ಸದ್ಯ ತಳಪಾಯಕ್ಕಾಗಿ ಮಣ್ಣು ತೆಗೆಯುವ ಕಾರ್ಯ ಮುಗಿದಿದೆ. ಒಂದು ವರ್ಷದಿಂದ ಮಣ್ಣು ತೆಗೆಯುವ ಕಾರ್ಯ ನಡೆದಿದ್ದು, 20 ಅಡಿಗಳಷ್ಟುಆಳಕ್ಕೆ ಮಣ್ಣು ಅಗೆಯಲಾಗಿದೆ. ರಿಯಾಕ್ಟರ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಟೆಂಡರ್‌ ಅಂತಿಮಗೊಳ್ಳುವ ಸಾಧ್ಯತೆ ಇದೆ.

ವಸಂತಕುಮಾರ ಕತಗಾಲ

ಕಾರವಾರ(ಆ.25): ಕೈಗಾ ಅಣು ವಿದ್ಯುತ್‌ ಯೋಜನಾ ಪ್ರದೇಶದಲ್ಲಿ ತಲಾ 700 ಮೆಗಾ ವ್ಯಾಟ್‌ಗಳ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾಮಗಾರಿ ಡಿಸೆಂಬರ್‌ ವೇಳೆಗೆ ಆರಂಭವಾಗಲಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ರಿಯಾಕ್ಟರ್‌ ಇದಾಗಿದ್ದು, 2029-30ರ ವೇಳೆಗೆ ವಿದ್ಯುತ್‌ ಉತ್ಪಾದನೆಗೆ ಸಜ್ಜಾಗಲಿದೆ. .21 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆ.

ಸದ್ಯ ತಳಪಾಯಕ್ಕಾಗಿ ಮಣ್ಣು ತೆಗೆಯುವ ಕಾರ್ಯ ಮುಗಿದಿದೆ. ಒಂದು ವರ್ಷದಿಂದ ಮಣ್ಣು ತೆಗೆಯುವ ಕಾರ್ಯ ನಡೆದಿದ್ದು, 20 ಅಡಿಗಳಷ್ಟುಆಳಕ್ಕೆ ಮಣ್ಣು ಅಗೆಯಲಾಗಿದೆ. ರಿಯಾಕ್ಟರ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಟೆಂಡರ್‌ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಉತ್ತರ ಕನ್ನಡ: ಸೆಲ್ಫಿ ತೆಗೆಯುವಾಗ ಮೊಸಳೆ ಕಂಡು ಮೂರ್ಛೆ ಬಿದ್ದ ಯುವತಿ!

ಅಣು ವಿದ್ಯುತ್‌ ನಿಗಮದ ಮೂಲಗಳ ಪ್ರಕಾರ ಕೈಗಾದಲ್ಲಿ ಉದ್ದೇಶಿತ 5 ಹಾಗೂ 6ನೇ ಘಟಕ ನಿರ್ಮಾಣಕ್ಕೆ ಅಗತ್ಯವಾದ ಪ್ರಕ್ರಿಯೆಗಳು ಯೋಜನೆಯಂತೆ ನಡೆಯುತ್ತಿವೆ. ಕೈಗಾದಲ್ಲಿ ಸ್ವದೇಶಿ ನಿರ್ಮಿತ ಈ ಎರಡು ಘಟಕಗಳು ಆರಂಭಕ್ಕೂ ಮುನ್ನ ದೇಶದಲ್ಲಿ ಸ್ವದೇಶಿ ನಿರ್ಮಿತ ನಾಲ್ಕು ಅಣು ವಿದ್ಯುತ್‌ ಘಟಕಗಳು ವಿದ್ಯುತ್‌ ಉತ್ಪಾದನೆ ಆರಂಭಿಸಲಿವೆ. ಸೂರತ್‌ದಲ್ಲಿ ಒಂದು, ಗುಜರಾತಿನ ಕಕ್ರಾಪಾರದಲ್ಲಿ ಒಂದು ಘಟಕ ಆರಂಭವಾಗಿದೆ. ರಾಜಸ್ಥಾನದ ಎರಡು ಘಟಕಗಳಲ್ಲಿ ಒಂದು ಆರಂಭವಾದರೆ, ಇನ್ನೊಂದು ಸದ್ಯದಲ್ಲಿಯೇ ವಿದ್ಯುತ್‌ ಉತ್ಪಾದಿಸಲಿದೆ. ಹೀಗಾಗಿ ಅಣು ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದಂತಾಗಿದೆ.

ಚಲಿಸುತ್ತಿದ್ದ ಬಸ್‌ ಟೈಯರ್‌ ಸ್ಫೋಟ, 80ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

ಅನುಮೋದನೆಗೆ ತಡೆ

ಸದ್ಯ 5 ಹಾಗೂ 6ನೇ ಘಟಕಕ್ಕೆ ಕೇಂದ್ರದ ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ನೀಡಿದ ಪರಿಸರ ಅನುಮೋದನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ ನೀಡಿದೆ. ಇನ್ನೊಮ್ಮೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ನ್ಯಾಯಮಂಡಳಿ ಸೂಚಿಸಿದೆ. ವಿದ್ಯುತ್‌ ಉತ್ಪಾದನೆಗೆ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಡಿಸೆಂಬರ್‌ನಲ್ಲಿ 5 ಹಾಗೂ 6ನೇ ಅಣು ವಿದ್ಯುತ್‌ ಘಟಕಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ನಿರ್ಮಾಣ ಕಾಮಗಾರಿ ಆರಂಭದಿಂದ 6 ವರ್ಷಗಳ ನಂತರ ವಿದ್ಯುತ್‌ ಉತ್ಪಾದನೆಗೆ ಘಟಕಗಳನ್ನು ಸಜ್ಜುಗೊಳಿಸುವ ಗುರಿ ಇದೆ ಎಂದು ಕೈಗಾ ಅಣು ವಿದ್ಯುತ್‌ ಕೇಂದ್ರದ ನಿರ್ದೇಶಕ ಪ್ರಮೋದ ರಾಯಚೂರ ತಿಳಿಸಿದ್ದಾರೆ.