ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ, ಅಗತ್ಯ ಅನುದಾನ: ಶಾಸಕ ಸಾ.ರಾ.ಮಹೇಶ್‌

ತಾಲೂಕು ಒಕ್ಕಲಿಗರ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಕೊಡಿಸುವುದರ ಜತೆಗೆ ಅಗತ್ಯ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. 

CA site for building construction necessary grant says mla sa ra mahesh gvd

ಕೆ.ಆರ್‌.ನಗರ (ಸೆ.14): ತಾಲೂಕು ಒಕ್ಕಲಿಗರ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಕೊಡಿಸುವುದರ ಜತೆಗೆ ಅಗತ್ಯ ಅನುದಾನ ನೀಡಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಎಚ್‌.ಡಿ. ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಷೇರುದಾರ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘ ವ್ಯವಹಾರ ನಡೆಸುವಂತೆ ಸಲಹೆ ನೀಡಿದರು.

ಸಹಕಾರ ಸಂಘಗಳಲ್ಲಿರುವ ಆಡಳಿತ ಮಂಡಳಿಯವರು ಸಂಘದ ಹಣದಿಂದ ಸಭೆ ಮತ್ತು ಸಮಾರಂಭಗಳನ್ನು ಮಾಡುತ್ತಾರೆ ಆದರೆ ತಾಲ್ಲೂಕು ಒಕ್ಕಲಿಗರ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯ ಆಡಳಿತ ಮಂಡಳಿಯು ಸ್ವಂತ ಹಣದಿಂದ ಪ್ರತಿಭಾ ಪುರಾಸ್ಕರ, ಸಾಮಾನ್ಯ ಸಭೆಗೆ ಬಳಸುತ್ತಿರುವುದು ಶ್ಲಾಘನಿಯ ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಇದೇ ರೀತಿ ನಡೆಸುಕೊಂಡು ಹೋದರೆ ಆದಾಯ ವೃದ್ದಿಯಾಗುತ್ತದೆ ಹಾಗೂ ಈ ಸಹಕಾರ ಸಂಘವು ಮೈಸೂರು ಜಿಲ್ಲೆಯಲ್ಲಿಯೇ ಮಾದರಿಯಾಗಲಿದೆ ಎಂದು ತಿಳಿಸಿದರು.

Mysuru: ಸೆ.16 ರಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಾರಂಭ: ಶಾಸಕ ಸಾ.ರಾ.ಮಹೇಶ್‌

ಮಿರ್ಲೆ ಮತ್ತು ಹರದನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 80 ಲಕ್ಷದಷ್ಟುಅವ್ಯವಹಾರ ನಡೆದಿದ್ದು, ಕಾರ್ಯದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಕೋ-ಅಪರೇಟಿವ್‌ ಸಂಸ್ಥೆಗಳನ್ನು ನಡೆಸುವಾಗ ಆಡಳಿತ ಮಂಡಳಿ ಮತ್ತು ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ಆಗ ಮಾತ್ರ ಸಂಘ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದರು.

ಸೊಸೈಟಿ ಅಧ್ಯಕ್ಷರಾದ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಸೊಸೈಟಿ 3,96,766 ರು. ನಿವ್ವಳ ಲಾಭದಲ್ಲಿದ್ದು, 11 ಲಕ್ಷದ 13 ಸಾವಿರ ಷೇರು ಬಂಡವಾಳ ಹೊಂದಿದ್ದು, ವಾರ್ಷಿಕ 1,36,66,571 ರು. ಗಳ ವೈಹಿವಾಟು ನಡೆಸಿದೆ. ಇದಕ್ಕೆ ಸಹಕಾರ ನೀಡಿದ ಆಡಳಿತ ಮಂಡಳಿ ನಿರ್ದೇಶಕರಿಗೆ ಮತ್ತು ಷೇರುದಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಹೆಚ್ಚು ಷೇರು ಬಂಡವಾಳ ಹೂಡಿದ ಸದಸ್ಯರನ್ನು ಸನ್ಮಾನಿಸಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು. ನವ ನಗರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ಸಂಘದ ಉಪಾಧ್ಯಕ್ಷ ವಿ.ಸಿ. ಶಿವರಾಮು ಮಾತನಾಡಿದರು.

ಧೈರ್ಯವಿದ್ದರೆ ಕಾಂಗ್ರೆಸ್‌ ಅವಧಿ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಿ: ಆರ್‌.ಧ್ರುವನಾರಾಯಣ

ತಹಸೀಲ್ದಾರ್‌ಗಳಾದ ಎಸ್‌. ಸಂತೋಷ್‌, ಎಂ.ಎಸ್‌. ಯದುಗಿರೀಶ್‌, ನಿವೃತ್ತ ಬಿಇಒ ಎಂ. ರಾಜು, ಜಿಪಂ ಮಾಜಿ ಸದಸ್ಯ ಕಲ್ಪನಾ ಧನಂಜಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್‌ಕುಮಾರ್‌, ಸಂಘದ ನಿರ್ದೇಶಕರಾದ ವಕೀಲರಾದ ಸುದೀಶ್‌ಕುಮಾರ್‌, ತಿಮ್ಮಪ್ಪ, ಶಂಕರೇಗೌಡ, ಸಿ.ಆರ್‌. ಉದಯ್‌ಕುಮಾರ್‌, ಚಂದ್ರಶೇಖರ್‌, ಕವಿತಾ ಪ್ರಕಾಶ್‌, ಅನೀಫ್‌ಗೌಡ, ಸಿ.ಜೆ. ಆನಂದ್‌, ಎಂ.ಟಿ. ಕುಮಾರ್‌, ದೇವೇಂದ್ರು, ಈಶ್ವರ್‌, ಯೋಗೇಶ್‌, ಜೆಡಿಎಸ್‌ ತಾಲೂಕು ವಕ್ತಾರ ಕೆ.ಎಲ್‌. ರಮೇಶ್‌, ದಿವಾಕರ್‌, ಶಿವಣ್ಣ ಇದ್ದರು.

Latest Videos
Follow Us:
Download App:
  • android
  • ios