ಮಂಗಳೂರು(ಡಿ.04): ಬಿಎಸ್‌ಎನ್‌ಎಲ್‌ನ ಬಹುನಿರೀಕ್ಷಿತ 4ಜಿ ಸೇವೆ ಡಿಸೆಂಬರ್‌ ಮೂರನೇ ವಾರ ಚಾಲನೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ 3ಜಿ ಸಿಮ್‌ ಹೊಂದಿರುವ ಗ್ರಾಹಕರು ತಮ್ಮ ಸಿಮ್‌ ಕಾರ್ಡ್‌ನ್ನು 4ಜಿ ಕೂಡಲೇ ಬದಲಾಯಿಸಿಕೊಳ್ಳುವಂತೆ ಬಿಎಸ್‌ಎನ್‌ಎಲ್‌ ದ.ಕ. ಜಿಲ್ಲಾ ಪ್ರಕಟಣೆ ತಿಳಿಸಿದೆ.

3ಜಿ ಸಿಮ್‌ ಹೊಂದಿರುವ ಗ್ರಾಹಕರು ತಮ್ಮ ಯಾವುದಾದರೂ ಒಂದು ಸ್ವಅನುಮೋದಿತ ಗುರುತಿನ ಚೀಟಿಯನ್ನು ಬಿಎಸ್‌ಎನ್‌ಎಲ್‌ ಗ್ರಾಹಕ ಸೇವಾ ಕೇಂದ್ರಕ್ಕೆ ಹಾಜರುಪಡಿಸಿ 4ಜಿ ಸಿಮ್‌ಗೆ ಬದಲಾಯಿಸಬಹುದು. 4ಜಿ ಚಾಲನೆಗೆ ಬಂದ ಬಳಿಕ 3ಜಿ ಸೇವೆ ರದ್ದುಗೊಳ್ಳುವುದರಿಂದ 4ಜಿ ವ್ಯಾಪ್ತಿಯಲ್ಲಿ ಮೊಬೈಲ್‌ನಲ್ಲಿ ಡಾಟಾ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ರಾಹಕರು ತಕ್ಷಣವೇ ತಮ್ಮ ಸಿಮ್‌ನ್ನು 4ಜಿಗೆ ಉಚಿತವಾಗಿ ಬದಲಾಯಿಸುವಂತೆ ಕೋರಲಾಗಿದೆ.

ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

ಬಿಎಸ್‌ಎನ್‌ಎಲ್‌ನ ಗ್ರಾಹಕ ಸೇವಾ ಕೇಂದ್ರಗಳಾದ ಮಂಗಳೂರಿನ ಎ.ಬಿ.ಶೆಟ್ಟಿವೃತ್ತದ ಪರಡಿಗಮ್‌ ಪ್ಲಾಜಾ, ಸಿಟಿಒ ಪಾಂಡೇಶ್ವರ, ಬಿಜೈ, ಕಂಕನಾಡಿ, ಕಾವೂರು, ಕುಳಾಯಿ, ಸುರತ್ಕಲ್‌, ಹಂಪನಕಟ್ಟೆ, ಮೂಲ್ಕಿ, ಕೈಕಂಬ ಹಾಗೂ ಪಡುಬಿದ್ರಿಯಲ್ಲಿ 4ಜಿ ಸಿಮ್‌ಗೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮಂಗಳೂರಿಗೆ ಬಂತು ಟರ್ಕಿ ಈರುಳ್ಳಿ..!