ಹಾವೇರಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 89 ಸಾವಿರ ಮೆಣಸಿನಕಾಯಿ ಚೀಲಗಳ ಆವಕವಾಗಿದ್ದು, ಗಣನೀಯ ಇಳಿಕೆ ಕಂಡಿದೆ. ಆವಕ ಕಡಿಮೆಯಾದರೂ, ಕಡ್ಡಿ, ಡಬ್ಬಿ ಮತ್ತು ಗುಂಟೂರು ತಳಿಗಳ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡುಬಂದಿದ್ದು, ಗುಣಮಟ್ಟದ ಮೆಣಸಿಗೆ ಬೇಡಿಕೆ ಮುಂದುವರೆದಿದೆ.

ಹಾವೇರಿ: ಸೋಮವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ 89 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ ಮೊದಲ ವಾರದಲ್ಲಿ ಆವಕ ಇಳಿಮುಖವಾಗುತ್ತಾ ಸಾಗಿದೆ. ಸೀಜನ್ ಸಹ ಮುಗಿಯುವ ಸೂಚನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ 1 ಲಕ್ಷಕ್ಕೂ ಅಧಿಕ ಆವಕಾಗಿದ್ದು, ಈ ವಾರ ಕೇವಲ 89 ಸಾವಿರಕ್ಕೆ ಇಳಿದಿದೆ.

ಉತ್ತಮ ದರ

ಈ ವರ್ಷ ಆವಕ ಕಮ್ಮಿ ಆದರೂ ಸಹ ಗಮನಾರ್ಹ ಸಂಗತಿಯೆಂದರೆ, ದರದಲ್ಲಿ ಪ್ರತಿ ವಾರ ಸ್ಥಿರತೆ ಕಂಡು ಬರುತ್ತಿದೆ. ಈ ವಾರವು ಸಹ ಮೂರು ತಳಿಯ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ. ಇದರಿಂದ ಗುಣಮಟ್ಟದ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರೆದಿದೆ.

ಇದನ್ನೂ ಓದಿ: ಟೊಮೆಟೋ ಬೆಲೆ ಭಾರೀ ಕುಸಿತ, ಟ್ರ್ಯಾಕ್ಟರ್‌ನಲ್ಲಿ ತುಂಬಿ ಕುರಿ, ಮೇಕೆಗಳಿಗೆ ಸುರಿದ ರೈತರು!

ಸೋಮವಾರ ಮಾರುಕಟ್ಟೆ ದರ ಈ ರೀತಿಯಾಗಿತ್ತು

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 89,141 ಚೀಲಗಳು ಆವಕಾಗಿದ್ದು, ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 3929 ಗರಿಷ್ಠ ₹ 58.223 ಸರಾಸರಿ ₹ 46,509, ಡಬ್ಬಿತಳಿ ಕನಿಷ್ಠ ₹ 5009 ಗರಿಷ್ಠ ₹ 64449 ಸರಾಸರಿ ₹ 48509, ಗುಂಟೂರು ಕನಿಷ್ಠ ₹ 1300, ಗರಿಷ್ಠ ₹ 17589, ಸರಾಸರಿ ₹ 12689 ಗಳಿಗೆ ಮಾರಾಟವಾಗಿವೆ.

ಇದನ್ನೂ ಓದಿ: ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್

Scroll to load tweet…