ಚಾಮರಾಜನಗರ, (ಜೂನ್.16) ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 2ನೇ ಅವಧಿಯ ಒಂದು ವರ್ಷ ಪೂರ್ಣಗೊಳಿಸಿದ್ದು, ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಚಾಮರಾಜನಗರ ಜಿಲ್ಲೆಯ ಯುವ ಮೋರ್ಚಾ ಆಯೋಜಿಸಿದ್ದ ವರ್ಚುವಲ್ ರ್‍ಯಾಲಿಯಲ್ಲಿ  ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿವೈ ವಿಜಯೇಂದ್ರ ಮುಖ್ಯ ಭಾಷಣವನ್ನು ಮಾಡಿದರು.

ಬಿವೈ ವಿಜಯೇಂದ್ರ ಅವರು, ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಅಭಿವೃದ್ಧಿ ಕಾರ್ಯಗಳ ವಿಚಾರಧಾರೆಗಳನ್ನು ಎಳೆಎಳೆಯಾಗಿ ಬಿಡಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ. 

ಗುಂಡಿನ ದಾಳಿ ಮಾಡಿದ ಚೀನಾ, ಬಯಲಾಯ್ತು ಸುಶಾಂತ್ ಆತ್ಮಹತ್ಯೆ ಕಾರಣ; ಜೂ.16ರ ಟಾಪ್ 10 ಸುದ್ದಿ!

1.ದುರಾಡಳಿತ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್, ಕಾಂಗ್ರೆಸ್ ಮಾಡಿರುವಂತಹ ಹಗರಣಗಳನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

2.ತಮ್ಮ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಶ್ರಮವಹಿಸುತ್ತಿದ್ದಾರೆ, ವಿನೂತನವಾದ ಯೋಜನೆಗಳ ಮುಖಾಂತರ ಕೊನೆಯ ಹಂತದ ಜನರಿಗು ಯೋಜನೆಗಳ ಫಲವನ್ನು ನೀಡುತ್ತಿದ್ದಾರೆ.

3.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ,ಆಯುಷ್ಮಾನ್ ಭಾರತದ ಮುಖಾಂತರ ಬಡಜನತೆಗೆ ನೆರವಾಗಿದ್ದಾರೆ.

4.ಪ್ರಧಾನ ಮಂತ್ರಿ ಜನಧನ್ ಯೋಜನೆಯ ಮುಖಾಂತರ ದೇಶದ ಮಹಿಳೆಯರಿಗೆ ಆರ್ಥಿಕ ಅನುಕೂಲ ಮಾಡಿಕೊಟ್ಟಿದ್ದಾರೆ,ಮುದ್ರಾ ಯೋಜನೆಯಡಿ ಹೊಸ ಹೊಸ ಯುವಕರಿಗೆ ಉದ್ಯೋಗ ಪ್ರಾರಂಭಿಸಲು ಸಹಾಯ ಮಾಡುತ್ತಿದ್ದಾರೆ. 

4.ಹಳ್ಳಿ ಹಳ್ಳಿಗೂ ಇಂದು ವಿದ್ಯುತ್ ತಲುಪಿದೆ,ಸ್ವಚ್ಛ ಭಾರತ್ ಮಿಷನ್ನಡಿ ಸಾಕಷ್ಟು ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿಗಳ ವೇಗದ ಮಿತಿ ದುಪ್ಪಟ್ಟಾಗಿದೆ,ಕಠಿಣವಾದ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.

5.ಎಪ್ಪತ್ತು ವರ್ಷಗಳಿಂದ ಕಗ್ಗಂಟಾಗಿದ್ದ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ದಿಟ್ಟತನವನ್ನು ತೋರಿದ್ದಾರೆ, ಯಾವುದೇ ಒಂದು ಅಹಿತಕರ ಘಟನೆ ದೇಶಾದ್ಯಂತ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿ ದೇಶದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,ಉಗ್ರವಾದವನ್ನು ದಮನ ಮಾಡಲು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ.

