ಮಂಡ್ಯ(ಡಿ.06): ಸಿಎಂ ಬಿ. ಎಸ್. ಯಡಿಯೂರಪ್ಪನಲ್ಲಿ ಬೈ ಎಲೆಕ್ಷನ್ ಹವಾ ಸ್ವಲ್ಪ ಜೋರಾಗಿಯೇ ಇತ್ತು. ಮಧ್ಯಾಹ್ನ 12.15 ವೇಳೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತವರು ಗ್ರಾಮ ಬೂಕನಕೆರೆಯ ಮೂರು ಮತಗಟ್ಟೆಗಳಲ್ಲಿ ಶೇ.38.18ರಷ್ಟುಮತದಾನವಾಗಿತ್ತು.

2412 ಮತಗಳಿಗೆ 921 ಮತಗಳು ಚಲಾವಣೆಯಾಗಿದ್ದವು. ಮಧ್ಯಾಹ್ನ 12.45ಕ್ಕೆ ಬೊಮ್ಮೇಗೌಡನಕೊಪ್ಪಲು ಗ್ರಾಮದಲ್ಲಿ ಶೇ.45.87, ಮಧ್ಯಾಹ್ನ 1.15ಕ್ಕೆ ಕೆ.ಆರ್‌.ಪೇಟೆ ಟೌನ್‌ನ ತಾ.ಪಂ. ಕಚೇರಿ ಮತಗಟ್ಟೆಯಲ್ಲಿ ಶೇ.32.21, ಮಧ್ಯಾಹ್ನ 1.20ಕ್ಕೆ ಪುರಸಭೆ ಕಾರಾರ‍ಯಲಯದ ವಿಶೇಷಚೇತನರ ಮತಗಟ್ಟೆಯಲ್ಲಿ ಶೇ.41.85, ಶತಮಾನ ಶಾಲೆ ಆವರಣದ 11 ಮತಗಟ್ಟೆಗಳಲ್ಲಿ ಒಟ್ಟಾರೆ ಸರಾಸರಿ 36.10ರಷ್ಟುಹಾಗೂ ಮಧ್ಯಾಹ್ನ 2.30ಕ್ಕೆ ಮೈಲನಹಳ್ಳಿ ಮತಗಟ್ಟೆಯಲ್ಲಿ ಶೇ.60.19ರಷ್ಟುಮತದಾನವಾಗಿತ್ತು.

ಕೆ.ಆರ್‌.ಪೇಟೆ ಶೇ.80ರಷ್ಟುಮತದಾನ

ಕೆ.ಆರ್‌.ಪೇಟೆ ಉಪಚುನಾವಣೆಯ ಹೈಲೈಟ್ಸ್‌

  • ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲೂ ನಿರೀಕ್ಷೆಯಂತೆಯೇ ಮತದಾನದ ಪ್ರಮಾಣ ಶೇ.80ರಷ್ಟುತಲುಪಿದೆ.
  • ಚುನಾವಣಾ ಅಬ್ಬರ, ಹರಿದ ಹಣದ ಹೊಳೆಯೂ ಮತದಾನ ಹೆಚ್ಚಳಕ್ಕೆ ಕಾರಣ ರಾಜಕೀಯ ವಿಶ್ಲೇಷಣೆಗಳು ನಡೆದಿವೆ.
  • ತಾಲೂಕಿನ ಕೆಲವೆಡೆ ಬಿರುಸಿನ ಮತದಾನ ನಡೆದರೆ, ಮತ್ತೆ ಕೆಲವೆಡೆ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು.
  • ಕೆ.ಆರ್‌.ಪೇಟೆ ಪಟ್ಟಣ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಮತದಾನ ಬಿರುಸಿನಿಂದ ಸಾಗಿತ್ತು.
  • ಯುವಜನರು, ಮಹಿಳೆಯರು, ವೃದ್ಧರು ಸರತಿ ಸಾಲಿನಲ್ಲಿ ನಿಂತಿದ್ದರು. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸಾಲುಗಳನ್ನು ನಿರ್ಮಿಸಲಾಗಿತ್ತು

ಕೆ. ಆರ್‌. ಪೇಟೆ ವಿದಾನ ಸಭಾ ಕ್ಷೇತ್ರದಲ್ಲಿ 1,05,678 ಪುರುಷರು, 1,02,571 ಮಹಿಳೆಯರು ಮತ್ತು 5 ಮಂದಿ ಇತರರು ಸೇರಿದಂತೆ ಒಟ್ಟು 2,08,254 ಮತದಾರರಿದ್ದಾರೆ. ಈ ಪೈಕಿ 83,706 ಪುರುಷರು, 82,904 ಮಹಿಳೆಯರು, ಇಬ್ಬರು ಇತರರು ಸೇರಿದಂತೆ ಒಟ್ಟಾರೆ 1,66,612 ಮತದಾರರು ತಮ್ಮ ಮತದಾನದ ಹಕ್ಕು ಚಲಾವಣೆ ಮಾಡಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.83 ರಷ್ಟುಮತದಾನವಾಗಿತ್ತು.

ಕೆ.ಆರ್. ಪೇಟೆ ಬೈಎಲೆಕ್ಷನ್: ಯಾರ್ಯಾರು ಎಲ್ಲೆಲ್ಲಿ ಓಟ್ ಮಾಡಿದ್ರು..?

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿfಗೆ ಉಪಚುನಾವಣೆ ನಡೆದಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.