿಸಿ ಬೆಂಗಳೂರು ನಗರಕ್ಕೆ ನೀರನ್ನು ಪೂರೈಸಲಾಗುತ್ತದೆ. ಈ ಯೋಜನೆಯ ಮೂಲಕ ಬೆಂಗಳೂರು ನಗರವು ವಾಟರ್‌ಸರ್‌ಪ್ಲಸ್ ನಗರವಾಗಲಿದೆ ಎಂದು ಡಿ.ಕೆ. ಶಿವಕುಮಾ‌ರ್ ತಿಳಿಸಿದರು. ಈ ವೇಳೆ ಶಾಸಕರಾದ ಎಸ್.ಟಿ.ಸೋಮಶೇಖರ್, ನರೇಂದ್ರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ದಿನೇಶ್ ಗೂಳಿಗೌಡ, ಜಲಮಂಡಳಿ ಅಧ್ಯಕ್ಷ ಡಾ| ರಾಮಪ್ರಸಾತ್ ಮನೋಹರ್ ಉಪಸ್ಥಿತರಿದ್ದರು. 

ಬೆಂಗಳೂರಿಗರಿಗೆ ಶಾಕ್: ಗಣೇಶ ಹಬ್ಬಕ್ಕೂ ಮುನ್ನ ಕಾವೇರಿ ನೀರಿನ ದರ ಏರಿಕೆ?

ನಗರಕ್ಕೆ ನೀರು ತರಲು 50 ಅಂತಸ್ತಿನ ಕಟ್ಟಡ ಎತ್ತರಕ್ಕೆ ಪಂಪ್! 

ಕಾವೇರಿ ನದಿಗೆ ಶಿವನಸಮುದ್ರ ಬಳಿ ನಿರ್ಮಿಸಿ ರುವ ಶಿವ ಅಣೆಕಟ್ಟೆಯಿಂದ ಬೃಹತ್ ಪೈಪ್‌ಗಳ ಮೂಲಕ ನೆಟ್ಟಲ್ ಸಮನಾಂತರ ಜಲಾಶಯಕ್ಕೆ ಹರಿಸಿ, ಅಲ್ಲಿಂದ ಟಿ.ಕೆ.ಹಳ್ಳಿ ಜಲಮಂಡಳಿ ಘಟ ಕಕ್ಕೆ ಹರಿಸಲಾಗುತ್ತದೆ. ಅಲ್ಲಿ ನೀರನ್ನು ಶುದ್ದೀ ಕರಿಸಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಬೂಸ್ಸರ್‌ ಪಂಪಿಂಗ್ ಮೂಲಕನಗರಕ್ಕೆ ಹರಿಸಲಾ ಗುತ್ತದೆ. 110 ಕಿ.ಮೀ. ದೂರದಿಂದ ನಗರಕ್ಕೆ ನೀರು ಬರುವಷ್ಟರಲ್ಲಿ ಸುಮಾರು 450 ಮೀಟ ರ್ (50 ಅಂತಸ್ತಿನ ಕಟ್ಟಡದಷ್ಟು ಎತ್ತರ) ಎತ್ತರಕ್ಕೆ ಹರಿಸಿದಂತಾಗುತ್ತದೆ. ಈಗ ಇರುವ ಪೈಪ್ ಲೈನ್ ಪಕ್ಕದಲ್ಲೇ ಹೊಸ ಪೈಪ್‌ಗಳನ್ನು ಅಳವಡಿ ಸಲಾಗಿದೆ. ಶುದ್ದೀಕರಣ ಘಟಕಗಳು, ಪಂಪಿ ಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೆಂಗೂರಿಗೆ ಮಾಸಿಕ 2.4  ಟಿಎಂಸಿ ನೀರು 

ಪ್ರತಿ ತಿಂಗಳು ಬೆಂಗಳೂರಿಗೆ ಹಾಲಿ 1.58 ಟಿಎಂಸಿ ಕುಡಿಯುವನೀರು ಪೂರೈಕೆ ಆಗುತ್ತಿದೆ. ಈ ಯೋಜನೆಯ ಅನುಷ್ಠಾನದಿಂದ 2.4 ಟಿಎಂಸಿಗೆ ಏರಿಕೆಯಲಾಗಿದೆ. ನಗರದ ಅಗತ್ಯ ಕ್ಕಿಂತ ಹೆಚ್ಚು ನೀರು ಲಭ್ಯವಾಗಲಿದೆ.
ಸುಮಾರು 50 ಲಕ್ಷ ಜನರ ನೀರಿನ ಬೇಡಿಕೆ ಪೂರೈಸಬಲ್ಲ 'ಮಾಡರ್ನ್ ಎಂಜಿನಿಯರಿಂಗ್ ಮಾರವೆಲ್‌ ಕಾವೇರಿ 5ನೇ ಹಂತ ಯೋಜನೆಯನ್ನು ವಿಜಯದಶಮಿಯ ಶುಭ ಮುಹೂರ್ತದಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios