ಹುಬ್ಬಳ್ಳಿ(ಫೆ.07): ದೇಶಪಾಂಡೆ ಫೌಂಡೇಶನ್‌ ವತಿಯಿಂದ ಫೆ. 11ರಂದು ಆಯೋಜಿಸಲಾದ ವೆಬಿನಾರ್‌ನಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್‌ ಪಾಲ್ಗೊಳ್ಳಲಿದ್ದಾರೆ.

ಅವರು ಗ್ರಾಮೀಣಾಭಿವೃದ್ಧಿಗಾಗಿ ಜನರ ಚಳವಳಿ ಎಂಬ ವಿಷಯದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ್‌ ಪವಾರ್‌ ಮಾಹಿತಿ ನೀಡಿದ್ದಾರೆ. ಫೆ. 11ರಂದು ಸಂಜೆ 6 ಗಂಟೆಗೆ ವೆಬಿನಾರ್‌ ನಡೆಯಲಿದೆ. 

ಹುಬ್ಬಳ್ಳಿ: ಮೂರುಸಾವಿರ ಮಠದ ಗೊಂದಲ, ಶೀಘ್ರದಲ್ಲೇ ಲಿಂಗಾಯತ ಮುಖಂಡರ ಸಭೆ

ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ. ಗುರುರಾಜ್‌ ದೇಶಪಾಂಡೆ, ಪಾನಿ ಫೌಂಡೇಶನ್‌ ಸಹ-ಸಂಸ್ಥಾಪಕ ಅಮೀರ್‌ ಖಾನ್‌ ಮತ್ತು ಅವರ ಪತ್ನಿ ಕಿರಣ್‌ ರಾವ್‌ ಮತ್ತು ಪಾನಿ ಪ್ರತಿಷ್ಠಾನದ ಸಿಇಒ ಸತ್ಯಜಿತ್‌ ಭಟ್ಕಲ್‌ ಅವರು ವೆಬಿನಾರ್‌ನ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. 

ವೆಬಿನಾರ್‌ನಲ್ಲಿ ಪಾಲ್ಗೊಳ್ಳಲು ಆಸಕ್ತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಝೂಮ್‌ ಲಿಂಕ್‌ ಕಳುಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೇವಕಿ ಪುರೋಹಿತ್‌ 9623468822ಗೆ ಸಂಪರ್ಕಿಸಬಹುದು ಎಂದು ದೇಶಪಾಂಡೆ ಫೌಂಡೇಶನ್‌ ಸಿಇಒ ವಿವೇಕ್‌ ಪವಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.