ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ದಶಕಗಳ ಬೇಡಿಕೆಗೆ ಇದೀಗ ಕಾಸರಗೋಡಿನ ಸಂಸದ ರಾಜ್‌ ಮೋಹನ್‌ ಉಣ್ಣಿಥಾನ್‌ ಸಂಸತ್ತಲ್ಲಿ ಧ್ವನಿಯೆತ್ತುವ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ಸಂದರ್ಭ ಕರಾವಳಿಯ ಸಂಸದರ ಬಗ್ಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

mp from kerala Rajmohan Unnithan speaks for tulu language in  Parliament

ಮಂಗಳೂರು(ಡಿ.04): ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ದಶಕಗಳ ಬೇಡಿಕೆಗೆ ಇದೀಗ ಕಾಸರಗೋಡಿನ ಸಂಸದ ರಾಜ್‌ ಮೋಹನ್‌ ಉಣ್ಣಿಥಾನ್‌ ಸಂಸತ್ತಲ್ಲಿ ಧ್ವನಿಯೆತ್ತುವ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತುಳು ಭಾಷೆಯ ಕುರಿತು ಪ್ರಬಲ ಧ್ವನಿಯೆತ್ತುವಲ್ಲಿ ವಿಫಲರಾಗಿರುವ ಕರಾವಳಿ ಸಂಸದರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ‘ತುಳು ಪರ ಮಾತನಾಡಲು ಕೇರಳದ ಸಂಸದರು ಬರಬೇಕಾಯ್ತು. ಕರಾವಳಿ ಎಂಪಿಗಳೇ, ಕಾಸರಗೋಡು ಸಂಸದರನ್ನು ನೋಡಿ ಕಲಿಯಿರಿ’ ಎಂದು ಟೀಕಿಸುತ್ತಿದ್ದಾರೆ.

ತುಳುವಿನಲ್ಲಿ ಸಿನಿಮಾ ನಿರ್ಮಿಸ್ತಾರಾ ಅರ್ಜುನ್ ಸರ್ಜಾ..?

ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಉನ್ನಿಥಾನ್‌, 2011ರ ಜನಗಣತಿಯ ಪ್ರಕಾರ 18,46,427 ಮಂದಿ ತುಳು ಭಾಷಿಕರಿದ್ದಾರೆ. ಈಗಾಗಲೇ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ ಮಣಿಪುರಿ (17,61,079) ಮತ್ತು ಸಂಸ್ಕೃತ (24,821) ಭಾಷೆಗಳಿಗೆ ಹೋಲಿಸಿದರೆ ತುಳು ಭಾಷಿಕರ ಸಂಖ್ಯೆ ಅಧಿಕವಾಗಿದೆ ಎಂದು ಅಂಕಿ ಅಂಶ ಸಹಿತ ಮಾಹಿತಿ ನೀಡಿದ್ದಾರೆ.

ತುಳು ಟ್ವೀಟ್ ಅಭಿಯಾನಕ್ಕೆ ಅಣ್ಣಾಮಲೈ ಬೆಂಬಲ..!

ಇದುವರೆಗೂ ತುಳು ದೇಶದ ಅಧಿಕೃತ ಭಾಷೆಯಾಗಿ ಸ್ಥಾನ ಪಡೆದಿಲ್ಲ. ಒಂದು ವೇಳೆ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿದ್ದೇ ಆದರೆ ಸಾಹಿತ್ಯ ಅಕಾಡೆಮಿಯು ತುಳುವಿಗೆ ಮಾನ್ಯತೆ ನೀಡಲಿದೆ. ಆ ಬಳಿಕ ತುಳು ಕೃತಿಗಳು ದೇಶದ ಇನ್ನಿತರ ಅಧಿಕೃತ ಭಾಷೆಗಳಿಗೆ ಭಾಷಾಂತರಗೊಳ್ಳುವ ಪ್ರಕ್ರಿಯೆ ನಡೆಯಲಿದೆ. ತುಳುವಲ್ಲಿ ಸಂಸತ್ತಿನಲ್ಲಿ, ವಿಧಾನ ಸಭೆಯಲ್ಲಿ ತುಳುವಿನಲ್ಲೇ ಮಾತನಾಡುವ ಅವಕಾಶ ಸಿಗಲಿದೆ. ನಾಗರಿಕ ಸೇವಾ ಪರೀಕ್ಷೆಗಳನ್ನೂ ತುಳುವಿನಲ್ಲಿ ಬರೆಯಬಹುದು. ಆದ್ದರಿಂದ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉನ್ನಿಥಾನ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತುಳು ಪರ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್: ಅಭಿಯಾನಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್

