ದೆಹಲಿ ಕೆಂಪು ಕೋಟೆಯಲ್ಲಿ ನಡೆಯುವ ಆ. 15 ರ ಭಾರತ ಸ್ವಾತಂತ್ರ್ಯ ಮಹೋತ್ಸವಕ್ಕೆ ಕಲಬುರಗಿ ತೊಗರಿ ರೈತನಿಗೆ ಬಂತು ಬುಲಾವ್‌, ನಂದೂರ್‌ (ಕೆ) ತೊಗರಿ ರೈತ ಆನಂದ ಬೆಳಗುಂಪಿಗೆ ದೆಹಲಿಯಿಂದ ಬುಲಾವ್‌, ಈತ ಮಳೆ ಆಧಾರಿತ ಕೃಷಿಕ, ಸಣ್ಣ ರೈತ, ಪಿಎಂ ಕಿಸಾನ್‌ ಸಮ್ಮಾನ್‌ ಫಲಾನುಭವ

ಕಲಬುರಗಿ(ಆ.12): ದೆಹಲಿ ಕೆಂಪು ಕೋಟೆಯಲ್ಲಿ ನಡೆಯುವ ಭಾರತ ಸ್ವಾತಂತ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಲಬುರಗಿಯ ತೊಗರಿ ಬೆಳೆಯುವ ಸಣ್ಣ ರೈತ ನಂದೂರ್‌ (ಕೆ) ನಿವಾಸಿ ಆನಂದ ಬೆಳಗುಂಪಿ ಈತನಿಗೆ ಆಹ್ವಾನ ಬಂದಿದೆ.

ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ದೆಹಲಿಯಿಂದ ಬಂದಿರುವ ಕರೆಯಿಂದಾಗಿ ರೈತ ಆನಂದ ಮತ್ತವರ ಕುಟುಂಬ ಸಂತೋಷದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡು ತ್ರಿವರ್ಣ ಧ್ವಜ ಹಾರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಎಂದರೆ ಅದಕ್ಕಿಂತ ಬೇರೆ ಭಾಗ್ಯ ಇದೆಯೆ? ನನಗಂತೂ ತುಂಬ ಖುಷಿಯಾಗಿದೆ ಎಂದು ಆನಂದ ಬೆಳಗುಂಪಿ ‘ಕನ್ನಡÜಪ್ರಭ’ ಜೊತೆ ಮಾತನಾಡುತ್ತ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ಟೆನ್‌ಪಿನ್‌ ಬೌಲಿಂಗ್‌ ಪ್ರತಿಭೆಗೆ ಆರ್ಥಿಕ ಮುಗ್ಗಟ್ಟು, ‘ಥಾಯ್‌ಲ್ಯಾಂಡ್‌’ಗೆ ರಮೇಶ್‌ ಬಳಿ ದುಡ್ಡಿಲ್ಲ..!

3.20 ಎಕರೆ ಹೊಲವಿರುವ ಆನಂದ ಮಳೆಯನ್ನ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಮೊದಲೆಲ್ಲಾ ನೀರಾವರಿಯಲ್ಲಿ ಬೇಸಾಯ ಮಾಡಿದ್ದರೂ ಕೋರೋನಾ ಕಾಲದಲ್ಲಿ ತುಂಬ ಆನಿ ಅನುಭವಿಸಿದ್ದರಿಂದ ಸದ್ಯ ತನ್ನ ಪಾಲಿನ 3. 20 ಎಕರೆ ಹೊಲವನ್ನೆಲ್ಲ ಮಳೆ ಆಧರಿಸಿ ತೊಗರಿ ಬೆಳೆಯುತ್ತಿದ್ದಾರೆ.

