ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಮದುಮಗನ ನಿಧನದಿಂದ ಶೋಕಸಾಗರದಲ್ಲಿ ಮಳುಗಿದ ಗ್ರಾಮ| ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮದುಮಗ| 

ಧಾರವಾಡ(ಮೇ.02): ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಇಂದು(ಭಾನುವಾರ) ಜರುಗಿದೆ. ಶಶಿಕುಮಾರ್ ಪಟ್ಟಣಶೆಟ್ಟಿ (ಅರಿಷಣಗೇರಿ)(28)ಎಂಬ ಯುವಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುಮಗನ ನಿಧನದಿಂದ ಸಂಬಂಧಿಕರಲ್ಲಿ ದುಗುಡ ಮಡುಗಟ್ಟಿದೆ. ತಬಕದಹೊನ್ನಳ್ಳಿಯಲ್ಲಿ ಶನಿವಾರ ವರನ ಸ್ವಗೃಹದಲ್ಲಿ ಸರಳವಾಗಿ ಮದುವೆ ಜರುಗಿತ್ತು. ಈ ಮೊದಲು ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಜ್ವರದ ನಡುವೆ ಕೂಡ ಗುಗ್ಗಳ ಮದುವೆಯ ಶಾಸ್ತ್ರ ಮುಗಿಸಿ ನಂತರ ಶಿಗ್ಗಾವ ತಾಲೂಕಿನ‌ ಮುಕಬಸರಿಕಟ್ಟಿಯಲ್ಲಿನ ವಧುವಿನ ಮನೆಗೆ ನವ ದಂಪತಿಗಳು ತೆರಳಿದ್ದರು ಎನ್ನಲಾಗಿದೆ.

ಸಿಂಧನೂರು: ಹಸೆಮಣೆ ಏರಬೇಕಿದ್ದ ಮದುಮಗ ಅಕಾಲಿಕ ನಿಧನ

ವಧುವಿನ ಮನೆಯಲ್ಲಿ ಶಶಿಕುಮಾರ್‌ಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶಶಿಕುಮಾರ್‌ ಹಠಾತ್‌ ನಿಧನನಿಂದ ಎರಡೂ‌ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಚಿತು ಇಡೀ ಗ್ರಾಮವೇ ಶೋಕಸಾಗರದಲ್ಲಿ ಮಳುಗಿದೆ.