‘‘ನಾನು ಅನಧಿಕೃತವಾಗಿರುವ, ಅಲ್ಪಸಂಖ್ಯಾತರ ಭಾಷೆಯಾಗಿರುವ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ ಎಂಬ ದೀರ್ಘಕಾಲದ ಬೇಡಿಕೆಯನ್ನು ವಿಶ್ವಸಂಸ್ಥೆಯು 2019ರನ್ನು ಸ್ಥಳೀಯ ಭಾಷೆಗಳ ಅಂತಾರಾಷ್ಟ್ರೀಯ ವರ್ಷವನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ದ್ರಾವಿಡ ಭಾಷೆಯಾಗಿರುವ ತುಳುವನ್ನು ಕರ್ನಾಟಕದ ಎರಡು ಜಿಲ್ಲೆ ಮತ್ತು ಕೇರಳದ ಒಂದು ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡಲಾಗುತ್ತದೆ’’ ಎಂದು ಲೋಕಸಭೆಯ ಗಮನಕ್ಕೆ ಉನ್ನಿಥಾನ್‌ ತಂದಿದ್ದಾರೆ.

ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

ತುಳು ಭಾಷೆಯ ಪರ ಸಂಸತ್ತಿನಲ್ಲಿ ಬೇಡಿಕೆಯಿಟ್ಟಕಾಸರಗೋಡು ಸಂಸದರ ಹೇಳಿಕೆ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಉನ್ನಿಥಾನ್‌ ಪರ ಜಾಲತಾಣಗಳಲ್ಲಿ ತುಳುವರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದೇ ಸಂದರ್ಭ ಕರಾವಳಿಯ ಸಂಸದರ ಬಗ್ಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಕರಾವಳಿ ಭಾಗದಿಂದ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಮತ್ತು ಕರಾವಳಿ ಮೂಲದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಭಾಷೆಯ ಕುರಿತಾಗಿ ಕಾಸರಗೋಡು ಸಂಸದರನ್ನು ನೋಡಿ ಕಲಿಯಿರಿ. ಕೋಮು ಗಲಭೆ ವಿಚಾರ ಬಂದಾಗ ಮೈ ಕೊಡವಿ ನಿಲ್ಲೋ ನೀವು ತುಳು ಭಾಷೆ ವಿಚಾರದಲ್ಲಿ ಉದಾಸೀನ ತೋರಿಸುತ್ತಿರುವುದು ನಾಚಿಕೆಗೇಡು ಎಂದು ಕಾಲೆಳೆಯುತ್ತಿದ್ದಾರೆ. 2-3 ಬಾರಿ ಸಂಸದರಾದರೂ ಒಂದು ಬಾರಿಯೂ ಈ ವಿಚಾರವನ್ನು ಲೋಕಸಭೆಯಲ್ಲಿ ಮಂಡನೆ ಮಾಡದಿರುವ ಕುರಿತೂ ಅನೇಕರು ಕಿಡಿಕಾರಿದ್ದಾರೆ.

ಕುಡ್ಲದಲ್ಲಿ ಬ್ಯಾಂಕಿಗೂ-ಬ್ಯಾಂಕಿಗೂ ಮದುವೆ..!

Latest Videos
Follow Us:
Download App:
  • android
  • ios