ಚಿಕ್ಕಮಗಳೂರು: 10 ವರ್ಷದ ಬಾಲಕನಿಗೆ ಮೃತ್ಯುವಾದ ತೊಟ್ಟಿಲ ಸೀರೆ

Boy dies after the saree craddle twist over his neck
Highlights

ಎಲ್ಲ ತಾಯಂದಿರು ಓದಲೇ ಬೇಕಾದ ಸುದ್ದಿ ಇದು. ನಿಮ್ಮ ಮಗುವನ್ನು ತೊಟ್ಟಿಲಲ್ಲಿ ಇಟ್ಟು ತೂಗುವಾಗ ಎಚ್ಚರ ವಹಿಸಲು ತಿಳಿಸುವ ಸುದ್ದಿ ಇದು.  ಜತೆಗೆ ಯಾವ ರೀತಿಯಲ್ಲಿ ತೊಟ್ಟಿಲು ಕಟ್ಟಿರುತ್ತಿರಿ ಎಂಬುದನ್ನು ಎಚ್ಚರಿಸುವ ಸುದ್ದಿ.

ಚಿಕ್ಕಮಗಳೂರು(ಜು.12]  ತೊಟ್ಟಲಿಗೆ ಕಟ್ಟಿದ್ದ ಸೀರೆಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ.  ಚಿತ್ರದುರ್ಗ ಮೂಲದ  ತೇಜಸ್ (10) ದುರಂತ ಸಾವು ಕಂಡಿದ್ದಾನೆ. ಸಂಬಂಧಿಕರ ಮನೆಗೆ ಬಂದಾಗ‌ ಅವಘಡ ಸಂಭವಿಸಿದೆ.

ಮಗುವಿನ ತೊಟ್ಟಿಲು ತೂಗುವಾಗ ನಡೆದ ಅವಘಡ ನಡೆದಿದ್ದು  ತೊಟ್ಟಿಲಿಗೆ‌ ಕಟ್ಟಿದ್ದ ಸೀರೆ ನೇಣಾಗಿ ಪರಿವರ್ತನೆಯಾಗಿದೆ.  ಬಾಲಕನ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆ ಚಿಕ್ಕಮಗಳೂರಿನ ಆದಿಶಕ್ತಿ ಪ್ರಕರಣ ನಡೆದಿದೆ. 

ತೊಟ್ಟಿಲಿನ ರೂಪದಲ್ಲಿ ಕಟ್ಟಿಕೊಂಡಿದ್ದ ಸೀರೆಯೇ ಬಾಲಕನಿಗೆ ಮೃತ್ಯುವಾಗಿ ಪರಿಣಮಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

loader