ಅಥಣಿ [ಆ.17]:  ದಿನವೂ ಬೋಟ್‌ ನಡೆ​ಸಿಯೇ ಹೊಟ್ಟೆತುಂಬಿ​ಕೊ​ಳ್ಳುವ ಅಂಬಿ​ಗ​ರಿ​ಬ್ಬರು ಕೃಷ್ಣಾ ಪ್ರವಾ​ಹ​ದಲ್ಲಿ ಸಿಲು​ಕಿದ್ದ ಸುಮಾರು 300 ಜನರನ್ನು ರಕ್ಷಿಸುವ ಜೊತೆಗೆ ಕೊಚ್ಚಿ ಹೋಗುತ್ತಿದ್ದ ನೂರಾರು ಜಾನುವಾರಗಳನ್ನು ಬೋಟ್‌ ಮೂಲಕ ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ನಾವಿಕರಾದ ತಂದೆ ರಾವ​ಸಾಬ ಅಂಬಿ ಮತ್ತು ಇವರ ಮಗ ಧನಂಜಯ ಅಂಬಿ ಜೀವದ ಹಂತು ತೊರೆದು ಜನ, ಜಾನುವಾರುಗಳನ್ನು ರಕ್ಷಿಸಿದವರು.

ಖೇಮಲಾಪುರ ಮತ್ತು ಕೃಷ್ಣಾ ಕಿತ್ತೂರ ಗ್ರಾಮದ ಸಂಪರ್ಕ ಸೇತುವೆಯಂತೆ ಇ​ವರು ದಿನವೂ ಬೋಟ್‌ ನಡೆ​ಸು​ತ್ತಿ​ದ್ದಾರೆ. ಈ ಅಂಬಿ​ಗರ ರಕ್ಷಣಾ ಕಾರ್ಯ​ ಮೆ​ಚ್ಚಿದ ಇಡೀ ಗ್ರಾಮವೇ ಸಲಾಮ್‌ ಹೊಡೆ​ಯು​ತ್ತಿದ್ದರೆ, ಇವ​ರ ಸಹಾ​ಯ​ದಿಂದ ಬದು​ಕು​ಳಿ​ದ​ ಸಂತ್ರ​ಸ್ತರಂತೂ ಇವ​ರನ್ನು ನಮ್ಮ ಪಾಲಿನ ದೇವರು ಎನ್ನುತ್ತಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಚೆಗೆ ಮಹಾ​ರಾ​ಷ್ಟ್ರ​ದಲ್ಲಿನ ವಿಪ​ರೀತ ಮಳೆ ಹಾಗೂ ಅಲ್ಲಿನ ಜಲಾ​ಶ​ಯ​ಗ​ಳಿಂದ ಬಿಟ್ಟಅಪಾರ ಪ್ರಮಾಣದ ನೀರಿ​ನಿಂದಾಗಿ ಕಾಗವಾಡ ತಾಲೂ​ಕಿನ ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ಅನೇಕ ಕುಟಂಬಗಳು ಹಾಗೂ ಜಾನು​ವಾ​ರು​ಗಳು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವು. ಇದ​ನ್ನ​ರಿತ ನಾವಿ​ಕ​ರು ತಮ್ಮ ಪ್ರಾಣದ ಹಂಗು​ಬಿಟ್ಟು ಹಗಲು ರಾತ್ರಿ ಎನ್ನದೆ ಬೋಟ್‌ ಕಾರ್ಯಾ​ಚ​ರಣೆ ನಡೆ​ಸಿದ್ದಾರೆ.