ಎರಡು ಎತ್ತು, ಆಳುಕಾಳು ಎಲ್ಲವೂ ಇರುವ ಆನಂದನ ಒಕ್ಕಲುತನ ಚೆನ್ನಾಗಿದೆ. ಏತನ್ಮಧ್ಯೆ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ಸಣ್ಣ ರೈತ ಆನಂದ ಫಲಾನುಭವಿ ಆಗಿದ್ದಾರೆ. ನನಗೆ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ 14 ಕಂತು ಹಣ ಬಂದಿದೆ.

2 ಸಾವಿರ ರುಪಾಯಿಯಂತೆ ಬರುವ ಹಣ ಸಣ್ಣ ರೈತರಿಗೆ ತುಂಬ ಅನುಕೂಲವಾಗುತ್ತದೆ. ಬಿತ್ತನೆ ಕಾಲದಲ್ಲಿ ಬಂದಾಗ ನಮಗೆ ಬೀಜ, ಗೊಬ್ಬರ ಖರೀದಿಗೂ ಅನುಕೂಲವಾಗದೆ ಎಂದು ಆನಂದ ಬೆಳಗುಂಪಿ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ತಮಗಂತೂ ತುಂಬಾ ಅನುಕೂಲವಾಗಿದೆ ಎಂದು ಹೇಳುತ್ತಾರೆ.

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ

ಪತ್ನಿ, ಇಬ್ಬರು ಮಕ್ಕಳೊಂದಿಗೆ ತುಂಬಿದ ಸಂಸಾರ ಹೊಂದಿರುವ ಆನಂದ ಬೆಳಗುಂಪಿ ಮಳೆಯಾಧಾರಿತ ಕೃಷಿಯಲ್ಲಿಯೂ ಶಿಸ್ತು ಅಳವಡಿಸಿಕೊಂಡಲ್ಲಿ ರೈತರಿಗೆ ಯಶಸ್ಸು ನಿಶ್ಚಿತ ಎಂದು ಹೇಳುತ್ತಾರೆ. ರೈತರು ಮಳೆ, ಹವಾಮಾನ ಆಧರಿಸಿ ಬೆಳೆಗಳನ್ನು ಬೆಳೆದಾಗ ಮಾತ್ರ ಲಾಭ ಕಟ್ಟಿಟ್ಟಬುತ್ತಿ. ಬದಲಾವಣೆಗೆ ರೈತರೂ ಸ್ಪಂದಸಿ ಕೃಷಿ ಲಾಭದಾಯಕವಾಗಿಸಿಕೊಂಡು ಬಾಳಬೇಕಿದೆ ಎಂದೂ ಆನಂದ ಬೆಳಗುಂಪಿ ಹೇಳುತ್ತಾರೆ.

ದೆಹಲಿಗೆ ಹೋಗಲು ಇವರು ಅದಾಗಲೇ ಭರದ ಸಿದ್ಧತೆಯಲ್ಲಿದ್ದಾರೆ. ಸ್ಥಳೀಯ ಕಲಬುರಗಿ ರೈತ ಸಂಪರ್ಕ ಕೇಂದ್ರ, ಕಲಬುರಗಿ ತಾಲೂಕಿನ ಕೃಷಿ ಸಹಾಯಕ ಅಧಿಕಾರಿ, ಜೆಡಿಯವರಾದ ಸಮದ್‌ ಪಟೇಲ್‌ ಇವರೆಲ್ಲರೂ ಆನಂದ ಬೆಳಗುಂಪಿಯವರಿಗೆ ಕರೆ ಮಾಡಿ ದೆಹಲಿಗೆ ಬರುವಂತೆ ಆಹ್ವಾನ ಬಂದಿರೋದರ ಬಗ್ಗೆ ಖಚಿತಪಡಿಸಿದ್ದಾರೆ. ಹೆಂಡತಿ, ಮಕ್ಕಳೊಂದಿಗೆ ತಾವು ದೆಹಲಿಗೆ ಹೋಗುತ್ತಿರೋದಾಗಿ ಆನಂದ ಹೇಳಿದ್ದಾರೆ.