Asianet Suvarna News Asianet Suvarna News

ಏರ್‌ಪೋರ್ಟ್ ಸ್ಥಾಪ​ನೆ​ಯಿಂದ ಬಿಎ​ಸ್‌ವೈ, ಬಿವೈ​ಆರ್‌ ಹೆಸರು ಶಾಶ್ವ​ತ: ಈಶ್ವ​ರಪ್ಪ

ಮಲೆನಾಡಿನ ಬಹುವರ್ಷಗಳ ಕನಸಿನ ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಅಪಾರವಾಗಿದೆ. ವಿಮಾನ ನಿಲ್ದಾಣ ಇರುವವರೆಗೆ ಇವರಿಬ್ಬರ ಹೆಸರು ಶಾಶ್ವತವಾಗಿರುತ್ತದೆ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

BSY BYR name perpetuated since establishment of airport says eshwarappa rav
Author
First Published Feb 19, 2023, 4:30 AM IST

ಶಿವಮೊಗ್ಗ (ಫೆ.19) : ಮಲೆನಾಡಿನ ಬಹುವರ್ಷಗಳ ಕನಸಿನ ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣದ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಅಪಾರವಾಗಿದೆ. ವಿಮಾನ ನಿಲ್ದಾಣ ಇರುವವರೆಗೆ ಇವರಿಬ್ಬರ ಹೆಸರು ಶಾಶ್ವತವಾಗಿರುತ್ತದೆ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

ಫೆ.27ರಂದು ಉದ್ಘಾಟನೆಗೊಳ್ಳಲಿರುವ ಸೋಗಾನೆ ವಿಮಾನ ನಿಲ್ದಾಣ(Shivamogga airport)ದ ಕಾರ್ಯಕ್ರಮದ ವೇದಿಕೆಗೆ ಶಂಕುಸ್ಥಾಪನೆಯನ್ನು ಸಂಸದ ಬಿ.ವೈ. ರಾಘವೇಂದ್ರ(MP BY Raghavendra) ಅವರೊಂದಿಗೆ ನೆರವೇರಿಸಿ, ಕಾರ್ಯಕ್ರಮದ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವ​ರು ಮಾತನಾಡಿದರು.

ರಾಜಾಹುಲಿ ಎಂದು ರಾಜ್ಯದ ಜನತೆಯಿಂದ ಕರೆಸಿಕೊಂಡ ಬಿಎಸ್‌ವೈ: ಸಂಸದ ಬಿ.ವೈ.​ರಾ​ಘ​ವೇಂದ್ರ

ಫೆ.27ಮಲೆನಾಡಿಗೆ ಮಹತ್ವದ ದಿನ. ಜನರ ಬಹು ವರ್ಷಗಳ ವಿಮಾನ ಹಾರಾಟದ ಕನಸು ನನಸಾಗುತ್ತಿದೆ. ಇದರ ಜೊತೆಗೆ ವಿಶ್ವನಾಯಕ ಪ್ರಧಾನಿ ಮೋದಿಯವರೇ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿರುವುದು ಸಂಭ್ರಮದ ವಿಷಯವಾಗಿದೆ. ಈ ಉದ್ಘಾಟನಾ ಕಾರ್ಯಕ್ರಮವನ್ನು ಸುಮಾರು 2 ಲಕ್ಷ ಜನರು ಕಣ್ತುಂಬಿಸಿಕೊಳ್ಳಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ವಿಮಾನ ನಿಲ್ದಾಣದ ಉದ್ಘಾಟನೆ ಜೊತೆಗೆ ಸುಮಾರು .5 ಸಾವಿರ ಕೋಟಿ ವೆಚ್ಚದ 44 ಯೋಜನೆಗಳ ಇತರೆ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕೂಡ ಸೇರಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್‌. ರುದ್ರೇಗೌಡ, ಕೆ.ಬಿ. ಅಶೋಕ ನಾಯ್ಕ, ಪ್ರಮುಖರಾದ ಎಸ್‌.ಎಸ್‌. ಜ್ಯೋತಿ ಪ್ರಕಾಶ್‌, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಎಸ್‌ಪಿ ಮಿಥುನ್‌ಕುಮಾರ್‌, ಸಿ.ಎಸ್‌. ಷಡಾಕ್ಷರಿ ಹಾಗೂ ಏರ್‌ಪೋರ್ಚ್‌ ಅಧಿಕಾರಿಗಳು ಇದ್ದರು.

‘ಏರ್‌​ಪೋ​ರ್ಟ್​ನಿಂದಾಗಿ ಜಗ​ತ್ತಿನ ಉದ್ಯ​ಮಿ​ಗಳು ಶಿವ​ಮೊ​ಗ್ಗ​ಕ್ಕೆ’

ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭವಾದರೆ ಚಿತ್ರಣವೇ ಬದಲಾಗುತ್ತದೆ. ಜಗತ್ತಿನ ಉದ್ಯಮಿಗಳು ಶಿವಮೊಗ್ಗಕ್ಕೆ ಬರುತ್ತಾರೆ. ಉದ್ಯೋಗ ಅವಕಾಶಗಳು ಹೆಚ್ಚುತ್ತವೆ ಎಂದು ಶಾಸ​ಕ ಈಶ್ವ​ರಪ್ಪ ಹೇಳಿ​ದರು.

ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಮತ್ತೆ ಯಡಿಯೂರಪ್ಪ ಅವರ ಹೆಸರೇ ಮುಂಚೂಣಿಗೆ ಬಂದರೂ ಆಶ್ಚರ್ಯವಿಲ್ಲ. ವಿಮಾನ ನಿಲ್ದಾಣಕ್ಕಾಗಿ ಶ್ರಮಿಸಿದ ಬಿ. ಎಸ್‌. ಯಡಿಯೂರಪ್ಪ ಅವರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡುವಂತೆ ನಾನು ಸೂಚಿಸಿದ್ದೆ. ಸಚಿವ ಸಂಪುಟದಲ್ಲಿಯೂ ಇದು ಅನುಮೋದನೆಯಾಗಿತ್ತು. ಆದರೆ ಸ್ವತಃ ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ, ಬದಲಾಗಿ ಎಂದು ಕುವೆಂಪು ಅವರ ಹೆಸರು ಇಡಬೇಕು ಎಂದು ಹೇಳುವ ಮೂಲಕ ದೊಡ್ಡತನ ತೋರಿದ್ದಾರೆ. ಆದರೆ ಇದುವರೆಗೂ ಯಾವುದೇ ಹೆಸರು ಅಂತಿಮವಾಗಿಲ್ಲ. ಕೊನೆಗೆ ಯಡಿಯೂರಪ್ಪನವರ ಹೆಸರೇ ಮತ್ತೆ ಮುಂಚೂಣಿಗೆ ಬರಬಹುದು, ನೋಡೋಣ ಎಂದರು.

ಯಡಿ​ಯೂ​ರಪ್ಪ ಅವ​ರನ್ನು ನೇಗಿ​ಲ​ಯೋಗಿ ಎಂದಿದ್ದರು ವಾಜ​ಪೇ​ಯಿ: ಸಂಸದ ಬಿವೈ ರಾಘವೇಂದ್ರ

-ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕಾರ್ಯಕ್ರಮದ ವೇದಿಕೆಗೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.

Follow Us:
Download App:
  • android
  • ios