ಜೆಡಿಎಸ್ ಕಳೆದ ಚುನಾವಣೆಯಲ್ಲಿ 18 ಸ್ಥಾನದಲ್ಲಿ ಜಯಗಳಿಸಲು ನಡೆದಿದ್ದ ಈ  ಹೊಂದಾಣಿಕೆಯೇ ಕಾರಣವಾಗಿತ್ತು. ಮುಖ್ಯಮಂತ್ರಿಯಾಗುವ ಅವಕಾಶವು ಇದರಿಮದಲೇ ಸಿಕ್ಕಿದ್ದೆಂದು ಮುಖಂಡರೋರ್ವರು ಹೇಳಿದ್ದಾರೆ. 

ಮಳವಳ್ಳಿ (ಜ.29): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಎಸ್ಪಿ ಹೊಂದಾಣಿಕೆಯಿಂದ ಜೆಡಿಎಸ್‌ಗೆ ನಷ್ಟವಾಗಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬಿಎಸ್ಪಿ ರಾಜಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯವತಿ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಬಿಎಸ್ಪಿ ಘಟಕದಿಂದ ಹಣ್ಣು ಹಂಪಲು ವಿತರಿಸಿ ಮಾತನಾಡಿ, 2013ರ ಚುನಾವಣೆ ಮಾನದಂಡವಾಗಿಟ್ಟುಕೊಂಡು ಮೊದಲನೇ ಎರಡು, ಮೂರನೇ ಸ್ಥಾನ ಬಂದಿರುವ ಕ್ಷೇತ್ರಗಳನ್ನು ಹೊರತುಪಡಿಸಿ 19 ಕ್ಷೇತ್ರಗಳಿಗೆ ಬಿಎಸ್ಪಿಗೆ 2018ರ ಚುನಾವಣೆಯಲ್ಲಿ ನೀಡಲಾಗಿತ್ತು ಎಂದರು.

ಪರಿಷತ್‌ ಸಭಾಪತಿ ಹುದ್ದೆ: ಮತ್ತೆ ಗದ್ದಲ ಆಗುತ್ತಾ? ...

ಬಿಎಸ್ಪಿ ಹೊಂದಾಣಿಕೆಯಿಂದ ಜೆಡಿಎಸ್‌ ಪಕ್ಷವೂ ಮಳವಳ್ಳಿ, ಕೆ.ಆರ್‌.ಪೇಟೆ, ಸಕಲೇಶ್ವರ, ಮೂಡಿಗೆರೆ ಸೇರಿದಂತೆ ಕನಿಷ್ಠ 18 ಕ್ಷೇತ್ರಗಳಲ್ಲಿ ಅನುಕೂಲವಾಗಿದೆ. ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ನೀವು 2ನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದು ತಿರುಗೇಟು ನೀಡಿದರು.

ಜಿಲ್ಲಾ ಕಾರ್ಯದರ್ಶಿ ವೀರಭದ್ರಯ್ಯ, ತಾಲೂಕು ಅಧ್ಯಕ್ಷ ಕಮಲ್‌ ಶರೀಫ್‌, ಹಿಂದುಳಿದ ವರ್ಗಗಳ ಘಟಕದ ನಾಗೇಂದ್ರ, ಗ್ರಾಪಂ ಸದಸ್ಯ ನಾಗೇಂದ್ರ, ಸಿದ್ದರಾಜು, ಅಶೋಕ್‌, ಉಮೇಶ್‌, ಮಹೇಶ್‌, ಅಂಬರೀಷ್‌ ಆನಂದ್‌ ಕುಮಾರ್‌ ಇದ್ದರು.