ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ..!
ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಟೆಕ್ಕಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ ಉದ್ಯೋಗಿಗಳಿಗೆ ಕಷ್ಟ ಪಡುತ್ತಿದ್ದರು. ಈ ಮಾರ್ಗದ ಉದ್ಘಾಟನೆಗಳಿಗೆ ಐಟಿ ಉದ್ಯೋಗಿಗಳಿಗೆ ತುಸು ನೆಮ್ಮದಿ ಸಿಗಲಿದೆ.

ಬೆಂಗಳೂರು(ಸೆ.30): ಐಟಿ ಉದ್ಯೋಗಿಗಳಿಗೆ ನಮ್ಮ ಮೆಟ್ರೋ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ ಮೆಟ್ರೋ ಉದ್ಘಾಟನೆಗೆ ಮೂಹರ್ತ ಕೂಡಿಬಂದಿದೆ. ಅಕ್ಟೋಬರ್ 2ಕ್ಕೆ ಗಾಂಧಿ ಜನಯಂತಿಯಂದು ಈ ಮಾರ್ಗದ ಉದ್ಘಾಟನೆಗೆ ನಮ್ಮ ಮೆಟ್ರೋ ಸಿದ್ಧತೆ ನಡೆಸುತ್ತಿದೆ.
ಸೆ. 21ಕ್ಕೆ ದೆಹಲಿಯ ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿದ್ದರು. ಹೀಗಾಗಿ ರೇಲ್ವೆ ಸುರಕ್ಷತಾ ಆಯುಕ್ತರಿಂದ ವಾಣಿಜ್ಯ ಸೇವೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ಕೆಂಗೇರಿಯಿಂದ ತಡೆರಹಿತವಾಗಿ ವೈಟ್‌ಫೀಲ್ಡ್‌ವರೆಗೆ ಸಂಚಾರಕ್ಕೆ ಅನುಕೂಲವಾಗಲಿದೆ.
ಬೈಯ್ಯಪ್ಪನಹಳ್ಳಿ- ಕೆ.ಆರ್.ಪುರ ಮೆಟ್ರೋ ಮಾರ್ಗದಲ್ಲಿ ಚಲಿಸುವ ಐಟಿ ಉದ್ಯೋಗಿಗಳಿಗೆ ಮತ್ತೆ ನಿರಾಸೆ
ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಟೆಕ್ಕಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ ಉದ್ಯೋಗಿಗಳಿಗೆ ಕಷ್ಟ ಪಡುತ್ತಿದ್ದರು. ಈ ಮಾರ್ಗದ ಉದ್ಘಾಟನೆಗಳಿಗೆ ಐಟಿ ಉದ್ಯೋಗಿಗಳಿಗೆ ತುಸು ನೆಮ್ಮದಿ ಸಿಗಲಿದೆ.
ಕೆಂಗೇರಿಯಿಂದ ವೈಟ್ ಫೀಲ್ಡ್ ಕಡೆಗೆ ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರು. ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು, ಇದ್ರಿಂದ ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿತ್ತು.
ಮಾರ್ಚ್ 25ರಂದು ಕೆ.ಆರ್.ಪುರದಿಂದ ವೈಟ್ ಪಿಲ್ಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಸ ಆದರೆ ವೈಟ್ ಫೀಲ್ಡ್ ಟೂ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚರಿಸೋ ಪ್ರಯಾಣಿಕರು ಕೆಆರ್ ಪುರಂ ನಲ್ಲಿ ಇಳಿದು ಇತರೆ ಸಾರಿಗೆಯನ್ನ ಅವಲಂಬಿಸಬೇಕಿತ್ತು. ಆಗಸ್ಟ್ 3 ನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ BMRCL ಹೇಳಿತ್ತು. ಈಗ ಗಾಂಧಿ ಜಯಂತಿಯಂದು ಈ ಹೊಸ ಮಾರ್ಗ ಉದ್ಘಾಟನೆಗೆ ತಯಾರಿ ನಡೆಸುತ್ತಿದೆ.