ಗಂಗಾವಳಿ ನದಿ ಬಳಿ ಯುವತಿಯೊಬ್ಬಳು ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೃಹತ್‌ ಗಾತ್ರದ ಮೊಸಳೆ ಕಂಡು ಎಚ್ಚರ ತಪ್ಪಿ ಬಿದ್ದ ಘಟನೆ ಹೊಸಕಂಬಿಯಲ್ಲಿ ಗುರುವಾರ ನಡೆದಿದೆ.

ಅಂಕೋಲಾ (ಆ.25) :  ಗಂಗಾವಳಿ ನದಿ ಬಳಿ ಯುವತಿಯೊಬ್ಬಳು ಸೆಲ್ಫಿ ತೆಗೆಯುತ್ತಿದ್ದ ವೇಳೆ ಬೃಹತ್‌ ಗಾತ್ರದ ಮೊಸಳೆ ಕಂಡು ಎಚ್ಚರ ತಪ್ಪಿ ಬಿದ್ದ ಘಟನೆ ಹೊಸಕಂಬಿಯಲ್ಲಿ ಗುರುವಾರ ನಡೆದಿದೆ.

ಧಾರವಾಡದ ಶಂಕರ ದೊಡ್ಮನಿ ಕುಟುಂಬ ಪ್ರವಾಸಕ್ಕೆಂದು ವಿಭೂತಿ ಪಾಲ್ಸ್‌ ಹಾಗೂ ಗೋಕರ್ಣಕ್ಕೆ ಆಗಮಿಸಿದೆ. ಈ ವೇಳೆ ವಿಭೂತಿ ಪಾಲ್ಸ್‌ಗೆ ಸಾಗುವ ಮಾರ್ಗ ಮಧ್ಯೆ ಹೊಸಕಂಬಿ ಬ್ರಿಜ್‌ ಬಳಿ ಯುವತಿ ನದಿಯ ವಿಹಂಗಮ ನೋಟದ ಸೆಲ್ಫಿ ತೆಗೆಯುತ್ತಿದ್ದಾಗ, ಮೊಬೈಲ್‌ ಪರದೆಯೊಳಗೆ ಬೃಹತ್‌ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ.

ಮೊಸಳೆ ಕಂಡು ಭಯಭೀತರಾದ ಯುವತಿ ಒಮ್ಮೆಲೆ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಇದರಿಂದ ಪ್ರವಾಸಕ್ಕೆ ಬಂದ ಕುಟುಂಬ ತೀವ್ರ ಆತಂಕಕ್ಕೆ ಒಳಗಾದ ಘಟನೆಯು ನಡೆಯಿತು. ನಂತರ ಯುವತಿಯನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ತರುವಷ್ಟರಲ್ಲಿ ಯುವತಿ ಚೇತರಿಸಿಕೊಂಡಿದ್ದಾಳೆ.

ಧಾರವಾಡ: ಯುವತಿಯರ ಸೆಲ್ಫಿ ವಿಡಿಯೋ ಮಾಡುತಿದ್ದ ಯುವಕನನಿಗೆ ಬುದ್ಧಿ ಕಲಿಸಿದ ಪೊಲೀಸರು

ಹೊಸಕಂಬಿ ಬ್ರಿಜ್‌ನ ಹಿನ್ನೀರು ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ನದಿಯಲ್ಲಿ ಮೀನು ಹಿಡಿಯಲು, ಈಜಾಡಲು ಹಾಗೂ ನೀಲೆಕಲ್ಲು ತೆಗೆಯಲು ನೆರೆಹೊರೆಯ ಗ್ರಾಮದ ಜನರು ಆಗಮಿಸುತ್ತಾರೆ. ಈಗ ಇಲ್ಲಿ ಬೃಹತ್‌ ಮೊಸಳೆಯ ಕಂಡು ಬಂದಿದ್ದರಿಂದ ಜನ-ಜಾನುವಾರುಗಳು ನದಿ ತೀರಕ್ಕೆ ತೆರಳಲು ಆತಂಕಪಡುವಂತಾಗಿದೆ.

ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಿ ಇಲ್ಲಿ ವಾಸವಾಗಿರುವ ಮೊಸಳೆಯನ್ನು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಹೊಸಕಂಬಿ ನಾಗರಿಕರು ಆಗ್ರಹಿಸಿದ್ದಾರೆ.

ಹಾರಂಗಿ ಡ್ಯಾಂ ಬಳಿ ಸೆಲ್ಫೀ ತೆಗೆವಾಗ ನದಿಗೆ ಬಿದ್ದ ಪ್ರವಾಸಿಗ !