ಕಮಲಾಪುರ ಬಳಿ ಕಾರು ಅಪಘಾತ- ಕಲಬುರಗಿ ಗ್ರಾಮೀಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಾಬು ಹೊನ್ನಾ ನಾಯಕ್‍ಗೆ ಗಂಭೀರ ಗಾಯ

ಕಲಬುರಗಿಯಿಂದ ಕಮಲಾಪುರಕ್ಕೆ ಹೊರಟಿದ್ದಾಗ ಬೈಕ್ ಎದುರಿಗೆ ಬಂದು ಕಾರು ಅಪಘಾತ ಅಪಘಾತದಲ್ಲಿ ಬಾಬು ಹೊನ್ನಾ ನಾಯಕ್ ತಲೆಗೆ ಬಾರಿ ಪೆಟ್ಟು- ಕಲಬುರಗಿ ಆಸ್ಪತ್ರೆಗೆ ದಾಖಲು. ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಬಾಬೂರಾವ ಚವ್ಹಾಣ್ ಯುನೈಟೆಡ್ ಆಸ್ಪತ್ರೆಗೆ ಧಾವಿಸಿದ್ದು ಹೊನ್ನಾ ನಾಯಕರ ಆರೋಗ್ಯ ಸ್ಥಿತಿ ವಿಚಾರಿಸಿದದಾರೆ.

Car accident near kamalapur Kalaburagi Rural Congress ticket aspirant Babu Honna Naik seriously injured rav

ಕಲಬುರಗಿ (ಏ.4)  ಕೆಪಿಸಿಸಿ ಪ್ರಚಾರ ಸಮೀತಿ ಸಂಯೋಜಕರು ಹಾಗೂ ಕಲಬುರಗಿ ಗ್ರಾಮೀಣ (ಮೀಸಲು) ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಯಾದ ಬಾಬು ಹೊನ್ನಾ ನಾಯಕ್(Babu honna nayak) ಅವರು ಪ್ರಯಾಣಿಸುತ್ತಿದ್ದ ಕಾರು ಕಮಲಾಪುರ(Kamalapur) ಸಮೀಪದಲ್ಲಿ ಅಪಘಾತ(Accident)ಕ್ಕೊಳಗಾಗಿದೆ. ಸದರಿ ಅಪಘಾತದಲ್ಲಿ ಬಾಬು ಹೊನ್ನಾ ನಾಯಕ್(Babu honna nayak) ಅವರಿಗೆ ತಲೆಗೆ ಬಾರಿ ಪೆಟ್ಟು ಬಿದ್ದಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕಲಬುರಗಿಯಿಂದ ತಮ್ಮ ಪುತ್ರನೊಂದಿಗೆ ಬಾಬೂ ಹೊನ್ನಾ ನಾಯಕ್ ಅವರು ಕಮಲಾಪುರ(Kamalapur)ದ ಕಡೆಗೆ ಹೊರಟಿದ್ದಾಗ ಈ ಅಪಗಾತ ಸಂಭವಿಸಿದೆ. ಕಮಲಾಪುರ ಹತ್ತಿರ ಬರುತ್ತಿದ್ದಂತೆಯೇ ಎದುರಿನಿಂದ ಬೈಕ್ ಬರುತ್ತಿತ್ತು. ಬೈಕ್ ಹಾಗೂ ದ್ವಿಚಕ್ರ ಹಾಗೂ ಕಾರಿನ ನಡುವೆ ಮುಖಾಮುಖಿ ಢಕ್ಕಿ(Car-Bike accident) ಸಂಭವಿಸಿದೆ. ದುರಂತದಲ್ಲಿ ಬಾಬೂ ಹೊನ್ನಾ ನಾಯಕ್ ಅವರ ತಲೆಗೆ ಆಳವಾದ ಪೆಟ್ಟು ಬಿದ್ದಿದೆ. ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ.

