Gadag 'ಬಸ್ ನಿಲ್ದಾಣ'ದ ಉದ್ಘಾಟನೆಗೆ MLA ಬದ್ಲು ಎಮ್ಮೆ ಚೀಫ್ ಗೆಸ್ಟ್..!

ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ MLA ಬದಲಾಗಿ ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಿದ್ದಾರೆ. ಅರೇ ಇದೇನಿದು ಅಚ್ಚರಿ ಅಂತೀರಾ ಇಲ್ಲಿದೆ ನೋಡಿ ಸ್ಟೋರಿ.

buffalo Chief Guest For Balehosur Village Bus Stand inauguration Function at Gadag rbj

ವರದಿ: ಗಿರೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗದಗ

ಗದಗ, (ಜುಲೈ.19) :
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿನ ಬಿದ್ದುಹೋಗಿರುವ ಬಸ್ ನಿಲ್ದಾಣದ ಎದುರು ಚಪ್ಪರ ಕಟ್ಟಿ, ಚಪ್ಪರದ ಬಸ್ ನಿಲ್ದಾಣವನ್ನ ಉದ್ಘಾಟನೆ ಮಾಡಲಾಯ್ತು.. 

ಕಿತ್ತೋಗಿರೋ ಬಸ್ ನಿಲ್ದಾಣದ ಉದ್ಘಾಟನೆಗೆ ಎಮ್ ಎಲ್ ಎ ಬದಲು ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಲಾಗಿದೆ. ಈ ಮೂಲಕ ಜನಪ್ರತಿನಿಧಿಗಳನ್ನ ಲೇವಡಿ ಮಾಡಿದ್ದಾರೆ. ಅಲ್ಲದೇ ಬಸ್ ಉದ್ಘಾಟನೆಯ ಅಣಕು ಕಾರ್ಯಕ್ರಮದ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ದಶಕದ ಹಿಂದೆಯೇ ಬಾಲೇಹೊಸೂರು ಗ್ರಾಮದ ಬಸ್ ನಿಲ್ದಾಣ ಬಿದ್ದು ಹೋಗಿದೆ. ಈ ಬಗ್ಗೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಸೂಕ್ತ ಭರವಸೆ ಸಿಕ್ಕಿರಲಿಲ್ವಂತೆ.. ಹೀಗಾಗಿ ಗ್ರಾಮಸ್ಥರು ಸೇರ್ಕೊಂಡು ಚಪ್ಪರದ ಬಸ್ ನಿಲ್ದಾಣ ಮಾಡಿ, ಉದ್ಘಾಟನೆಯನ್ನೂ ಮಾಡಿದಾರೆ. ಆದ್ರೆ, ಉದ್ಘಾಟನೆಗೆ ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಯಾರು ಹಿಡಿಯಬಾರದು, ಬಿಜೆಪಿ ಶಾಸಕರೊಬ್ಬರ ಲೆಟರ್ ವೈರಲ್

ಬಸ್ ನಿಲ್ದಾಣ ಉದ್ಘಾಟನೆಯ ಅಣಕು ಕಾರ್ಯಕ್ರಮ
ಬಾಲೇಹೊಸೂರು ಗ್ರಾಮದಲ್ಲಿ ಸುಮಾರು 40 ವರ್ಷದ ಹಿಂದೆ ಬಸ್ ನಿಲ್ದಾಣ ನಿರ್ಮಾಣವಾಗಿತ್ತು.. ಸುಮಾರು 10 ವರ್ಷದ ಹಿಂದೆಯೇ ಛಾವಣಿ ಕುಸಿದು ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ.. ಕಟ್ಟಡದ ಆವರಣದಲ್ಲಿ ಕಸ ಚೆಲ್ಲುವ ಮೂಲಕ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿದೆ.. ಗ್ರಾಮದ ಮಹಿಳೆಯರು ಬಸ್ ನಿಲ್ದಾಣದ ಪಕ್ಕದ ಕಟ್ಟೆ ಮೇಲೆ ಕೂತು ಬಸ್ ಗೆ ಕಾಯಬೇಕಾದ ಪರಿಸ್ಥಿತಿ ಇದೆ.

ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿ ಅವರಿಗೆ ಬಸ್ ನಿಲ್ದಾಣದ ದುರಸ್ಥಿ ಬಗ್ಗೆ ಮನವರಿಕೆ ಮಾಡ್ಲಾಗಿತ್ತು. ಮನವಿಯನ್ನೂ ಸಲ್ಲಿಸಲಾಗಿದೆ ಅಂತಾ ರೈತ ಮುಖಂಡ ಲೋಕೇಶ್ ಜಾಲವಾಡಗಿ ಅವರು ಹೇಳ್ತಿದಾರೆ.. ಸ್ಪಂದನೆ ಸಿಗದ ಕಾರಣ ವಿಶೇಷ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.. 

ಗ್ರಾಮದಲ್ಲಿ ಸುಮಾರು 5 ಸಾವಿರ ಜನ ಸಂಖ್ಯೆ ಇದೆ.. ವಿದ್ಯಾಭ್ಯಾಸದ ನಿಮಿತ್ತ ನಿತ್ಯ 100 ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಹಾಗೂ ಗುತ್ತಲ ಗ್ರಾಮಕ್ಕೆ ಹೋಗ್ತಾರೆ.. ಬಸ್ ಗಾಗಿ ಕಾಯಲು ಬಸ್ ನಿಲ್ದಾಣದ ಪಕ್ಕದ ಹೋಟೆಲ್ ಕಟ್ಟೆ ಆಶ್ರಯಸಬೇಕಾಗಿದೆ ಅಂತಾ ಗ್ರಾಮಸ್ಥ ವಿರೂಪಾಕ್ಷ ಇಟಗಿ ಹೇಳಿದ್ದಾರೆ.. 

ಮನವಿ ಸಲ್ಲಿಸಿ ರೋಸಿ ಹೋಗಿದ್ರಿಂದ ಜನರು ವಿನೂತನ ಕಾರ್ಯಕ್ರಮ ಮಾಡಿದ್ದಾರೆ.. ಸ್ಪಂದನೆ ಸಿಗದಿದ್ದರೆ ಹೋರಾಟ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ..

Latest Videos
Follow Us:
Download App:
  • android
  • ios