6.ದೇಶದ ಬಹು ವರ್ಷಗಳ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಪ್ರಭು ಭವ್ಯ ರಾಮಮಂದಿರ ನಿರ್ಮಾಣದ ವಿಚಾರ ತಾರ್ತಿಕ ಅಂತ್ಯವಾಗಿದೆ,ಅಯೋಧ್ಯೆ ರಾಮ ಮಂದಿರ ಕಟ್ಟಡದ ನಿರ್ಮಾಣದ ಶಿಲಾನ್ಯಾಸವೂ ಕೂಡ ನೆರವೇರಿದೆ, ಇಡೀ ದೇಶದಲ್ಲಿರುವ ಎಲ್ಲ ಧಾರ್ಮಿಕ ಮುಖಂಡರುಗಳ ವಿಶ್ವಾಸವನ್ನು ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ.

7.ತ್ರಿವಳಿ ತಲಾಖ್ ನಂತಹ ಅನಿಷ್ಟ ಪದ್ಧತಿಯನ್ನು ತೆಗೆದು ಹಾಕಿ ಕೋಟ್ಯಂತರ ಮುಸ್ಲಿಂ ಮಹಿಳೆಯರ ಕಣ್ಣೀರು ಹೂರೆಸಿದ್ದಾರೆ.

8.ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಕಠಿಣ ಕಾನೂನನ್ನು ಜಾರಿಗೆ ತಂದು ಇಂತಹ ಸಾಕಷ್ಟು ಕಗ್ಗಂಟಾಗಿದ್ದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರದ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದಾರೆ.

9.ಪ್ರಪಂಚದಾದ್ಯಂತ ಕರೂನಾ ಮಹಾಮಾರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಮುಂಜಾಗೃತ ಕ್ರಮವಾಗಿ ಲಾಕ್ ಡೌನ್ ಜಾರಿಗೆ ತಂದು,ಬಹಳ ವ್ಯವಸ್ಥಿತವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗಲೆಂದು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಹಳ್ಳಿಗಳಲ್ಲೂ ಬಡವರಿಗೆ ಕೆಲಸವನ್ನು ನೀಡುತ್ತಿದ್ದಾರೆ. ದೇಶದ 8 ಕೋಟಿ ರೈತರಿಗೆ ಇದುವರೆಗೂ 2 ಸಾವಿರ ರೂ. ಹಣ ಜಮಾವಣೆಯಾಗಿದೆ. ವಲಸೆ ಕಾರ್ಮಿಕರ ರಕ್ಷಣೆಗೆ ಕಟಿಬದ್ಧವಾಗಿ ಕೇಂದ್ರ ಸರ್ಕಾರ ನಿಂತಿದೆ.

ರಾಜ್ಯದ ವಿಚಾರವಾಗಿ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.ನವರು ದೇಶದಲ್ಲೇ ಮೊದಲು ಲಾಕ್ ಡೌನ್ ಜಾರಿಗೆ ತಂದ ಮುಖ್ಯಮಂತ್ರಿಗಳಾಗಿದ್ದಾರೆ. ಇಂತಹ ಇಳಿ ವಯಸ್ಸಿನಲ್ಲೂ ಒಂದು ದಿನವೂ ವಿಶ್ರಮಿಸಿದ ಪ್ರತಿನಿತ್ಯ ಅಧಿಕಾರಿಗಳು,ಸಚಿವರು, ಶಾಸಕರು ಎಲ್ಲ ವರ್ಗದ ಅಧಿಕಾರಿಗಳೊಂದಿಗೆ ಸತತ ಸಭೆಗಳನ್ನು ನಡೆಸಿ ಕರೂನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವುದರ ಮುಖಾಂತರ ದೇಶಕ್ಕೆ ಮಾದರಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ತಮ್ಮ ತಂದೆಯ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದರು.

ಇದೇ ವೇಳೆ ವಿಜಯೇಂದ್ರ, ಈ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬ ಕೊರೋನಾ ವಾರಿಯಸ್ ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ವರ್ಚುವಲ್ ರ್‍ಯಾಲಿ ಕಾರ್ಯಕ್ರಮಕ್ಕೆ ರಾಜ್ಯ ಸಂಘಟನ ಕಾರ್ಯದರ್ಶಿಅರುಣ್ ಕುಮಾರ್ ಜ್ಯೋತಿ ಬೇಳಗುವುದರ ಚಾಲನೆ ನೀಡಿದರು.  ರಾಜ್ಯ ಉಪಾಧ್ಯಕ್ಷ ರಾದ ನಿರ್ಮಲ್ ಕುಮಾರ್ ಸುರಾನ , ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.