ಹಿಂಬದಿಯಿಂದ ಬಂದು ಗುದ್ದಿದ ಕಾರು: ಶಾಲೆಗೆ ಹೊರಟಿದ್ದ ತಂದೆ -ಮಗಳು ಸಾವು

ಮಗಳನ್ನು ಬೈಕ್‌ನಲ್ಲಿ ಶಾಲೆಗೆ ಬಿಡಲು ಹೊರಟ ತಂದೆಯ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಕಾರು ಗುದ್ದಿದ್ದು, ಘಟನೆಯಲ್ಲಿ ತಂದೆ- ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ.

Ramanagara car hit from behind School going father and daughter were killed sat

ರಾಮನಗರ (ಏ.03): ಮಗಳನ್ನು ಶಾಲೆಗೆ ಬಿಡಲು ಹೋದಾದ ಹಿಂಬದಿಯಿಂದ ವೇಗವಾಗಿ ಬಂದು ಕಾರು ಗುದ್ದಿದ ರಭಸಕ್ಕೆ ತಂದೆ ಮತ್ತು ಮಗಳು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಸಾಬರಪಾಳ್ಯದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇನ್ನು ದಿನನಿತ್ಯ ಕಾರ್ಯಕ್ಕೆ ನಾವು ವಾಹನಗಳನ್ನು ತೆಗೆದುಕೊಮಡು ಹೋಗುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ, ಇನ್ನು ವಾಹನ ಸವಾರಿ ವೇಳೆ ನಾವು ಎಷ್ಟೇ ಜಾಗ್ರತೆವಹಿಸಿದರೂ ಇನ್ನೊಬ್ಬರು ಬಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಾಧ್ಯೆತಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನು ರಾಮನಗರದಲ್ಲಿಯೂ ಕೂಡ ಇಂದು ಬೆಳಗ್ಗೆ ಇಂತಹದೇ ಒಂದು ಘಟನೆ ನಡೆದಿದೆ. ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದಂತೆ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಂದೆ ಶಾಲೆಯತ್ತ ಹೊರಟಿದ್ದರು. ಆದರೆ, ಜವರಾಯನಾಗಿ ಬಂದ ಕಾರು ಹಿಂಬದಿಯಿಂದ ವೇಗವಾಗಿ ಗುದ್ದಿದ್ದು, ಸ್ಥಳದಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ.

ಬೆಂಗಳೂರು ನೈಸ್‌ ರಸ್ತೆಯಲ್ಲಿ ಬೈಕ್‌ ಟೈರ್‌ ಬಸ್ಟ್‌: ತಡೆಗೋಡೆಗೆ ಗುದ್ದಿ ಇಂಜಿನಿಯರ್‌ ಸಾವು

ಗಾಯಾಳು ರಕ್ಷಣೆ ಮಾಡುವಷ್ಟರಲ್ಲೇ ಹಾರಿಹೋದ ಪ್ರಾಣಪಕ್ಷಿ: ಇನ್ನು ಈ ದುರ್ಘಟನೆಯಲ್ಲಿ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದ ಡೇರಿ ಅಧ್ಯಕ್ಷ ಕೆಪಿ.ಯೋಗೇಶ್ (47) , ಮಗಳು ಹರ್ಷಿತಾ (14)  ಸಾವನ್ನಪ್ಪಿದ್ದಾರೆ. ಇವರು ಮಾಗಡಿಯ ಕಲ್ಯಾ ಗ್ರಾಮದ ನಿವಾಸಿಗಳು ಆಗಿದ್ದಾರೆ. ಯೋಗೇಶ್ ತಮ್ಮ ಮಗಳನ್ನು ಬೈಕ್ ನಲ್ಲಿ ಜಮಾಸಾಬ್ ಪಾಳ್ಯದ ಬಳಿಯ ವೆಂಕಟ್ ಪಬ್ಲಿಕ್ ಶಾಲೆಗೆ ಬಿಡಲು ಶಾಲೆ ಬಳಿ ತಿರುಗುವ ವೇಳೆ ಹಿಂಬಂದಿಯಿಂದ ಹುಲಿದುರ್ಗದ ಕಡೆಗೆ ಅತಿ ವೇಗದಲ್ಲಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ,ಮಗಳು ಸ್ಥಳದಲ್ಲೆ ಸಾವನ್ನಪಿದ್ದಾರೆ. ಇನ್ನು ಸ್ಥಳೀಯರು ಬಂದು ಗಾಯಾಳುಗಳನ್ನು ರಕ್ಷಣೆ ಮಾಡಲು ಮುಂದಾದರೂ ಸ್ಥಳದಲ್ಲಿಯೇ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಇನ್ನು ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಮಾಗಡಿ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. 

ಆಸ್ಪತ್ರೆಗೆ ಮೃತದೇಹ ರವಾನಿಸಿದ ಪೊಲೀಸರು: ಕಾರು ಗುದ್ದಿ ಅಪಘಾತ ನಡೆದ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದ ತಂದೆ- ಮಗಳ ಮೃತದೇಹಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎನ್.ಆಶೊಕ್, ದಿಶಾ ಸಮಿತಿ ಸದಸ್ಯ ಅಸ್ಪತ್ರೆ ಬಳಿ ತೆರಳಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಅಪಘಾತಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Mandya Breaking : ಸ್ಟೇರಿಂಗ್‌ ಕಟ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್ 

ಬೈಕ್‌ ಟೈರ್‌ ಸ್ಫೋಟಗೊಂಡು ಇಂಜಿನಿಯರ್‌ ಸಾವು:  ಬೆಂಗಳೂರು :ಹೊಸಕೆರೆಹಳ್ಳಿ ಬಳಿಯ ನೈಸ್‌ ರಸ್ತೆಯಲ್ಲಿ ಸ್ಕೂಟರ್ ಟೈರ್‌ ಬಸ್ಟ್‌ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಪ್ಟ್‌ವೇರ್‌ ಇಂಜಿನಿಯರ್‌ ಸುಲೋಚನಾ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೋರಮಂಗಲ‌ದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್‌ ಹೋಗುತ್ತಿದ್ದರು. ಈ ವೇಳೆ ಸ್ನೇಹಿತ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರು. ಇನ್ನು ನೈಸ್‌ ರಸ್ತೆಯಲ್ಲಿ ವೇಗವಾಗಿ ಹೋಗುವಾಗ ಸ್ಕೂಟರ್‌ನ ಟೈರ್‌ ಸ್ಪೋಟಗೊಂಡು (ಟೈರ್‌ ಬಸ್ಟ್‌) ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಹೋಗಿ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಿಸಿದ್ದು, ಬೆಳಗ್ಗೆ ಸುಲೋಚನಾ (24) ಸಾವನ್ನಪ್ಪಿದ್ದಾರೆ.

Latest Videos
Follow Us:
Download App:
  • android
  • ios