Asianet Suvarna News Asianet Suvarna News

ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ

ಮಂಡ್ಯದಲ್ಲಿ ಬಸವನ ಪವಾಡಕ್ಕೆ ಜನ ಅಚ್ಚರಿಗೊಳಗಾಗಿದ್ದಾರೆ. ದಿನ ನಿತ್ಯ ಒಂದಲ್ಲ ಒಂದು ಪವಾಡ ತೋರಿಸ್ತಿರೋ ಬಸವ ಹೂತಿಟ್ಟಿದ್ದ ಮಾಟದ ವಸ್ತುಗಳನ್ನು ಪತ್ತೆ  ಹಚ್ಚಿಕೊಟ್ಟಿದೆ.

bull famous for its divine power in mandya
Author
Bangalore, First Published Jan 5, 2020, 12:30 PM IST
  • Facebook
  • Twitter
  • Whatsapp

ಮಂಡ್ಯ(ಜ.05): ಮಂಡ್ಯದಲ್ಲಿ ಬಸವನ ಪವಾಡಕ್ಕೆ ಜನ ಅಚ್ಚರಿಗೊಳಗಾಗಿದ್ದಾರೆ. ದಿನ ನಿತ್ಯ ಒಂದಲ್ಲ ಒಂದು ಪವಾಡ ತೋರಿಸ್ತಿರೋ ಬಸವ ಹೂತಿಟ್ಟಿದ್ದ ಮಾಟದ ವಸ್ತುಗಳನ್ನು ಪತ್ತೆ  ಹಚ್ಚಿಕೊಟ್ಟಿದೆ.

ಮಾಟ ಮಂತ್ರದಿಂದ ಕಂಗೆಟ್ಟಿದ ರೈತ ಕುಟುಂಬ ಸಮಸ್ಯೆ ನಿವಾರಣೆಗೆ ಬಸಪ್ಪನ ಮೊರೆ ಹೋಗಿದ್ದರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ‌ ಘಟನೆ ನಡೆದಿದ್ದು, ಬಸವನ ಪವಾಡಕ್ಕೆ ಜನ ಬೆರಗಾಗಿದ್ದಾರೆ.

ಕೊಂಬಿನಿಂದಲೇ ತೊಟ್ಟಿಲು ತೂಗಿ ಮಗು ಮಲಗಿಸಿದ ಬಸವ.

ಗ್ರಾಮದ ಹೊನ್ನಲಗೆಗೌಡ ಎಂಬುವರು ಮನೆಯ ಸಮಸ್ಯೆಗೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದಾರೆ. ಮನೆಯವರಿಗೆ ಯಾರೋ ಮಾಟ ಮಾಡಿಸಿರೋ ಕಾರಣಕ್ಕೆ ಬಸವನ ಕರೆಸಿ ಮಾಟ ತೆಗೆಸಲಾಗಿದೆ. ರಾಮನಗರ ಜಿಲ್ಲೆಯ ಜಯಪುರದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ ಕುಟುಂಬ ಮಾಟ ತೆಗೆಸಲು ಮುಂದಾಗಿತ್ತು.

ಮಾಡಿರೋ ಮಾಟ ಮಂತ್ರಗಳನ್ನು ತೋರಿಸಿ ಮಾಟ ಮಂತ್ರ ನಿವಾರಿಸುವ ಪ್ರಸಿದ್ದಿಯಾಗಿರೋ ಜಯಪುರದ ಬಸಪ್ಪ ಊರಿಗೆ ಬಂದಾಗ ಗ್ರಾಮಸ್ಥರು ಬಸಪ್ಪನಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದ್ದಾರೆ. ನಂತರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಬಸಪ್ಪ ಪತ್ತೆ ಹಚ್ಚಿದ್ದಾನೆ.

KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್‌ನಲ್ಲಿ ಭಾರೀ ಹೆಚ್ಚಳ

ಮಾಟ ಮಾಡಿ ಹೂತಿಟ್ಟಿರೋ ಜಾಗವನ್ನು ಪಾದದ ಮೂಲಕ ಗುರುತು ಮಾಡಿ ತೋರಿಸಿದ ಬಸಪ್ಪನ ಪವಾಡ ಕಂಡು ಊರಿನ ಜನ ಅಚ್ಚರಿಗೊಳಗಾಗಿದ್ಧಾರೆ. ಮಾಟದ ವಸ್ತು ಗಳಿಗೆ ಹಾಲುತುಪ್ಪ ಬಿಟ್ಟು ಸಮಸ್ಯೆ ನಿವಾರಣೆ ಮಾಡಲಾಗಿದೆ.

"

Follow Us:
Download App:
  • android
  • ios