ಚಾಮರಾಜನಗರದ ಜನನ ಮಂಟಪದಲ್ಲೂ ನಡೆಯಲಿದೆ ಚಾಮರಾಜೇಶ್ವರರ ದರ್ಬಾರ್!
ಮೈಸೂರು ರಾಜ ಮನೆತನಕ್ಕೂ ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧ. ಚಾಮರಾಜ ಒಡೆಯರ್ ಹುಟ್ಟಿದ್ದು ಕೂಡ ಚಾಮರಾಜನಗರದಲ್ಲೇ. ಅವರ ನೆನಪಿನಾರ್ಥ ಮಹಾರಾಜರು ಹುಟ್ಟಿದ ಸ್ಥಳದಲ್ಲಿ ಜನನ ಮಂಟಪ ಕೂಡ ನಿರ್ಮಿಸಲಾಗಿತ್ತು.
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಸೆ.28): ಮೈಸೂರು ರಾಜ ಮನೆತನಕ್ಕೂ ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧ. ಚಾಮರಾಜ ಒಡೆಯರ್ ಹುಟ್ಟಿದ್ದು ಕೂಡ ಚಾಮರಾಜನಗರದಲ್ಲೇ. ಅವರ ನೆನಪಿನಾರ್ಥ ಮಹಾರಾಜರು ಹುಟ್ಟಿದ ಸ್ಥಳದಲ್ಲಿ ಜನನ ಮಂಟಪ ಕೂಡ ನಿರ್ಮಿಸಲಾಗಿತ್ತು. ಹಾಗು ಮಹಾರಾಜರು ಚಾಮರಾಜೇಶ್ವರ ದೇವಾಲಯ ಕೂಡ ನಿರ್ಮಾಣ ಮಾಡಿದ್ದರು.ಹಿಂದೆ ನವರಾತ್ರಿ ಸಮಯದಲ್ಲಿ ಜನನ ಮಂಟಪದಲ್ಲಿ ದರ್ಬಾರ್ ಕೂಡ ನಡೆಯುತ್ತಿತ್ತು. ಆದ್ರೆ ನಾಲ್ಕು ದಶಕದಿಂದ ಈ ದರ್ಬಾರ್ ನಿಂತು ಹೋಗಿತ್ತು. ಈಗ ಮತ್ತೇ ದರ್ಬಾರ್ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಚಾಮರಾಜನಗರಕ್ಕೂ ಮೈಸೂರಿನ ರಾಜ ಮನೆತನಕ್ಕೆ ಅವಿನಾಭಾವ ಸಂಬಂದವಿದೆ 1776 ರಲ್ಲಿ ಚಾಮರಾಜ ಒಡೆಯರ್ ರವರು ಚಾಮರಾಜನಗರದಲ್ಲಿ ಜನಿಸಿದರು. ಚಾಮರಾಜನಗರಕ್ಕೆ ಮೊದಲು ಅರಿ ಕುಠಾರ ಎಂಬ ಹೆಸರಿತ್ತು. ಮೈಸೂರು ರಾಜ ಮನೆತನ ಚಾಮರಾಜನಗರಕ್ಕೆ ಹಲವು ಕೊಡುಗೆಗಳನ್ನು ಕೂಡ ಕೊಟ್ಟಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಚಾಮರಾಜ ಒಡೆಯರ್ ರವರ ನೆನಪಿಗೋಸ್ಕರ ಚಾಮರಾಜನಗರದಲ್ಲಿ ಜನನ ಮಂಟಪವನ್ನು ಕಟ್ಟಿಸಿದರು. ಅಲ್ಲದೇ ಅರಿ ಕುಠಾರ ಎಂಬ ಹೆಸರು ಬದಲು ಮಾಡಿ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಜೊತೆಗೆ ಚಾಮರಾಜೇಶ್ವರ ದೇವಾಲಯವನ್ನು ಕೂಡ ಕಟ್ಟಿಸಿದರು.
ಸಂಸ್ಕೃತ ಕಲಿಯೋಕೆ ಇಸ್ರೇಲ್‌ನಿಂದ ಚಿಕ್ಕಮಗಳೂರಿಗೆ ಬಂದ ವಿದೇಶಿ ಟೀಮ್: ರಾಮಾಯಣದ ಈ ಶ್ಲೋಕಗಳನ್ನು ಕಲಿಯುತ್ತಿದ್ದಾರೆ!
