ಬೆಂಗಳೂರಿಗರಿಗೆ ಶಾಕ್: ಗಣೇಶ ಹಬ್ಬಕ್ಕೂ ಮುನ್ನ ಕಾವೇರಿ ನೀರಿನ ದರ ಏರಿಕೆ?
ಗಣೇಶ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಜಲಮಂಡಳಿಯು ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ದರ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸಿದೆ.
ಬೆಂಗಳೂರು (ಆ.26): ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರು ಜನತೆಗೆ ಮತ್ತೊಂದು ಏರಿಕೆಯ ಬಿಸಿ ತಟ್ಟಲಿದೆ. ಗಣೇಶ ಹಬ್ಬದೊಳಗೆ ಕಾವೇರಿ ನೀರಿನ ದರ ಪರಿಷ್ಕರಣೆಯಾಗುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ನೀರಿನ ದರ ಹೆಚ್ಚಳ ಘೋಷಣೆ ಬೆನ್ನಲ್ಲೇ ಜಲಮಂಡಳಿ ಕೂಡ ಸಿದ್ದತೆ ಆರಂಭಿಸಿದೆ. ಕಾವೇರಿ ನೀರಿ ದರ ಪರಿಷ್ಕರಣೆ ಮಾಡಲು ಜಲಮಂಡಲಿ ದೊಡ್ಡ ಮಟ್ಟದಲ್ಲಿ ಸಿದ್ದತೆ ನಡೆದಿದೆ. ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆ ಮಾಡಲಾಗುತ್ತದೆ. ಕೆಇಆರ್ಸಿ ಮಾದರಿಯಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗಲಿದೆ. ಕೆಇಆರ್ಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತದೆ. ಹಾಗಾಗಿ ಜಲಮಂಡಳಿ ಕೂಡ ಗ್ರಾಹಕರ ಅಭಿಪ್ರಾಯ ಸಂಗ್ರಹ ಮಾಡಿ ವಿದ್ಯುತ್ ದರ ಪರಿಷ್ಕರಣೆ ಮಾಡಲಿದೆ. ಶೀಘ್ರದಲ್ಲೇ ಗ್ರಾಹಕರ ಜೊತೆ ಮೀಟಿಂಗ್ ಮಾಡಲಿದ್ದೇವೆ ಎಂದು ಮಂಡಳಿ ತಿಳಿಸಿದೆ. ಗೃಹ ಮತ್ತು ಗೃಹೇತರ ಅಸೋಸಿಯೇಷನ್ ಜೊತೆ ಸಭೆ ನಡೆಯಲಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆಗೆ ನಿರ್ಧಾರ ಮಾಡಲಿದ್ದೇವೆ ಎಂದಿದ್ದಾರೆ.
15 ದಿನದೊಳಗೆ ನೀರಿನ ಗ್ರಾಹಕರ ಸಲಹೆ ಸ್ವೀಕಾರ ಮಾಡಲಿದ್ದು, ಬಳಿಕ ಸರ್ಕಾರಕ್ಕೆ ವರದಿ ನೀಡಲು ತೀರ್ಮಾನಿಸಲಾಗಿದೆ. 5 ದಿನದೊಳಗೆ ನೀರಿನ ದರ ಏರಿಕೆ ಸಂಬಂಧ ನಿರ್ಧಾರ ಕೈಗೊಳ್ಳುತ್ತೇವೆ ಕಳೆದ ಹತ್ತು ವರ್ಷದಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಶೇ 70 ರಷ್ಟು ವಿದ್ಯುತ್ ಬಿಲ್ ಗೆ ಹಣ ಖರ್ಚು ಆಗುತ್ತಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿಕೆ ನೀಡಿದ್ದಾರೆ.