ಧಾರವಾಡ(ಡಿ.30): ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರ ಮೃತಪಟ್ಟು, ಓರ್ವ ವ್ಯಕ್ತಿಗೆ ಗಾಯುವಾದ ಘಟನೆ ನಗರದ ಬೈಪಾಸ್ ಯರಿಕೊಪ್ಪ ಡೌನಲ್ ಬಳಿ ಇಂದು ಬೆಳಗ್ಗೆ(ಸೋಮವಾರ) ನಡೆದಿದೆ. 

ಮೃತರನ್ನು ಮಧು ಪುಟ್ಟಪ್ಪ (42) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಮೃತ ಮಧು ಪುಟ್ಟಪ್ಪ ಅವರು ಚಿತ್ರದುರ್ಗದ ರಾಷ್ಟ್ರೀಯ ಭೂಸ್ವಾಧಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಧು ಪುಟ್ಟಪ್ಪ ಅವರು ಕಾರ್‌ನಲ್ಲಿ ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದರು. ಕಾರು ಧಾರವಾಡ ನಗರದ ಬೈಪಾಸ್ ಯರಿಕೊಪ್ಪ ಡೌನಲ್ ಬಳಿ ಬರುವ ಸಂದರ್ಭದಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಟ್ಯಾಂಕರ್ ಕಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಕಾರ್‌ ಚಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.