ಆಗಿನಿಂದಲೂ ಕೂಡ ಜನನ ಮಂಟಪದಲ್ಲಿ ನವರಾತ್ರಿಯಲ್ಲಿ ಚಾಮರಾಜೇಶ್ವರ ದರ್ಬಾರ್ ನಡೆಯುತ್ತಲೇ ಬಂದಿತ್ತು. ಆದ್ರೆ 1980 ರಲ್ಲಿ ಕಾರಣಾಂತರಗಳಿಂದ ಈ ದರ್ಬಾರ್ ಅನ್ನು ನಿಲ್ಲಿಸಲಾಗಿತ್ತು. ನವರಾತ್ರಿಯ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ಸಿಂಹಾಸನದಲ್ಲಿ ಮೈಸೂರು ರಾಜರ ದರ್ಬಾರ್ ನಡೆಯುತ್ತಿದ್ರೆ ಇಲ್ಲಿ ದೇವರ ದರ್ಬಾರ್ ನಡೆಯುತ್ತಿತ್ತು. ವಿಶ್ವವಿಖ್ಯಾತ ನಾಡಹಬ್ಬ ದಸರೆಗೆ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಅದ್ದೂರಿ ದಸರಾ ಉತ್ಸವ ನಡೆಯಲಿದೆ. ಈಗಾಗ್ಲೇ ಸರ್ಕಾರ ಈ ಬಗ್ಗೆ ಘೋಷಣೆ ಮಾಡಿದೆ. ಈ ಹಿನ್ನಲೆ ಚಾಮರಾಜನಗರದಲ್ಲೂ ಕೂಡ ಅದ್ದೂರಿ ದಸರಾ ಉತ್ಸವ ನಡೆಸಲು ಚಾಮರಾಜನಗರ ಜಿಲ್ಲಾಡಳಿತ ಕೂಡ ತೀರ್ಮಾನಿಸಿದೆ.
ಇನ್ನೂ ಈ ಜನನ ಮಂಟಪ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದೆ. ಈಗ ನೋಡಿದ್ರೆ ಅಕ್ಷರಶಃ ಪಾಳು ಬಿದ್ದಿದೆ. ಮೈಸೂರಿನಲ್ಲಿ ನಡೆಯುವ ದರ್ಬಾರ್ ನಂತೆ ಚಾಮರಾಜೇಶ್ವರ ವಿಗ್ರಹ ತಂದು ಮೆರವಣಿಗೆ ಮಾಡಿ ಜನನ ಮಂಟಪದಲ್ಲಿ ದರ್ಬಾರ್ ನಡೆಸುವ ಸಂಸ್ಕೃತಿಯಿತ್ತು. ಆದ್ರೀಗಾ 1980 ರಿಂದ ಈ ದರ್ಬಾರ್ ಗೆ ಬ್ರೇಕ್ ಬಿದ್ದಿತ್ತು. ಇದೀಗಾ ಮತ್ತೇ ದರ್ಬಾರ್ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇನ್ನೂ ಸುಣ್ಣ ಬಣ್ಣ ಕೆಲಸ ನಡೆಯಬೇಕಿದೆ. ಆದ್ರೆ ದಸರಾಗೆ ಕೆಲವೇ ದಿನಗಳು ಉಳಿದಿದ್ದರು ಕೂಡ ಇನ್ನೂ ಕೆಲಸ ಆರಂಭವಾಗಿಲ್ಲ. ಆದಷ್ಟು ಬೇಗ ಜನನ ಮಂಟಪವನ್ನು ಸುಂದರಗೊಳಿಸಲಿ.
ಪೂಜಾ ಹಡಪದ ಬಲಾತ್ಕಾರ-ಕೊಲೆ: 6 ವರ್ಷದ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ!
ನಾವು ಕೂಡ ದರ್ಬಾರ್ ನೋಡಲು ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು. ಒಟ್ನಲ್ಲಿ ನವರಾತ್ರಿಯ ಮೈಸೂರು ದಸರಾ ಒಂದೆಡೆ ಕಳೆಗಟ್ಟುತ್ತಿದ್ದರೆ, ಇತ್ತ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕೂಡ ದಸರಾ ಸಿದ್ದತೆ ಆರಂಭಗೊಂಡಿದೆ. ಚಾಮರಾಜನಗರ ದಸರಾವನ್ನು ಅತ್ಯಾಕರ್ಷಕಗೊಳಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಈ ಹಿನ್ನಲೆ ಮೈಸೂರಿನಲ್ಲಿ ರಾಜರ ದರ್ಬಾರ್ ನಡೆಯುವ ವೇಳೆಯೇ ಚಾಮರಾಜಗರದಲ್ಲೂ ಕೂಡ ದೇವರ ದರ್ಬಾರ್ ನಡೆಸಲು ಸಿದ್ದತೆ ನಡೆಸಲಾಗ್ತಿದೆ.