ಹಿಂಬದಿಯಿಂದ ಬಂದು ಗುದ್ದಿದ ಕಾರು: ಶಾಲೆಗೆ ಹೊರಟಿದ್ದ ತಂದೆ -ಮಗಳು ಸಾವು

ಅದ್ಯಾಗೂ ಮೆದುಳಿನ ಭಾಗಕ್ಕೆ ಅಪಘಾತದಿಂದ ಯಾವುದೇ ಭಾರಿ ಪೆಟ್ಟು ಬಿದ್ದಿಲ್ಲ. ಹೀಗಾಗಿ ಬಾಬೂ ಹೊನ್ನಾನಾಯಕರಿಗೆ ತುರ್ತು ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವ ಕಲಬುರಗಿ ಯೂನೈಟೆಡ್ ಆಸ್ಪತ್ರೆ(kalburgi united hospital)ಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಬಾಬೂರಾವ ಚವ್ಹಾಣ್(Babu rao chauhan) ಯುನೈಟೆಡ್ ಆಸ್ಪತ್ರೆ(United hopital kalaburagi)ಗೆ ಧಾವಿಸಿದ್ದು ಹೊನ್ನಾ ನಾಯಕರ ಆರೋಗ್ಯ ಸ್ಥಿತಿ ವಿಚಾರಿಸಿದದಾರೆ.

ಹೊನ್ನಾ ನಾಯಕರ ತಲೆದೆ ಪೆಟ್ಟು ತುಂಬಾ ಆಗಿದ. ಅಪಘಾತದ ಸ್ಥಳದಲ್ಲಿ ತೀವ್ರ ರಕ್ತಸ್ರಾವವೂ ಆಗಿದೆ. ಹೀಗಾಗಿ ಅವರು ತಕ್ಷಣ ಕೋಮಾಕ್ಕೆ ಜಾರಿದ್ದಾರಾದರೂ ಮೆದುಳಿನ ಭಾಗಕ್ಕೆ ಪೆಟ್ಟು ಬಿದದಿಲ್ಲ. ಹೀಗಾಗಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಹೊನ್ನಾ ನಾಯಕ ಗುಣಮುಖರಾಗಲಿ ಎಂದು ಬಾಬೂರಾವ್ ಚವ್ಹಾಣ್ ಹಾರೈಸಿದ್ದಾರೆ.

ಬೆಂಗಳೂರು ನೈಸ್‌ ರಸ್ತೆಯಲ್ಲಿ ಬೈಕ್‌ ಟೈರ್‌ ಬಸ್ಟ್‌: ತಡೆಗೋಡೆಗೆ ಗುದ್ದಿ ಇಂಜಿನಿಯರ್‌ ಸಾವು

ಕಾರಿನಲ್ಲಿ ತಮ್ಮ ಪುತ್ರ ಡಾ. ಸಂತೋಷ ಜೊತಗೆ ಬಾಬೂ ಹೊನ್ನಾಯಾಕ್ ಹೊರಟಿದ್ದರು. ಇವರ ಎದುರಿಗೆ ಬರುತ್ತಿದ್ದ ಬೈಕ್ ಕಮಲಾಪುರ ಬಳಿಯ ಜೀವಣಗಿ ಗ್ರಾಮದ್ದಾಗಿದೆ. ಬೈಕ್ ಸವಾರರು ಜೀವಣಗಿಯಿಂದ ಮಹಾಗಾಂವ್‍ಗೆ ಹೊರಟಿದ್ದರು. ಮಾಳಪ್ಪ ಹಾಗೂ ಶರಣಪ್ಪ ಇಬ್ಬರೂ ಬೈಕ್ ಸವಾರಿಯಲ್ಲಿದ್ದರು. ಕಾರು ಅಪಗಾತದ ರಭಸಕ್ಕೆ ಬೈಕ್ ಸವಾರಿಯಲ್ಲಿದ್ದ ಯುವಕರಿಬ್ಬರ ಕಾಲುಗಳೆರೆಡೂ ಮುರಿದಿವೆ. ಅವರೂ ಸಹ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಮಲಾಪೂರ ಠಾಣೆಯಲ್ಲಿ ಪ್ರಕರಣ

Latest Videos
Follow Us:
Download App:
  • android
  • ios